ಮನವನು ಕದ್ದವಳು

ಮನವನು ಕದ್ದವಳು

ನಿನಗಿಂತಲೂ ಚೆಲುವೆ,
ನನ್ನ ಮನವನು ಕದ್ದ ಕೋಮಲೆ ಅವಳು;
ನಿನಗಿಂತಲೂ ಚೆಲುವೆ.

ಹುಬ್ಬಿಗೆ ಕಾಡಿಗೆ ಪೂಸದೆ ಇದ್ದರೂ
ಕಣ್ಣಲ್ಲೇ ನುಡಿವವಳು
ನಾಲಗೆ ನುಡಿಯದ ಮಾತುಗಳೆಲ್ಲವ
ತನ್ನ ಕಣ್ಣಲ್ಲೇ ನುಡಿವವಳು
ನನ್ನ ಮನವನು ಕದ್ದ ಕೋಮಲೆ ಅವಳು;
ನಿನಗಿಂತಲೂ ಚೆಲುವೆ.

ಚಂದಿರನೊಡಲಿನ ಕಾಂತಿಯವಳದಲ್ಲ
ಬಂಗಾರದಂಥವಳು
ಮೈಬಣ್ಣದ ಭ್ರಾಂತಿಗೆ ಸೋಲದೆ ಇದ್ದರೂ
ಮನಸ್ಸಿಂದ ಬಂಗಾರದಂಥವಳು
ನನ್ನ ಮನವನು ಕದ್ದ ಕೋಮಲೆ ಅವಳು;
ನಿನಗಿಂತಲೂ ಚೆಲುವೆ.

ಮಾತುಗಳಾಡುತ್ತ ಮೈಮರೆವವಳಲ್ಲ
ಮಾತನ್ನು ಅರಿತವಳು
ಮಿತಿಯರಿಯದೆ ಆಡದೆ ಇದ್ದರೂ
ಮಾತಿನ ಹಿತವನ್ನು ಅರಿತವಳು
ನನ್ನ ಮನವನು ಕದ್ದ ಕೋಮಲೆ ಅವಳು;
ನಿನಗಿಂತಲೂ ಚೆಲುವೆ.

ನಾ ನುಡಿಯದೆ ಇದ್ದರೂ ಮನಸ್ಸಿನ ಮಾತನು
ತಾನಾಗಿ ಅರಿವವಳು
ತಾನಾಡದ ಮಾತೊಂದನೂ ಉಳಿಸದೆ ಇದ್ದರೂ
ಎಲ್ಲವ ತಾನಾಗಿ ಅರಿವವಳು
ನನ್ನ ಮನವನು ಕದ್ದ ಕೋಮಲೆ ಅವಳು;
ನಿನಗಿಂತಲೂ ಚೆಲುವೆ.

Rating
No votes yet

Comments