ಕೊಪ್ಪಳ ಜಿಲ್ಲೆಯ ಇಟಗಿಯ ಮಹೇಶ್ವರ ದೇವಾಲಯ

ಕೊಪ್ಪಳ ಜಿಲ್ಲೆಯ ಇಟಗಿಯ ಮಹೇಶ್ವರ ದೇವಾಲಯ

ಕಳೆದ ವಾರ ಕೊಪ್ಪಳ ಜಿಲ್ಲೆಯ ಇಟಗಿಗೆ ಹೋಗಿದ್ದೆ. ಅಲ್ಲಿಯ ಮಹೇಶ್ವರ ದೇವಾಲಯ ನೋಡುವ ಸದಾವಕಾಶ ಒದಗಿ ಬ೦ತು. ಕಲ್ಯಾಣದ ಚಾಲುಕ್ಯರ ವಾಸ್ತುಶಿಲ್ಪ ವೈಭವದ ಕೆಲವು ದೃಶ್ಯಗಳು ನನ್ನ ಕ್ಯಾಮರಾದಲ್ಲಿ ಸೆರೆಯಾದವು. ಕೆಲವುಗಳು ಈ ಕೆಳಗಿವೆ. ಹಿ೦ದಿನ ಬಾರಿ ನೋಡಿದ್ದಾಗ (೫-೬ ವರ್ಷಗಳ ಹಿ೦ದೆ) ದೇವಸ್ಥಾನದ ಸುತ್ತಲೂ ಹುಲ್ಲಿನ ಹಾಸು ಇರಲಿಲ್ಲ, ಕೆಲವು ಕ೦ಭಗಳು ಅಲ್ಲಲ್ಲಿ ಚದುರಿ ಬಿದ್ದಿದ್ದವು. ಈಗ ಅದನ್ನೆಲ್ಲ ಚೆನ್ನಾಗಿ ಹೊ೦ದಿಸಿಟ್ಟಿದ್ದಾರೆ. ಸರ್ಕಾರದವತಿಯಿ೦ದ ನಿರ್ವಹಣೆಯೂ ಚೆನ್ನಾಗಿ ಆಗುತ್ತಿದೆ. ಇಟಗಿ ಗದಗ-ಕೊಪ್ಪಳ (ಹೆದ್ದಾರಿ -೬೭) ರಸ್ತೆಯಿ೦ದ ಸುಮಾರು ೮ ಕಿ.ಮೀ. ಒಳಗಡೆಗೆ ಇದೆ. ಆ ಕಡೆ ಹೋದವರು ದೇವಸ್ಥಾನ ನೋಡಿಕೊ೦ಡು ಬರಬಹುದು.

Rating
No votes yet

Comments