ಒಮ್ಮೊಮ್ಮೆ ಅನ್ಸುತ್ತೆ _ ೬ ಭಾರತವೀಗ ಭ್ರಷ್ಟಾಚಾರದವ್ಯವಸ್ಥೆಯನ್ನು ಒಪ್ಪಿಕೊಳ್ಳುತ್ತಿದೆಯ?
ಇಂದು ನಿನ್ನೆಯ ಸುದ್ದಿಗಳಂತೆ ಬಳ್ಳಾರಿಯ ಗಣಿಮಾಫಿಯದ ಜನಾರ್ದನರೆಡ್ಡಿಯವರಿಗೆ ಕಾನೂನಿನ ಪ್ರಕಾರ ಜಾಮೀನಿನ ಮೇಲೆ ಬಿಡುಗಡೆಮಾಡಲು ಸಿ.ಬಿ.ಐ ನ ನ್ಯಾಯದೀಶರೆ ೧೦ ಕೋಟಿಗು ಅಧಿಕ ಮೊತ್ತದ ಲಂಚ ಸ್ವೀಕಾರ ಮಾಡಿದ್ದಾರೆ. ಆದರೆ ಈ ಸುದ್ದಿ ಸಾಮಾನ್ಯ ಜನರಲ್ಲಿ ಯಾವುದೆ ದಿಘ್ಭ್ರಮೆ ಮೂಡಿಸಲಿಲ್ಲ ಅನ್ನುವುದೆ ಆಶ್ಚರ್ಯ. ಎಲ್ಲರು ಬಹುಷ: ಸಣ್ಣದ್ವನಿಯಿಂದ ನುಡಿಯುತ್ತಿದ್ದರು ನ್ಯಾಯಾಲಯಗಳು ಭ್ರಷ್ಟಾಚಾರದಿಂದ ಹೊರತಲ್ಲ ಎಂದು. ಈಗ ಆ ಭಾವನೆಗೆ ದ್ವನಿ ಬಂದಂತೆ ಆಗಿದೆ ಅಷ್ಟೆ. ಕೋರ್ಟಿನ ಕಾರ್ಯವೈಖರಿ ಸಹ ಆಶ್ಚರ್ಯ ಹುಟ್ಟಿಸುತ್ತದೆ ಹಲವು ಕೋಟಿ ಹಣ ಲಂಚ ಕೊಡಲು ಸಹ ಸಿದ್ದನಿರುವ ವ್ಯಕ್ತಿಗೆ ಜಾಮೀನು ನೀಡಲು ನ್ಯಾಯಲಯ ಕೇಳುವ ಗ್ಯಾರಂಟಿ ಮೊತ್ತ ಕೇವಲ ಐದು ಲಕ್ಷ ಅಥವ ಅದಕ್ಕು ಕಡಿಮೆ! ಮತ್ತೊಂದು ಆಶ್ಚರ್ಯವೆಂದರೆ ಸಿ.ಬಿ.ಐ ನವರು ರೆಡ್ಡಿಯವರ ಮನೆಯನ್ನು ರೈಡ್ ಮಾಡಿ ನುಣ್ಣಗೆ ಎಲ್ಲವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಅನ್ನುವಾಗಲು ಒಂದು ಜಾಮೀನಿಗೆ ಹತ್ತು ಕೋಟಿವರೆಗು ಕೊಡಲು ಅವರು ಸಿದ್ದರೆಂದರೆ ಇನ್ನು ಅವರ ಬಳಿ ಎಷ್ಟು ದುಡ್ಡಿರಬಹುದು? ಇವೆಲ್ಲ ಸಾರ್ವಜನಿಕರ ಕುತೂಹಲದ ಪ್ರಶ್ನೆ.
ಮತ್ತೊಂದು ಆಶ್ಚರ್ಯವೆಂದರೆ ಯಡಿಯೂರಪ್ಪನವರ ಸುತ್ತ ಕ್ಯಾಮರ ಹಿಡಿದು ಸುತ್ತುತ್ತ ಸದಾ ದೊಡ್ಡ ದೊಡ್ಡ ಸುದ್ದಿಗಳನ್ನು ಬಿತ್ತರಿಸುವ ಮಾಧ್ಯಮಗಳಿಗೆ ಈ ಸುದ್ದಿ ದೊಡ್ಡದಾಗಲೆ ಇಲ್ಲ. ಕೆಲವು ಪತ್ರಿಕೆಯಲ್ಲ್ಲಿ ಇದು ಕೇವಲ ಒಂದೆ ಸಾಲಿನ ಸಣ್ಣ ಸುದ್ದಿಯಂತೆ ಕಾಣಿಸಿತು. ಇದಕ್ಕೆ ಕಾರಣವೇನೊ ತಿಳಿಯಲಿಲ್ಲ. ಇಲ್ಲಿ ಯಾರು ಏನು ಭಾರತದ ನ್ಯಾಯಂಗ ವ್ಯವಸ್ಥೆಯನ್ನು ಟೀಕಿಸುತ್ತಿಲ್ಲ. ನ್ಯಾಯಂಗದ ಬಗ್ಗೆ ಎಲ್ಲರು ಗೌರವ ಹೊಂದಿರುವರೆ. ಆದರೆ ಕೆಲವು ವ್ಯಕ್ತಿಗಳಿಂದ ವಿಶ್ವದಲ್ಲಿಯೆ ಉತ್ತಮ ವ್ಯವಸ್ಥೆ ಎಂದು ನಾವು ಹೆಮ್ಮೆ ಪಡುವ ನ್ಯಾಯಂಗದ ಗೌರವಕ್ಕೆ ದಕ್ಕೆ ಬರುತ್ತಿದೆ. ಅದರ ವರ್ಚಸ್ಸು ಹಾಳಾಗುತ್ತಿದೆ ಎನ್ನುವುದು ಆತಂಕ ತರುವ ವಿಷಯ. ಜೈಲಿನ ಒಳಗೆ ಕುಳಿತು ಈ ರೀತಿ ನ್ಯಾಯಾದೀಶರ ಮೇಲೆ ಪ್ರಭಾವ ಬೀರಬಲ್ಲನೆಂದರೆ ಹೊರಗೆ ಬಂದರೆ ಇಂತಹ ವ್ಯಕ್ತಿಗಳ ಪ್ರಭಾವ ಎಷ್ಟಿರಬಹುದು ಎನ್ನುವ ಆರ್ಶ್ಚರ್ಯ ಕಾಡುತ್ತದೆ.
ಭ್ರಷ್ಟಚಾರಿಗಳಿಗೆ ದೇಶದಲ್ಲಿ ಪ್ರೋತ್ಸಾಹವಿದೆ ಎನ್ನುವದಾದರೆ ಅದಕ್ಕೆ ಕಾರಣ ರಾಜಕಾರಣಿಗಳೆ.
ಇದೇ ಸಮಯದಲ್ಲಿ ಕರ್ನಾಟಕದಲ್ಲಿನ ಸುದ್ದಿ ಗಮನಿಸಿ ಲಂಚ ಸ್ವೀಕಾರ ಮಾಡಿ , ತನ್ನೆಲ್ಲ ಪ್ರಭಾವ ಬಳಸಿ ಕೋರ್ಟಿನಲ್ಲಿ ಹೋರಾಟ ಮಾಡಿದ ಸಂಪಂಗಿ ಎಂಬ ರಾಜಕಾರಣಿಗೆ ನ್ಯಾಯಾಲಯ ಜೈಲಿನ ಶಿಕ್ಷೆ ವಿದಿಸಿದೆ ಎನ್ನುವುದು ಸತ್ಯ. ಮತ್ತು ಅದಕ್ಕೆ ಬೇಕಾದ ಎಲ್ಲ ಸಾಕ್ಷಿಗಳನ್ನು ನ್ಯಾಯಲಯ ಪರೀಕ್ಷೆಸಿಯೆ ತನ್ನ ನ್ಯಾಯ ನಿರ್ಣಯ ಮಾಡಿರುತ್ತೆ ಆದರೆ ಇಲ್ಲಿಯ ಆಡಳಿತ ನಡೆಸಿರುವ ಪಕ್ಷದ ಅಧ್ಯಕ್ಷರ ಮಾತು ನೋಡಿ. ಶಿಕ್ಷೆಯಾದ ಮಾತ್ರಕ್ಕೆ ಸಂಪಂಗಿ ಅಪರಾದಿಯಲ್ಲ ಮುಂದೆ ಹೈಕೋರ್ಟ್ ನಲ್ಲಿ ಹೋರಾಟ ಮಾಡುತ್ತೇವೆ. ಇದೆಂತಹ ವಿಪರ್ಯಾಸ ! ಲೋಕಾಯುಕ್ತ ಎನ್ನುವುದು ಕರ್ನಾಟಕ ಸರ್ಕಾರವೆ ಹುಟ್ಟುಹಾಕಿರುವ ಒಂದು ಸಂಸ್ಥೆ. ಅಂತಹ ಒಬ್ಬ ಬ್ರಷ್ಟಾಚಾರಿಯನ್ನು ಹಿಡಿದು ನ್ಯಾಯಾಲಯದ ವಶಕ್ಕೆ ಒಪ್ಪಿಸಿದರೆ ಇಲ್ಲಿನ ಆಡಳಿತ ಪಕ್ಷವೆ ಒಪ್ಪುವದಿಲ್ಲ ಏಕೆ. ಅಂತಹ ವ್ಯಕ್ತಿಯನ್ನು ಬೇಟಿ ಮಾಡಲು ಪಕ್ಷದವರೆ ಜೈಲಿಗೆ ಬೇಟಿ ನೀಡುತ್ತಾರೆ, ಅಲ್ಲಿಂದ ಮುಖ್ಯಮಂತ್ರಿಯ ಜೊತೆ ಮಾತನಾಡುತ್ತಾರೆ ಎಂಬುದು ಪತ್ರಿಕೆಗಳ ಸುದ್ದಿ. ಸಂಪಂಗಿಯವರು ನ್ಯಾಯಾಲಯದಲ್ಲಿ ತಮ್ಮ ಹೋರಾಟ ಮುಂದುವರೆಸಲಿ , ಅದು ಸಹಜ ಸಹ. ಅದು ಅವರ ಮೂಲಭೂತ ಹಕ್ಕು. ಆದರೆ ನ್ಯಾಯನೀಡಬೇಕಾದ ಸರ್ಕಾರವೆ ಅವರ ಜೊತೆ ನಿಲ್ಲುತ್ತೇನೆ ಅನ್ನುವುದೆ ದುರಂತ.
ಭಾರತವೀಗ ಭ್ರಷ್ಟಾಚಾರಿಗಳ ಆಡೋಂಭಲವಾಗುತ್ತಿದೆ. ಪಕ್ಷಭೇದವಿಲ್ಲದೆ ಎಲ್ಲ ಸರ್ಕಾರಗಳು ಅಂತಹ ವ್ಯವಸ್ಥೆಯನ್ನು ಬಲಪಡಿಸಲು ತಮ್ಮ ಕಾರ್ಯತಂತ್ರ ರೂಪಿಸುತ್ತವೆ. ಒಮ್ಮೆ ಸಾರ್ವಜನಿಕ ರಂಗದಲ್ಲಿ ಅಪರಾದಿ ಎಂದಾದರೆ ಅಂತಹ ವ್ಯಕ್ತಿಗಳನ್ನು ರಾಜಕೀಯ ಪಕ್ಷಗಳು ದೂರ ಇಡುತ್ತಿದ್ದವು . ಆದರೆ ಈಗ ಯಾವ ಎಗ್ಗು ಇಲ್ಲದೆ , ಕೊಂಚವು ಸಂಕೋಚ ತೋರದೆ ಅಂತಹ ಭ್ರಷ್ಟವ್ಯಕ್ತಿಗಳನ್ನೆಲ್ಲ ಎಲ್ಲ ಪಕ್ಷಗಳು ಆಲಂಗಿಸುತ್ತಿವೆ, ಅವರನ್ನೆ ತಮ್ಮ ನಾಯಕರನ್ನಾಗಿ ಮೆರೆಸುತ್ತಿವೆ ಅನ್ನುವುದು ಸತ್ಯ.
ಮಾದ್ಯಮಗಳಾದರೊ ಸುದ್ದಿಯನ್ನು ತಮ್ಮಗೆ ಬೇಕಾದ ರೀತಿ ತಿರುಚಿ ಅದನ್ನು ತೋರಿಸುತ್ತಿವೆ. ಸಂಪಂಗಿಯವರನ್ನು ಜೈಲಿಗೆ ಹಾಕಿದ ಸಂದರ್ಭದಲ್ಲಿ ಪದೆ ಪದೆ ಅಳುತ್ತ ನಿಂತ ಅವರ ತಾಯಿಯವರನ್ನು ತೋರಿಸುತ್ತ , ಅವರ ಮಕ್ಕಳನ್ನು ತೋರಿಸುತ್ತ, ಸಂಪಂಗಿಯವರ ಮೇಲೆ ಅನುಕಂಪ ಬರುವಂತೆ ತೋರಿಸುವ ಮಾದ್ಯಮಗಳು, ರಸ್ತೆ ಅಗಲಿಕರಣಕ್ಕಾಗಿ ತಮ್ಮ ಮನೆಯನ್ನು ಕೆಳೆದುಕೊಂಡು ಬೀದಿಗೆ ಬಿದ್ದ ಜನರ ಅಳುವನ್ನು ತೋರಿಸುವದಿಲ್ಲ. ಮಾದ್ಯಮಗಳು ಸಹ ಭ್ರಷ್ಟಚಾರಿಗಳಿಗೆ ತಮ್ಮ ಪರೋಕ್ಷ ಪ್ರೋತ್ಸಾಹವನ್ನು ಮುಂದುವರೆಸಿವೆ.
ಎಲ್ಲೊ ಅಲ್ಲೊಂದು ಇಲ್ಲೊಂದು ಎನ್ನುವಂತೆ ವಿರೋದವನ್ನು ಹೊರತುಪಡಿಸಿದರೆ.
ಭಾರತವೀಗ ಭ್ರಷ್ಟಚಾರದ ವ್ಯವಸ್ಥೆಯನ್ನು ಒಪ್ಪಿಕೊಳ್ಳುತ್ತಿದೆ ಎಂದು ಒಮ್ಮೊಮ್ಮೆ ಅನ್ನಿಸುವದಿಲ್ಲವೆ.
Comments
ಉ: ಒಮ್ಮೊಮ್ಮೆ ಅನ್ಸುತ್ತೆ _ ೬ ಭಾರತವೀಗ ಭ್ರಷ್ಟಾಚಾರದವ್ಯವಸ್ಥೆಯನ್ನು ...
ಉ: ಒಮ್ಮೊಮ್ಮೆ ಅನ್ಸುತ್ತೆ _ ೬ ಭಾರತವೀಗ ಭ್ರಷ್ಟಾಚಾರದವ್ಯವಸ್ಥೆಯನ್ನು ...
ಉ: ಒಮ್ಮೊಮ್ಮೆ ಅನ್ಸುತ್ತೆ _ ೬ ಭಾರತವೀಗ ಭ್ರಷ್ಟಾಚಾರದವ್ಯವಸ್ಥೆಯನ್ನು ...