ಕೆಲಸದ ನಿಯತ್ತು
ಒಂದೂರಿನಲ್ಲಿ ಒಬ್ಬ ಸಾಹುಕಾರನಿದ್ದ. ಅವನಿಗೆ ಮೂವರು ಮಕ್ಕಳು. ಇಬ್ಬರು ವಿದೇಶದಲ್ಲಿದ್ದರು, ಒಬ್ಬ ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದ. ಆ ಸಾಹುಕಾರನ ಮನೆಯಲ್ಲಿ ಹಲವಾರು ದನಗಳಿದ್ದವು, ಅವನ್ನೆಲ್ಲಾ ನೋಡಿಕೊಳ್ಳಲು ಕೆಲಸದಾಳು ಬೇಕಲ್ಲಾ? ಅದಕ್ಕೆ ಕೆಂಚ ಎಂಬ ಹದಿನೈದು ವರ್ಷದ ಹುಡುಗನೊಬ್ಬನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ದಿನಾಲೂ ಆ ದನಗಳನ್ನು ಕಾಡಿಗೆ ಕರೆದುಕೊಂಡು ಹೋಗಿ ಹುಲ್ಲು ಮೇಯಿಸುವುದು, ಸಂಜೆ ಮನೆಗೆ ತಂದು ಸೇರಿಸುವುದು ಕೆಂಚನ ಕೆಲಸವಾಗಿತ್ತು.
ಒಂದು ದಿನ ಕೆಂಚನಿಗೆ ಅನಾರೋಗ್ಯ ಉಂಟಾಯಿತು. ಅವನು ಕೆಲಸಕ್ಕೆ ಬರಲಿಲ್ಲ. ದನಗಳನ್ನು ಕಾಡಿಗೆ ಕರೆದುಕೊಂಡು ಹೋಗಿ ಹುಲ್ಲು ಮೇಯಿಸಿಕೊಂಡು ಬರುವವರು ಯಾರೂ ಇರಲಿಲ್ಲ. ಆಗ ಸಾಹುಕಾರನಿಗೆ ಚಿಂತೆಯಾಗಿತ್ತು. ಆ ಸಮಯದಲ್ಲಿ ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದ ಸಾಹುಕಾರನ ಮಗ ರಜೆಗೆಂದು ಊರಿಗೆ ಬಂದಿದ್ದ. ಆಗ ಅವನು ‘’ನೀವೇಕೆ ಚಿಂತೆ ಮಾಡುತ್ತೀರಿ ಅಪ್ಪ ನಿಮ್ಮ ಮಗ ಅಂತ ನಾನಿಲ್ಲವೆ, ನಾನೇ ಆ ದನಗಳನ್ನು ಕಾಡಿಗೆ ಕರೆದುಕೊಂಡು ಹೋಗಿ ಮೇಯಿಸಿಕೊಂಡು ಬರುತ್ತೇನೆ ಬಿಡಿ.’’ ಎಂದು ಮಗ ಕಾಡಿಗೆ ಹೊರಟ. ಸುಮಾರು ಮೂರು ನಾಲ್ಕು ಗಂಟೆ ಕಳೆಯಿತು ಮಗ ಬರಿಗೈನಲ್ಲಿ ಮನೆಗೆ ವಾಪಸ್ಸು ಬಂದ. ಸಾಹುಕಾರನಿಗೆ ಕುತೂಹಲವಾಗಿ ಎಲ್ಲಿ ದನಗಳು? ಎಂದು ಕೇಳಿದ. ಆಗ ಮಗ “ಅಯ್ಯೋ ನಾನು ಕಾಡಿಗೆ ಹೋದೆ ದನಗಳನ್ನು ಮೇಯಲು ಬಿಟ್ಟು ಐ-ಪಾಡ್ ನಲ್ಲಿ ಹಾಡನ್ನು ಕೇಳುತ್ತಾ ಕುಳಿತೆ. ಹಾಗೆಯೇ ನಿದ್ದೆ ಬಂತು ಮರಕ್ಕೆ ಒರಗಿದೆ, ಎಚ್ಚರವಾದಾಗ ದನಗಳು ಅಲ್ಲಿರಲಿಲ್ಲ’’ ಎಂದು ಹೇಳಿದ. ಆಗ ಸಾಹುಕಾರನಿಗೆ ಅಳುವುದೊಂದೇ ಬಾಕಿಯಿತ್ತು.
‘’ಅಯ್ಯೋ ನಮ್ ಕೆಂಚ ಒಂದು ದಿನವೂ ಈ ತರಹ ಮಾಡುತ್ತಿರಲಿಲ್ಲ. ಎಷ್ಟು ಚೆನ್ನಾಗಿ ದನಗಳನ್ನು ನೋಡಿಕೊಳ್ಳುತ್ತಿದ್ದ’’ ಎಂದು ದುಃಖಪಡತೊಡಗಿದ.
ನೀತಿ- ಯಾವ ಕೆಲಸವೇ ಆಗಲಿ ನಿಷ್ಠೆಯಿಂದ ಮಾಡಬೇಕು.
Comments
ಉ: ಕೆಲಸದ ನಿಯತ್ತು
In reply to ಉ: ಕೆಲಸದ ನಿಯತ್ತು by venkatb83
ಉ: ಕೆಲಸದ ನಿಯತ್ತು
In reply to ಉ: ಕೆಲಸದ ನಿಯತ್ತು by ಚಾರು.ಎಂ.ಕೆ
ಉ: ಕೆಲಸದ ನಿಯತ್ತು
In reply to ಉ: ಕೆಲಸದ ನಿಯತ್ತು by ಚಾರು.ಎಂ.ಕೆ
ಉ: ಕೆಲಸದ ನಿಯತ್ತು
In reply to ಉ: ಕೆಲಸದ ನಿಯತ್ತು by ಸುಮ ನಾಡಿಗ್
ಉ: ಕೆಲಸದ ನಿಯತ್ತು