ನೆನಪುಗಳ ಪುಟದಿ0ದ....
ಸವಿ ಸವಿ ನೆನಪು....
ನೆನಪು ಒಂದು:ಆಗ ನನಗೆ 9 ಇಲ್ಲ 10ವಯಸ್ಸು ಇರಬೇಕು ನಾನು ನನ್ನ ಸ್ನೇಹಿತ ಇಬ್ಬರು ಅಡ್ಡಾಡುತಿದ್ದೆವು ಹೀಗೆ ನಾವು ಅಡ್ಡಾಡುವಾಗ ಒಂದು ಮನೆ ಮುಂದೆ ಸೈಕಲ್ ನಿಂತಿದ್ದು ಕಾಣಿಸಿತು ಆಗ ಸಮಯ 12.ದಾಟಿತ್ತು ಹೊರಗೆ ಬಿಸಿಲು ಎಂದು ಯಾರು ಇರದ ಕಾರಣ ನನ್ನ ಸ್ನೇಹಿತ ಹೋಗಿ ಆ ಸೈಕಲ್ ಟೈರ್ ಗಾಳಿಬಿಟ್ಟು ಬಂದ.ಯಾರದೋ ಸೈಕಲ್ ಗಾಳಿ ಬಿಟ್ಟಿದ್ದು ನೆನೆದು ಈಗಲೂ ನಗುಬರುತ್ತದೆ
ನೆನಪು 2: ಆಗ ನಾನು ಹೈಸ್ಕೂಲ್ ಒದುತಿದ್ದೆ ನಾನು ಮತ್ತು ನನ್ನ ಗೆಳೆಯರು ಸೇರಿ ಯಾವುದಾದರು ರಾಗಿ ಹೊಲಕ್ಕೆ ಹೋಗುತಿದ್ದೆವು ಅಲ್ಲಿ ಆಟ ಆಡಿ ನಂತರ ರಾಗಿ ತೆನೆಗಳನ್ನು ಕದ್ದು ಕೊಯ್ದು ಯಾವುದಾದರು ಮರದ ಸಣ್ಣದಾಗಿ ಕೆಳಗೆ ಬೆಂಕಿ ಹಾಕಿಕೊಂಡು ತೆನೆ ಸುಟ್ಟು ಕಾಳು ಬಿಡಿಸಿ ಅದಕ್ಕೆ ಸಕ್ಕರೆ ತಂದು ಮಿಕ್ಸ್ ಮಾಡಿ ತಿನ್ನುವ ಮಜವೇ ಬೇರೆ.ಈಗಲೂ ಬಾಯಲ್ಲಿ ಅದನ್ನು ನೆನೆದರೆ ನೀರೂರುತ್ತದೆ.
ನೆನಪು 3: ಆಗ ಬೇಸಿಗೆಯ ಕಾಲ ನಮಗೆ ಆ ಸೆಕೆಯಲ್ಲಿ ನೀರಿಗಿಳಿಯುವುದೆಂದರೆ ಎಲ್ಲಿಲ್ಲದ ಖುಷಿ ಎಲ್ಲ ಹುಡುಗರು ಸೇರಿ ಊರಿನ ಕೆರೆಗೆ ಬೀಳುತಿದ್ದೆವು ಮನತಣಿಯೋವರೆಗು ಈಜಾಡುತಿದ್ದೆವು ಯಾರಾದರು ದೊಡ್ಡವರು ಬಂದು ಬೈದರೆ ಎದ್ವೋ ಬಿದ್ವೋ ಅಂತ ಅಲ್ಲಿಂದ ಒಡುತಿದ್ದೆವು ಈಜಾಡಿ ಸಾಕಾದ ಮೇಲೆ ಹತ್ತಿರದಲ್ಲಿ ಕಾಣುವ ಮಾವಿನ ಮರದಲ್ಲಿ ಕಾಯಿ ಕದ್ದು ಕೆರೆಯ ಪಕ್ಕದಲ್ಲಿದ್ದ ಆರೆಕಲ್ಲು ಗುಡ್ಡ ಹತ್ತಿ ಕಾಯಿ ಚಚ್ಚಿ ತಿನ್ನುತಿದ್ದ ನೆನಪು ಮರೆಯಲಾಗುವುದಿಲ್ಲ
ನೆನಪು 4: ಆಗ ನನಗೆ ಏಳೆಂಟು ವಯಸ್ಸಿರಬೇಕು ನನಗೆ ನನ್ನ ಸ್ನೇಹಿತನೊಬ್ಬ ನಿದ್ದ.ಅವನು ನನ್ನ ಕ್ಲೋಸ್ ಫ್ರೇಂಡ್ ಅವನ ಮನೆಗೆ ನಾನು ಆಟ ಆಡಲು ಹೋಗುವುದು ಅವನು ನಮ್ಮ ಮನೆಗೆ ಬರುವುದು ಮಾಮೂಲಾಗಿತ್ತು ಆವೊತ್ತೊಂದಿನ ಜಾತ್ರೆಯಲ್ಲಿ ತಂದಿದ್ದ ಹೊಸಕಾರಿನೊಂದಿಗೆ ಆಟವಾಡುತಿದ್ದೆ ಅಲ್ಲಿಗೆ ಬಂದ ಅವನು ನಾನು ಆಟವಾಡುತಿದ್ದ ಆಟಿಕೆಯ ಕಾರನ್ನು ಆತ ನೂಕಿ ಬಿಟ್ಟ ಅದು ಹೋಗಿ ಒಳಚರಂಡಿಯ ಕೆಳಗೆ ಸಿಕ್ಕಿಹಾಕಿಕೊಂಡಿತು ಆನಂತರ ಮನೆಯಲ್ಲಿ ಗೊತ್ತಾಗಿ ಚರಂಡಿ ಕಟ್ಟಿಕೊಂಡು ಬೇಡ ಫಜೀತಿ ಆಗಿನ ಆ ಆಟಾಟೋಪಗಳೆ ಬೇರೆ
ನೆನಪು 5: ನಮ್ಮ ಊರಿನಲ್ಲಿ ಮಲ್ಲೇಶ್ವರ ಬೆಟ್ಟ ಎಂಬ ಶಿವನ ದೇವಾಲಯದ ಬೆಟ್ಟವಿದೆ. ಆ ಬೆಟ್ಟದ ಒಂದು ಬದಿಗೆ ಸಣ್ಣ ಕಟ್ಟೆ ಇದೆ ಆ ಕಟ್ಟೆ ಮೇಲಿನ ಬಂಡೆ ಇಳಿಜಾರಿನಂತೆ ಜಾರುಬಂಡೆ ಇದೆ ಅಲ್ಲಿ ಎಲ್ಲ ಮಕ್ಕಳು ಜಾರೋ ಆಟ ಆಡುತ್ತಾರೆ ಅಲ್ಲಿಗೆ ಆ ಆಟವಾಡಲು ನಾವೆಲ್ಲ ಒಟ್ಟಾಗಿ ಹೋಗುತ್ತಿದ್ದೆವು ಆಮೇಲೆ ಮನೆಗೆ ಬಂದಾಗ ಅಲ್ಲಿಗೆ ಹೋದ ವಿಷಯ ತಿಳಿದು ಹೊದೆ ತಿಂದದ್ದು ಇದೆ.
ಇವಿಷ್ಟು ನೆನಪಿಗೆ ಬಂದ ಬಾಲ್ಯದ ನೆನಪುಗಳು.ನೀವು ನಿಮ್ಮ ನೆನಪುಗಳನ್ನು ಸಂಪದದಲ್ಲಿ ಹಂಚಿಕೊಳ್ಳಿ.....
Rating
Comments
ಉ: ನೆನಪುಗಳ ಪುಟದಿ0ದ....ಮಾವಿನ ಮರ ಸೈಕಲ್ಲು ರಾಗಿ ....:()))
In reply to ಉ: ನೆನಪುಗಳ ಪುಟದಿ0ದ....ಮಾವಿನ ಮರ ಸೈಕಲ್ಲು ರಾಗಿ ....:())) by venkatb83
ಉ: ನೆನಪುಗಳ ಪುಟದಿ0ದ....ಮಾವಿನ ಮರ ಸೈಕಲ್ಲು ರಾಗಿ ....:()))
In reply to ಉ: ನೆನಪುಗಳ ಪುಟದಿ0ದ....ಮಾವಿನ ಮರ ಸೈಕಲ್ಲು ರಾಗಿ ....:())) by venkatb83
ಉ: ನೆನಪುಗಳ ಪುಟದಿ0ದ....ಮಾವಿನ ಮರ ಸೈಕಲ್ಲು ರಾಗಿ ....:()))