ಕತೆ ಹೇಳುತ್ತಾರೆ ... ಮನಗಳನ್ನು ಬಿಚ್ಚಿಡುತ್ತಾರೆ!

ಕತೆ ಹೇಳುತ್ತಾರೆ ... ಮನಗಳನ್ನು ಬಿಚ್ಚಿಡುತ್ತಾರೆ!

ಕತೆ ಹೇಳುತ್ತಾರೆ ... ಮನಗಳನ್ನು ಬಿಚ್ಚಿಡುತ್ತಾರೆ!


ಕತೆ ಹೇಳುತ್ತಾರೆ, ತಮ್ಮ ಮುಂದೆ ಕೂರಿಸಿಕೊಂಡು ತಮ್ಮ ಮನಗಳನ್ನು ಬಿಚ್ಚಿಡುತ್ತಾರೆ
ಕಂಡವಂತೆಯೇ, ಬರೇ ಕೇಳಿದವರೂ ಅಷ್ಟೇ ಕರೆಮಾಡಿ ಮನದೊಳಗಿಳಿದುಬಿಡುತ್ತಾರೆ

ಕೇಳಿದ ಕತೆಗಳಿಗೆ ಲೆಕ್ಕವಿಟ್ಟಿಲ್ಲ, ಇಟ್ಟಿದ್ದರೂ ಬಹುಷಃ ಲೆಕ್ಕಕ್ಕೆ ಸಿಗಲಾರದಷ್ಟು ಕತೆಗಳು
ಬರಹಗಾರನೀತ, ಬಹಿರಂಗಗೊಳಿಸಬಹುದು ಎನ್ನುವ ಅಳುಕಿಲ್ಲದ ಆತ್ಮೀಯರ ಕತೆಗಳು

ಎಲ್ಲರ ಕತೆಗಳೂ ನೆನಪಿವೆ, ಒಮ್ಮೊಮ್ಮೆ ಮನಪಟಲದ ಮೇಲೆ ಮೆರವಣಿಗೆ ನಡೆಸುತ್ತವೆ
ಒಮ್ಮೊಮ್ಮೆ ನನ್ನ ಅರ್ಹತೆಯೇನೆಂದು ನನ್ನನ್ನೇ ನಾನು ಪ್ರಶ್ನಿಸಿಕೊಂಬಂತೆ ಮಾಡುತ್ತವೆ

ಬರೆಯಲು ಕೂತರೆ ಒಬ್ಬೊಬ್ಬರದೂ ಒಂದೊಂದು ಕಾದಂಬರಿಯಾಗಿ ಹೊಮ್ಮಬಹುದು
ಬರೆದರೆ ನನ್ನವರೆಲ್ಲರ ಖಾಸಗಿ ವಿಷಯಗಳು ಅನಾವರಣಗೊಂಡು ನೋವಾಗಬಹುದು

ನಮ್ಮೆಲ್ಲಾ ನಿರ್ಧಾರಗಳನ್ನೂ ಸಕಾಲದಲ್ಲಿ ಸಕಾರಣಗಳೊಂದಿಗೇ ತೆಗೆದುಕೊಂಡರೆ ಚೆನ್ನ
ತರಾತುರಿಯಲ್ಲಿ ಎಲ್ಲವನ್ನೂ ಬಿಚ್ಚಿಟ್ಟರೆ, ಎಲ್ಲರೊಂದಿಗೆ ನಾನನಿಸಿಕೊಳ್ಳಬಹುದು ಕೃತಘ್ನ!
*****************************************************

Rating
No votes yet

Comments