ಸ್ವಾತಂತ್ರ್ಯಕ್ಕೆ ಅರ್ಥ ಇದೆಯೇ?
ಮುಸ್ಲಿಮರಿಗಿರುವ 4.5% ಮೀಸಲಾತಿಯನ್ನು ರದ್ದು ಪಡಿಸಿರುವ ಆಂದ್ರ ಹೈಕೋರ್ಟ್ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ತರಾಟೆಗೆ ತೆಗುಕೊಂಡಿದೆ ಎಂಬುದು ಸುದ್ಧಿ. ನಮ್ಮ ದೇಶಕ್ಕೆ ಸ್ವಾತಂತ್ಯ್ರ ಬಂದು ಆರು ದಶಕಗಳು ಕಳೆದರೂ ಇನ್ನೂ ದಾರಿದ್ರ್ಯ ಇದೆ, ಬಡತನ ಇದೆ, ಅನಕ್ಷರತೆ ಇದೆ, ಅಸಮಾನತೆ ಇದೆ, ಎಂದರೆ ಸ್ವಾತಂತ್ರ್ಯಕ್ಕೆ ಅರ್ಥ ಇದೆಯೇ? ನಮ್ಮ ಸರ್ಕಾರಗಳು ಮಾಡಿದ್ದೇನು? ಕೇವಲ ಓಟಿನ ರಾಜಕಾರಣ. ಯಾರಿಗೂ ಜನರ ಬಡತನ, ಅನಕ್ಷರತೆ, ಅಜ್ಞಾನ ಹೋಗುವುದು ಬೇಕಿಲ್ಲ. ಅನಕ್ಷರತೆ ತೊಲಗಿ ಬಿಟ್ಟರೆ ದೊಡ್ದವರ ಮನೆಯಲ್ಲಿ ಕೂಲಿ ಮಾಡುವವರು ಯಾರು? ಇದೇ ರಾಜಕಾರಣ. ಎಲ್ಲಾ ರಾಜಕಾರಣಿಗಳದ್ದೂ ಬೊಗಳೆ. ನಿಜವಾಗಿ ನ್ಯಾಯಾಲಯಗಳಿಗೆ ಇದು ಸೂಕ್ತವಾದ ಕಾಲ. ಸರ್ಕಾರ ಗಳನ್ನು ತರಾಟೆಗೆ ತೆಗೆದುಕೊಂಡು ನಮ್ಮ ಸಂವಿಧಾನ ದತ್ತವಾದ ಅನುಕೂಲಗಳನ್ನು ಎಲ್ಲರಿಗೂ ಮುಟ್ಟಿಸಲು ಸಾಧ್ಯವಾಗಿಲ್ಲ, ಏಕೆ? ಎಂದು ತರಾಟೆಗೆ ತೆಗೆದುಕೊಳ್ಳಬೇಕು. ವಿದ್ಯೆ ಉಳ್ಳವರು ತಮ್ಮ ವಿದ್ಯೆಯನ್ನು ನಿಜವಾದ ಅರ್ಥದಲ್ಲಿ ಸಮಾಜದ ಉನ್ನತಿಗೆ ಬಳಸಬೇಕು. ಆರು ದಶಕಗಳಲ್ಲಿ ಕೇವಲ 25% ಉದ್ಧಾರವೂ ಆಗಿಲ್ಲವಲ್ಲಾ! ಇನ್ನೂ ಮಲ ಹೊರುವವರು, ದೊಡ್ಡವರ ತೀಟೆಗೆ ಅನೈತಿಕವಾಗಿ ಮಗು ಹೆರುವವರು, ಎಲ್ಲವೂ ನಡೆದೇ ಇದೆ. ಸಾಮಾನ್ಯ ಜನರಿಗೆ ಮಾತ್ರ ಕಾನೂನು. ರಾಜಕಾರಣಿಗಳು ಅನೈತಿಕವಾಗಿ ದೇಶವನ್ನು ಲೂಟಿ ಮಾಡುತ್ತಿರುವುದು, ತನಿಕೆ ನಡೆಯುತ್ತಿರುವುದು , ಬ್ರಷ್ಟರಾಜಕಾರಣಿಗಳು ನಾಚಿಕೆ ಇಲ್ಲದೆ ಮಾಧ್ಯಮದಲ್ಲಿ ಪೋಸ್ ಕೊಡುವುದು, ಎಲ್ಲವನ್ನೂ ನೋಡುತ್ತಿದ್ದರೆ ಅಸಹ್ಯವಾಗುತ್ತದೆ. ಜನರಂತೂ ಜಾಗೃತರಾಗಿಲ್ಲ. ಕೋರ್ಟ್ ಗೆ ಅವಕಾಶವಿದೆ. ಮಧ್ಯ ಪ್ರವೇಶಿಸಿ ಬ್ರಷ್ಟರನ್ನು ಬಲಿಹಾಕಿ ದೇಶವನ್ನು ಉಳಿಸಬೇಕು. ಆಗ ಯಾವ ಮೀಸಲಾತಿಯೂ ಬೇಡ. ಬ್ರಷ್ಟರು ಲೂಟಿ ಹೊಡೆದಿರುವ ಸಂಪತ್ತನ್ನು ಮುಟ್ಟುಗೋಲು ಹಾಕಿ ಕೊಂಡರೆ ದೇಶದ ಎಲ್ಲಾ ಸಮಸ್ಯೆಗಳನ್ನೂ ಮೂರ್ನಾಲ್ಕು ವರ್ಷಗಳಲ್ಲಿಯೇ ಸರಿಪಡಿಸಬಹುದು. ಯಾವ ಆಂಧೋಳನಗಳು ಶುರುವಾದರೂ ಅದರಲ್ಲೂ ಬ್ರಷ್ಟರು ನುಸುಳುತ್ತಿದ್ದಾರೆ. ಬೇರೆ ದಾರಿಯೇ ಇಲ್ಲ. ಕೋರ್ಟ್ ಬ್ರಹ್ಮಾಸ್ತ್ರವನ್ನು ತನ್ನ ಕೈಗೆ ತೆಗೆದುಕೊಳ್ಳಬೇಕು.
Comments
ಉ: ಸ್ವಾತಂತ್ರ್ಯಕ್ಕೆ ಅರ್ಥ ಇದೆಯೇ?
In reply to ಉ: ಸ್ವಾತಂತ್ರ್ಯಕ್ಕೆ ಅರ್ಥ ಇದೆಯೇ? by kavinagaraj
ಉ: ಸ್ವಾತಂತ್ರ್ಯಕ್ಕೆ ಅರ್ಥ ಇದೆಯೇ?
In reply to ಉ: ಸ್ವಾತಂತ್ರ್ಯಕ್ಕೆ ಅರ್ಥ ಇದೆಯೇ? by hariharapurasridhar
ಉ: ಸ್ವಾತಂತ್ರ್ಯಕ್ಕೆ ಅರ್ಥ ಇದೆಯೇ?