ನರ ರಾಕ್ಷಸರಿವರು...
ನರರಾಕ್ಷಸರಿವರು...!
ಪುರಾಣ ಕಾಲದಲ್ಲಿ ರಾಕ್ಷಸರು ಇದ್ದರಂತೆ ಅವರು ಮನುಷ್ಯರನ್ನು ಕೊಂದು ತಿನ್ನುತ್ತಿದ್ದರಂತೆ ಎಂದು ಕೇಳಿದ್ದೇವೆ.ಅವರಿಗೆ ಕೋರೆ ಹಲ್ಲು ವಿಚಿತ್ರ ಮುಖ ದೈತ್ಯ ದೇಹಿಗಳು ಇರುತ್ತವೆ ಅವರು ರಾಕ್ಷಸರು ಎಂದು ತಿಳಿದಿದ್ದೇವೆ.ಇಂದು ನರರೂಪಿ ರಾಕ್ಷಸರ ಬಗ್ಗೆ ತಿಳಿಸುತ್ತೇನೆ ಕೇಳಿ.
ಇತ್ತೀಚಿಗೆ ಹದಿನೈದಿಪ್ಪತ್ತು ದಿನಗಳ ಹಿಂದೆ ಶಾಲಾ ಮಕ್ಕಳಿಗೆ ಅಪಘಾತ ಮಾಡಿದ ಜೀಪ್ ಡ್ರೈವರ್.ಆ ಮಕ್ಕಳು ಸತ್ತು ಹೋದವು.ಅಲ್ಲಿಯೇ ಇದ್ದ ನರರಾಕ್ಷಸರು ಆತನ ಜೀಪ್ ಗೆ ಬೆಂಕಿ ಹಚ್ಚಿ ಚಾಲಕನಿಗೆ ಥಳಿಸಿದ್ದಾರೆ ಅಷ್ಟೇ ಅಲ್ಲ ಆ ಉರಿಯುತಿದ್ದ ಬೆಂಕಿಗೆ ಚಾಲಕನನ್ನು ದೂಡಿದ್ದಾರೆ.ಆಕಸ್ಮಾತ್ ತಪ್ಪಿನಿಂದಾಗಿ ಆತ ತನ್ನ ಜೀವವನ್ನೇ ಬಲಿ ಕೊಡಬೇಕಾಯಿತು.ಅದು ರೌರವ ನರಕಸದೃಶವಾಗಿ. ಅಲ್ಲಿದ್ದ ಜನರು ಆತನನ್ನು ರಕ್ಷಿಸಬಹುದಾಗಿದ್ದರು ಸುಮ್ಮನಿದ್ದರು.ಇವರೆಲ್ಲಾ ಆ ಪುರಾಣ ಕಾಲದ ರಾಕ್ಷಸ ಸಂತಾನವೇ ಇರಬೇಕು.ಥೂ ಎಂತಾ ಕೆಟ್ಟ ಜನ ಅವರು.
ಕರುನಾಡು ಸಹೃದಯಿ ಕನ್ನಡಿಗರ ನಾಡು.ಪ್ರೀತಿಗಾಗಿ ಪ್ರಾಣ ಕೊಡೋ ಜನರು.ಚಲನ ಚಿತ್ರಗಳಲ್ಲಿ ಹಾಡಿ ಹೊಗಳುತ್ತಾರೆ.ಆದರೆ ನಿಜವಾಗಿಯು?
ಯಾರೋ ಒಬ್ಬ ಕಳ್ಳನನ್ನು ನಾಯಿಯಂತೆ ಕಟ್ಟಿಹಾಕಿ ರಾತ್ರಿಯೆಲ್ಲಾ ಬಿಟ್ಟಿದ್ದಾರೆ.ಚೆನ್ನಾಗಿ ಹೊಡೆದಿದ್ದಾರೆ.ಕಳ್ಳನೆಂದ ಮೇಲೆ ಹೊಡೆದು ಪೋಲೀಸ್ ಗೆ ಒಪ್ಪಿಸೋದು ಬಿಟ್ಟು ತಾವೇ ಥಳಿಸಿ ಅಮಾನುಷವಾಗಿ ಹಿಂಸಿಸಿದ್ದಾರೆ ದುರ್ಜನರು.ಇದು ನೆಡೆದದ್ದು ಹಾಸನ ಸಮೀಪದ ಒಂದು ಹಳ್ಳಿಯಲ್ಲಿ.
ಆರಕ್ಷಕ ಎಂದರೇ ಪೊಲೀಸ್.
ಕಳ್ಳತನದ ಆರೋಪದ ಮೇಲೆ 15ವರ್ಷದ ಬಾಲಕನೊಬ್ಬನನ್ನು ಈ ಪೋಲೀಸ್ ಮಹಾಶಾಯ ತನ್ನ ಲಾಠಿಯಿಂದ ಆ ಹುಡುಗನ ಕೈ ಚಾಚಿಸಿ ಹೊಡೆಯುತಿದ್ದ.ಇದೇನಾ ಕಾನೂನು.
ಈ ಹಿಂದೆ ಬಿಹಾರದಲ್ಲಿ ಒಬ್ಬ ಕಳ್ಳನನ್ನು ಒಬ್ಬ ಪೋಲೀಸ್ ಬೈಕಿಗೆ ಕಟ್ಟಿಕೊಂಡು ಎಳೆದುಕೊಂಡು ಹೋದದ್ದು ತೋರಿಸಿದ್ದರು.ಇಂತಹ ಮಹಾ ಪುರುಷ ಪೋಲೀಸಪ್ಪನನ್ನು ನೇಣಿಗಲ್ಲ ಅನ್ನ ನೀರು ಕೊಡದೆ ಸಾಹಿಸಿದರು ಪಾಪ ಬರುವುದಿಲ್ಲ.
ಇಷ್ಟೆಲ್ಲಾ ಆದಮೇಲೆ ಕರುನಾಡಿನಲ್ಲಿರುವ ಕೆಲ ರಾಕ್ಷಸರ ಬಗ್ಗೆ ಹೇಳಲೇಬೇಕು.ಅವರ್ಯಾರೆಂದರೆ ಚಿಂತಾಮಣಿ ತಾಲೂಕಿನ ಯಾವುದೋ ವಿಶ್ವವಿಖ್ಯಾತ ಹಳ್ಳಿ(ಘಟನೆ ನೆಡೆದಮೇಲೆ)ಆ ಊರಿನ ಹೆಸರು ಹೇಳಲು ಅಸಹ್ಯವಾಗುತ್ತದೆ.ಅಲ್ಲಿನ 21ನೇ ಶತಮಾನದ ಅಸುರರು 15 ಜನ ಯುವಕರನ್ನು ಕಲ್ಲಿನಿಂದ ಹೊಡೆದು ಸಾಹಿಸಿದ್ದಾರೆ.ಅದಕ್ಕೆ ಕಾರಣ ಆ ಊರಿನಲ್ಲಿ ಪದೇ ಪದೇ ಕಳ್ಳತನವಾಗುತಿತ್ತಂತೆ.ಬೇಸತ್ತ ಜನ ಪೋಲಿಸವರಿಗೆ ದೂರು ಕೊಟ್ಟರು ಪ್ರಯೋಜನವಾಗಿಲ್ಲ.ಅದೊಂದು ದಿನ 15 ಜನ ಯುವಕರ ಗುಂಪೊಂದು ಟಾಟಾ ಸುಮೋದಲ್ಲಿ ಈ ಮಹಾನ್ ಪುರುಷರು ವಾಸವಿರುವ ಊರಿನ ಬಳಿ ಗಾಡಿ ನಿಲ್ಲಿಸಿ ಇಸ್ಪಿಟ್ ಆಡುತಿದ್ದಾರೆ.ಆ ಊರಿನ ಕೆಲವರು ವಿಚಾರಿಸಿದಾಗ ಸರಿಯಾಗಿ ಉತ್ತರಿಸಿಲ್ಲ.ಅಷ್ಟಕ್ಕೆ ಕಳ್ಳರೆಂದು ಭಾವಿಸಿದ ಜನ ಅವರ ಕೈಗೆ ಸಿಕ್ಕ ಕೆಲವರನ್ನ ಚೆನ್ನಾಗಿ ಹೊಡೆದು ಸಾಹಿಸಿದ್ದಾರೆ.ತಪ್ಪಿಸಿಕೊಂಡ ಉಳಿದವರನ್ನ ಅಡ್ಡಗಟ್ಟಲು ಮುಂದಿನ ಊರಿನವರಿಗೆ ಸುದ್ದಿ ಮುಟ್ಟಿಸಿದ್ದಾರೆ.ಅಲ್ಲಿ ಅವರನ್ನು ಹೊಡೆದು ಕಲ್ಲಿನಿಂದ ಹೊಡೆದಿದ್ದಾರೆ.ಅವರೆಲ್ಲ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಅವನ್ಯಾವನೋ ಒಬ್ಬ ದೊಡ್ಡ ಗಂಡಸು ಮತ್ತೆ ಮತ್ತೆ ಕಲ್ಲಿನಿಂದ ಹೊಡೆಯುತಿದ್ದಾನೆ.ಈ ದೃಶ್ಯ ಟಿವಿಯಲ್ಲಿ ನೋಡಿ ಮನಕಲಕುವಂತಿತ್ತು.ಈ ದೃಶ್ಯ ನೀವು ನೋಡಿರಬಹುದು ಟಿವಿಗಳಲ್ಲಿ.ಆ ಸಂದರ್ಭದಲ್ಲಿ ಕರ್ನಾಟಕದ ಹೊಲಸು ರಾಜಕಾರಣದ ಗದ್ದಲ ವಾಗಿ ಸಾಮಾಜಿಕ ಜವಬ್ದಾರಿ ಹೊತ್ತ ಮಾಧ್ಯಮಗಳು ಗಬ್ಬೆದ್ದು ನಾರುತಿದ್ದ ರಾಜಕೀಯ ಚಿತ್ರಣ ತೋರಿಸಿದರು ಹೆಚ್ಚಾಗಿ ವಿನಃ ಈ ಅಮಾನವೀಯ ಕೃತ್ಯವನ್ನು ಹೆಚ್ಚು ಬಿಂಬಿಸಲೇ ಇಲ್ಲ....ಕಡ್ಡಿಯನ್ನು ಗುಡ್ಡ ಮಾಡುವ ಈ ಮಾಧ್ಯಮಗಳಿಗೆ ಆ ಸಮಯದಲ್ಲಿ ಭರಪೂರ ರಾಜಕೀಯ ವಿದ್ಯಮಾನಗಳೇ ಸಿಕ್ಕಿದ್ದರಿಂದ ಪಾಪ ಈ ಸುದ್ದಿ ಪ್ರಸಾರ ಮಾಡಲು ಸಮಯ ಸಿಕ್ಕಲಿಲ್ಲವೇನೋ...
ಸದ್ಯಕ್ಕೆ ಆ ಹತ್ಯೆಯಲ್ಲಿ ಇಡೀ ಊರೇ ಸಾಕ್ಷಿಯಾಗಿದ್ದರು ಜಾಮೀನಿನ ಮೇಲೆ ಆಚೆ ಇದ್ದಾರೆ....ಕೆಲವರು ಖುಲಾಸೆಯಾದರೆಂಬ ಸುದ್ದಿ ಕೇಳಿದಂತಿದೆ.ಒಟ್ಟಿನಲ್ಲಿ ಶತಮಾನ ಕಂಡರಿಯದ ಈ ದುರಂತ ಬೆಚ್ಚಿ ಬೀಳಿಸುವಂತದ್ದು....
ಕಾನೂನನ್ನು ಕೈಗೆ ತೆಗೆದುಕೊಂಡ ಅಲ್ಲಲ್ಲ ತಲೆಮೇಲೆ ಇಟ್ಟುಕೊಂಡ ಆ ಹಂತಕರಿಗೆ ಶಿಕ್ಷೆಯಾಗಲಿ ಎಂಬುದೇ ನಮ್ಮ ಆಶಯ.
ಇನ್ನೊಂದು ವಿಚಾರವೇನೆಂದರೆ ಅವರು ಕಳ್ಳರಲ್ಲ ದುಡಿಮೆಗಾಗಿ ಬಂದಿದ್ದವರು ಎಂದು ತಿಳಿದದ್ದು.ಇದಕ್ಕಿಂತ ವಿಪರ್ಯಾಸ ಇನ್ನೇನಿದೆ...