ಈ ಅಮವಾಸ್ಯೆಗೆ ಅದೇನಾಗುತ್ತೋ ನನಗಂತು ಗೊತ್ತಿಲ್ಲ ನಾ ಅಮಾಸೆ ಮುಗಿಯಗಂಟ ಹೆ೦ಡ್ತಿ ಮಕ್ಕಳನ್ನ ಕರಕ್೦ಡು ಊರಿಗೆ ಬರಾಕಿಲ್ಲ.
ನಮ್ಮ ಮಾವನ ಮನೆಗೆ ಹೋಗಿದ್ಬರ್ತೀನಿ..ಅಲ್ಲಿ ಏನಾದರು ಇಲ್ಲಿ ಆದ೦ಗೆ ಆದ್ರೇ ಅವರೇ ಎಲ್ಲ ನೋಡಿಕೋೞುತ್ತಾರೆ. ಹೀಗೆ ರಾಚಯ್ಯ ಜೊತೆಗಿದ್ದ
ಪರಮಣ್ಣನ ಬಳಿ ಹೇಳಿಕೊಳ್ಳುತಿದ್ದ.ಇದಕೆಲ್ಲಾ ಕಾರಣ ಆತನ ಹೆಂಡತಿ.ಅವರಿಗೆ 4 ಜನ ಮಕ್ಕಳು ಆ ಮಕ್ಕಳಲ್ಲಿ ಕೊನೆ ಮಗಳು ಚುವಿ ಅಂತ.ಚುವಿ ತನ್ನ
ತಾಯಿಯ ಮುದ್ದಿನ ಮಗಳು ತಾಯಿಗೆ ತನ್ನೆಲ್ಲ ಮಕ್ಕಳಿಗಿಂತ ಚುವಿ ಎಂದರೆ ಅದೇನೋ ವಿಶೇಷ ಪ್ರೀತಿ ಅಕ್ಕರೆ.ಚುವಿಗೆ ತನ್ನ ಮನೆಯಲ್ಲಿ ಸಾಕಿದ್ದ ಲಕ್ಷ್ಮೀ
ಎಂಬ ಮಳಕ(ಮಳಕ ಎಂದರೆ ಹೆಣ್ಣು ಕರು)ವನ್ನು ಕಂಡರೆ ಎಲ್ಲಿಲ್ಲದ ಪ್ರೀತಿ.ಆಕೆಯೆಂದರೆ ಆ ಹಸು ಬಾಲ ಅಲ್ಲಾಡಿಸುತ್ತಾ ಅಕ್ಕರೆಯಿಂದ ಬರುತಿತ್ತು.ಚುವಿಗೆ
ಆ ಮಳಕದೊಂದಿಗೆ ಆಟವಾಡುವುದು ಸವರುವುದು ಅದಕ್ಕೆ ಸ್ನಾನ ಮಾಡಿಸುವುದೆಂದರೆ ಖುಷಿಯ ವಿಚಾರ.ಈ ಮಳಕವನ್ನು ಅದರ ತಾಯಿ ಹಸುವನ್ನು
ಇವಳು ಚೆನ್ನಾಗಿ ನೋಡಿಕೊಳ್ಳುತಿದ್ದಳು.ಪಶ್ಚಿಮ ಘಟ್ಟಗಳ ಸಾಲಿನ ಒಂದು ಪುಟ್ಟ ಹಳ್ಳಿ ಸಿರಿವಾಳ.ರಾಚಯ್ಯ ಅವನ ಹೆಂಡತಿ ಮಕ್ಕಳು ಈ ಊರಿನಲ್ಲಿ ತಮ್ಮ
ಸಂಸಾರ ಸಾಗಿಸುತಿದ್ದರುಅಪ್ಪ ಅಮ್ಮ ಬೇರೆಯವರ ತೋಟಗಳಲ್ಲಿ ಕೂಲಿನಾಲಿ ಮಾಡಿ ಜೀವನ ಸಾಗಿಸುತಿದ್ದರು.ಕಷ್ಟಪಟ್ಟು ಹಣ ಹೊಂದಿಸಿ ಒಂದು ಹಸು ತಂದು ಸಾಕಿದ್ದರು.
ಅದುಕೊಡುವ ಹಾಲಿನಲ್ಲಿ ಡೈರಿಗೆ ಹಾಕಿ ಸ್ವಲ್ಪ ಮಟ್ಟಿನ ಆದಾಯ ಮಾಡಿಕೊಳ್ಳುತಿದ್ದರು..ಹೀಗೆ ಜೀವನ ಸಾಗಿಸುತ್ತಿರುವಾಗ ಒಂದು ದಿನ ಎಂದಿನಂತೆ ಲಕ್ಷ್ಮೀ ಯನ್ನು
ಕಾಡಿಗೆ ಮೇಯಲು ಬಿಟ್ಟು ಬಂದಿದ್ದರು.ಆ ದಿನ ಅವರ ಗ್ರಹಚಾರ ಕೆಟ್ಟಿತು ಅಂತ ಕಾಣಿಸತ್ತೆ ಪುಣ್ಯಕೋಟಿಯಂತಹ ಹಸುವನ್ನು ಚಿರತೆ ತಿಂದು ಹಾಕಿತ್ತು ಸಂಜೆಯಾದೊಡನೆ
ಮನೆಗೆ ಒಡಿ ಬರುತಿದ್ದ ಹಸು ಇಂದು ರಾತ್ರಿಯಾದರು ಮನೆಗೆ ಬರಲಿಲ್ಲ.ಗಾಬರಿಗೊಂಡ ರಾಚಯ್ಯ ಹೆಂಡತಿ ಪಾರ್ವತಿಗೆ ಇವತ್ಯಾಕೆ ಇಷ್ಟೋತ್ತಾದರು ಲಕ್ಷ್ಮೀ ಮನಿಗೆ
ಬರಲಿಲ್ಲ ಎಲ್ಲಿ ಮೇಯಲು ಬಿಟ್ಟು ಬಂದಿದ್ದೆ ಅಂದ ಮಾಮೂಲಂತೆ ಬಿಡೋ ಜಾಗಕ್ಕೆ ಬಿಟ್ಟು ಬಂದಿದ್ದೆ ರೀ ಅಂದಳು.ಹೌದಾ ಲಕ್ಷ್ಮೀ ಕಾಡೊಳಗೆ ಮೇಯ್ಕೊಂಡು ಹೋಗಿರಬೇಕು
ಇವತ್ತು ಮನೆಗೆ ಬರುವಾಗ ದಾರಿ ತಪ್ಪಿರಬೇಕು ನಾನು ಸಂತೂನು ಹೋಗಿ ಹುಡುಕ್ಕಂಡು ಬರ್ತೀವಿ ಬಾರ್ಲ ಮಗಾ ಅಂತ ತನ್ನ ದೊಡ್ಡ ಮಗನ ಕರೆದ.ಅಂಗೆ ಟಾರ್ಚು ತಗ್ಡ೦ಡು
ಬಾರೋ ಅಂದು ಜೊತೆಗೆ ಇಬ್ಬರು ಕಾಡಿಗೆ ಹೋದರು.ಅವರು ಅರ್ಧ ಗುಡ್ಡ ಎಲ್ಲಾ ಹುಡುಕಿದರು.ರಾತ್ರ ಒಂದು ಘಂಟೆಯವರೆಗು ಹುಡುಕಿದರು ಗೌರಿಯ ಪತ್ತೆಯೆ ಇಲ್ಲ.ಯಾಕೋ
ರಾಚಯ್ಯನಿಗೆ ವಿಶ್ವಪ್ಪನೋರು ಹೇಳಿದ ಮಾತು ನೆನಪಾಯಿತು.ವಿಶ್ವಪ್ಪ ಆ ಊರಿನ ಪ್ರಾಥಮಿಕ ಶಾಲೆಯ ಶಿಕ್ಷಕ ಅವರು ನಿತ್ಯವು ಪಟ್ಟಣದಿಂದ ತಮ್ಮ ಡಿಸ್ಕವರ್ ಬೈಕ್ ನಲ್ಲಿ
ಬರುತ್ತಾರೆ.ಮೊನ್ನೆ ಸಂಜೆ ಶಾಲೆಮುಗಿಸಿಕೊಂಡು ವಾಪಸ್ ಪಟ್ಟಣಕ್ಕೆ ಹೋಗುವಾಗ ಚಿರತೆ ಅಡ್ಡ ಹೋಯಿತಂತೆ ತಕ್ಷಣ ಅವರು ತಮ್ಮ ಬೈಕನ್ನು 150ಕಿ.ಮೀ ವೇಗದಲ್ಲಿ ಚಲಾಯಿಸಿಕೊಂಡು
ಹೋಗಿದ್ದರು.ಅವರ ಗಾಡಿ ಅವರನ್ನು ಆ ಸಂದರ್ಭದಲ್ಲಿ ಸಹಾಯಕ್ಕೆ ಬಂದಿತ್ತು.ಅದನ್ನೇ ರಾಚಯ್ಯ ಸಿಕ್ಕಾಗ ಹೇಳಿದ್ದರು.ಇದನ್ನು ನೆನೆದ ರಾಚಯ್ಯ ಚಿರತೆ ಏನಾದರು ಲಕ್ಷ್ಮಿಯನ್ನ ಕಚ್ಚಿಕೊಂಡು
ಹೋಗಿರಬಹುದೇ ಎಂದು ದಿಗಿಲುಗೊಂಡ.ಸಂತುವನ್ನು ಕರೆದುಕೊಂಡು ವಾಪಸ್ ಊರ ಕಡೆ ನೆಡೆದ.ದಾರಿಯಲ್ಲಿ ಬರುತ್ತಿರಬೇಕಾದರೆ ಏನೋ ಸದ್ದಾಯಿತು....
ಅದನ್ನು ಕೇಳಿ ಇಬ್ಬರು ಹೌಹಾರಿದರು.ಅದೇ ಚಿರತೆಯ ಘರ್ಜನೆ....ತಕ್ಷಣ ಅವರು ಒಡಿ ಹೋಗಲು ಅನುವಾದರು.ಅವಸರದಲ್ಲಿ ರಾಚಯ್ಯ ಬೇಗ ಒಡಿಬಂದಿದ್ದ.ರಾಚಯ್ಯನಿಗೆ
ಇಡೀ ಕಾಡು ಚಿರಪಯಿಚಿತ ಹಾಗಾಗಿ ಹೇಗೆ ಹೋದರೆ ಬೇಗ ಹೋಗಬೇಕು ಎಂದು ತಿಳಿದಿತ್ತು.ಅತ ಅಡ್ಡದಾರಿ ಹಿಡಿದು ಊರಿನ ಕಡೆಗೆ ಬಂದ ಹಿಂತಿರುಗಿ ನೋಡಿದರೆ ಮಗ
ಸಂತ ಕಾಣುತಿಲ್ಲ.ಅಯ್ಯೋ ಆತ ಹೆಚ್ಚು ಕಾಡು ತಿರುಗಿದವನಲ್ಲ ಅವನನ್ನೇ ಬಿಟ್ಟು ಬಂದೆನಲ್ಲ ಎಂದು ಹಿಂತಿರುಗಿ ಕಾಡಿನೊಳಕ್ಕೆ ಹೋದ.....
---------------------------------------------------->