ಶಾಲೆಗೆ ಬನ್ನಿ ಮಕ್ಕಳೆ

ಶಾಲೆಗೆ ಬನ್ನಿ ಮಕ್ಕಳೆ

ಕವನ

ಶಾಲೆಗೆ ಬನ್ನಿ ಮಕ್ಕಳೆ

ಬನ್ನಿರಿ ಮಕ್ಕಳೆ ಶಾಲೆಗೆ | 
ನೀವೆಲ್ಲರು ಅಕ್ಷರ ಲೋಕಕೆ ||
ಅಕ್ಕರೆ ಸ್ವಾಗತ ನಿಮಗೆ |
ನೂತನ ತರಗತಿಗಳಿಗೆ ||ಪ||

ಕಲಿಕೆಯ ಲವಲವಿಕೆಗಳು |
ಬೇಕಿದೆ ವ್ಯಕ್ತಿತ್ವದೊಳು ||
ಬೆಳವಣಿಗೆಯಲದ ಗಳಿಸಿ |
 ಉಳಿಸುತ ತನ ಬೆಳಗಿಸಿರಿ ||೧||


ಜ್ಞಾನದ ಅರಿವಿರಬೇಕು |
ವಿಜ್ಞಾನವ ತಿಳಿದಿರಬೇಕು ||
ಭಾಷೆಗಳೆಲ್ಲವು ಬೇಕು |
ಲೆಕ್ಕವು ಬೇಕೇಬೇಕು ||೨||


ಅಂತರ ಸರಿದೂಗಿಸಲು |
ಅತಂತ್ರತೆಯನು ತೊಲಗಿಸಲು ||
ಸ್ವಾತಂತ್ರ್ಯವ ಮೊಳಗಿಸಲು |
 ಜಗದಲಿ ಕಾಣಿಸಿಕೊಳಲು ||೩|| 

 
                                                                                  - ಸದಾನಂದ