ಭಾವೋದ್ರೇಕ ನಪುಂಸಕತ್ವ
ಕವನ
ಬೆಳಕು ಬೇಕೆಂದು ಹಾರೈಸಿದೆ
ಬೆಳಕು ಕಂಡು ನೊಂದೆ
ಕತ್ತಲು ಕಾಣಲು ತವಕಿಸಿದೆ
ಕತ್ತಲು ಕಂಡು ನಿರಾಸೆ.
ಈಗ ನನಗಿಲ್ಲ ಏನೂ ಹಾರೈಕೆ -ಅರಿಕೆ
ಸುಖ-ದುಖಃದ ಹಿಗ್ಗು-ತಗ್ಗು ಅರಿವಿಲ್ಲ
ಕಾಮ-ಕ್ರೋಧದ ಬಾಣ-ಬಿರುಸು ಆಟವಿಲ್ಲ
ಮದ-ಮೋಹದ ಮಂಜು-ಮುಸುಕು ಹರಿದಿದೆ
ಲೋಭ-ಮಾತ್ಸರ್ಯದ ತೆರೆ ಮರೆ ಜಾರಿತು
ಐಹಿಕ- ಸುಖಕೆ ನಾ ಶತ್ರುವಾದೆ
ವಿಷಯಾಸಕ್ತಿಗಳಿಗೆ ನಾ ನಿರ್ವಿಕಾರನಾದೆ
ಅವಿದ್ಯಾ -ಮಾಯಾ ಮರೀಚಿಕೆಗೆ ಸಿಂಹ ಸ್ವಪ್ನ ವಾದೆ
ಇಂದ್ರಿಯ ವಿಜಯದ ಹಾದಿಯಲ್ಲಿ ನಾ ಯಾತ್ರಿಯಾದೆ
ಒಟ್ಟನಲ್ಲಿ ನಾ ಭಾವೋದ್ರೇಕ - ನಪುಂಸಕನಾದೆ.
ಶ್ರೀ ನಾಗರಾಜ್