ಗಿಡಮರಗಳಿಂದ ಮನುಷ್ಯನು ಕಲಿಯುವುದು ಬಹಳಷ್ಟಿದೆ
ನಾವು ಮನುಷ್ಯನಿಂದ ಕಲಿಯುವುದಕ್ಕಿಂದ ಗಿಡ ಮರ ಬಳ್ಳಿಗಳಿಂದ,ಪ್ರಾಣಿಪಕ್ಷಿಗಳಿಂದ ಕಲಿಯುವುದು ಬಹಳ ಇದೆ. ಹೀಗೆಯೇ ಒಂದು ಉಪನ್ಯಾಸವನ್ನು ಕೇಳ್ತಾ ಇದ್ದೆ. ಒಬ್ಬ ಸ್ವಾಮೀಜಿ ಒಂದು ಶ್ಲೋಕವನ್ನು ಹೇಳಿ ಹಿಂದಿಯಲ್ಲಿ ಅದರ ವಿವರಣೆ ಕೊಟ್ಟರು. ನಾನು ಎಷ್ಟು ಗ್ರಹಿಸಲು ಸಾಧ್ಯವಾಯ್ತೋ ಅಷ್ಟನ್ನು ಇಲ್ಲಿ ಬರೆದಿರುವೆ.................ರಸ್ತೆ ಬದಿಯಲ್ಲಿ, ಕಾಡುಮೇಡುಗಳಲ್ಲಿ ಬೆಳೆದಿರುವ ಹುಲ್ಲನ್ನು ನಾವು ನೋಡುತ್ತೇವೆ. ಅದೆಷ್ಟು ಜಾನವಾರುಗಳಿಗೆ ಅದು ಆಹಾರವಾಗಿರುತ್ತೋ....ಆದರೆ ಸಾಮಾನ್ಯವಾಗಿ ಜನ ಜಾನುವಾರುಗಳೆಲ್ಲಾ ದಟ್ಟವಾಗಿ ಬೆಳೆದಿರುವ ಹುಲ್ಲಿನ ಮೇಲೆ ಅದನ್ನು ಲೆಕ್ಖಿಸದೆ ತುಳಿದುಕೊಂಡು ಹೋಗುವುದು ಸಾಮಾನ್ಯ ಸಂಗತಿ. ಬುದ್ಧಿ ಇರುವ ಮನುಷ್ಯನಿಗೂ ಕೂಡ ಅದು ತಪ್ಪೆನಿಸುವುದಿಲ್ಲ. ನಾವು ಕಾಲಿನಿಂದ ತುಳಿದಾಗ ಭೂಮಿಗೆ ಬಾಗುವ ಹುಲ್ಲು ಸ್ವಲ್ಪ ಸಮಯದಲ್ಲಿ ಮತ್ತೆ ಮೈ ಚಾಚಿ ನಿಲ್ಲುತ್ತವೆ. ತನ್ನನ್ನು ತುಳಿದವರ ಬಗ್ಗೆ ಹುಲ್ಲಿಗೆ ಏನೂ ಅನ್ನಿಸುವುದೇ ಇಲ್ಲ. ಅದರ ಸಹನೆಗೆ ಮಿತಿಯೇ ಇಲ್ಲ. ಕ್ಷಮಯಾ ದರಿತ್ರೀ ಎನ್ನುವ ಮಾತು ಕೇಳಿದ್ದೇವೆ. ಕ್ಷಮಾಗುಣದಲ್ಲಿ ಭೂಮಿ ಒಂದು ದೊಡ್ದ ಉಧಾಹರಣೆ. ಹುಲ್ಲು ಕೂಡ ಹಾಗೆಯೇ ತನ್ನನ್ನು ತುಳಿದವರನ್ನು ಕ್ಷಮಿಸಿ ಬಿಡುತ್ತದೆ.
ಮರವಂತೂ ಇನ್ನೂ ದೊಡ್ಡ ಉಧಾಹರಣೆ. ಬಿಸಿಲಿನ ತಾಪಕ್ಕೆ ಮೈ ಒಡ್ಡುವ ಮರವು ಅದನ್ನು ಹೀರಿಕೊಂಡು ನಮಗೆಲ್ಲಾನೆರಳನ್ನು ಕೊಡುತ್ತದೆ. ಭೂಮಿಯನ್ನು ತಂಪಾಗಿಡುತ್ತದೆ. ಮರಗಳಿಲ್ಲದಿದ್ದರೆ ಆ ಪ್ರದೇಶದ ಉಷ್ಣಾಂಶವು ಹೆಚ್ಚುತ್ತದೆ. ಮಳೆ ಕಮ್ಮಿಯಾಗುತ್ತದೆ. ಮರದಲ್ಲಿ ಬಿಟ್ಟ ಹಣ್ಣು ಅದೆಷ್ಟು ಪಕ್ಶಿಗಳಿಗೆ ಆಹಾರವಾಗುತ್ತದೋ, ಮನುಷ್ಯನೂ ಹಣ್ಣಿನ ಸವಿಯನ್ನು ಸವಿಯುತ್ತಾನೆ..........ಇಷ್ಟೆಲ್ಲಾ ಉಪಯೋಗಿಯಾದ ಮರವನ್ನು ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಕರುಣೆಯಿಲ್ಲದ ಮನುಷ್ಯನು ಕೊಯ್ದು ಬಿಡುತ್ತಾನೆ. ಆಗಲೂ ಸತ್ತ ಮರವೂ ಕೂಡ ಮನುಷ್ಯನಿಗೆ ಹಲವು ರೀತಿಯ ಉಪಯೋಗಕ್ಕೆ ಒದಗುತ್ತದೆ. ..........
ತನಕೆ ತೊಂದರೆ ಮಾಡಿದವರನ್ನೂ ಸಹಿಸಿ ಅವರಿಗೆ ನೆರವಾಗುವ ಈ ಮರದ ಗುಣ ಹಾಗೂ ಹುಲ್ಲಿನ ಗುಣ........ನಮಗೆ ಆದರ್ಶವಾಗಬೇಕಲ್ಲವೇ?
Comments
ಉ: ಗಿಡಮರಗಳಿಂದ ಮನುಷ್ಯನು ಕಲಿಯುವುದು ಬಹಳಷ್ಟಿದೆ
ಉ: ಗಿಡಮರಗಳಿಂದ ಮನುಷ್ಯನು ಕಲಿಯುವುದು ಬಹಳಷ್ಟಿದೆ