ಹೈಬ್ರಿಡ್
ಕವನ
ಮಳೆ ಹನಿ ಸುರಿದು ಅದೆಶ್ಟು
ವರುಷಗಳುರೊಳಿದವೊ
ಅದರೊ ಹೊ ಚಿಗುರಿದೆ,
ಮಣ್ಣು ವಾಸನೆಯೊ ಇರದೆ
ಹೊಂಬಣ್ಣ ಸೂಸಿ ನಗು ಚೆಲ್ಲುವ ಈ ಇನಾತಿ ಹೊವಿನ ಜಾತಿ ಯಾವುದು?
ಬೇರುಗಳೇ ಇಲ್ಲದೆ, ಕಾಯಿಗಟ್ಟಿ
ಬೀಗವಾಗದ ಈ ಸೀಡ್ ಲೆಸ್
ವೆರೈಟಿಗಳದ್ದೇಕೆ ಇಲ್ಲಿ ಕಾರುಬಾರು!
ಉಳಿಯಲೇ ಬೇಕಾದದ್ದನ್ನ
ಉಳಿಸುವ ಗೋಜಿಗೆ ಹೂಗದ
ಈ ಸಂತತಿಯ ಅವನತಿಯೊ
ಹಾಗೆ, ಇದ್ದೊ ಇಲ್ಲದ ಹಾಗೆ
ಬಂಜೆ ಮೋಡಗಳ ಹಾಗೆ ಇದ್ದರೇನು ಫಲ.
ಕದ್ದು ಬಸುರಾದರೊ ಸರಿಯೇ,
ಕಾಯಿಗಟ್ಟಿ ಬೀಜವಾಗುವ
ತಳಿ, ನಳನಳಿಸಿ ಬರುವವರೆಗೆ,
ವಿಶವ ನುಂಗಿ ವಿಶಕಂಟಳಾಗು
ವಸುಂಧರೆ.