ಮಕ್ಕಳ ಕೈಲಿ ಮೊಬೈಲು ಮಂಗನ ಕೈಲಿ ಮಾಣಿಕ್ಯ
“ರೀ ಶೀಲಾ.. ನಾವು ಶ್ರೀಧರನಿಗೆ ವೊಬೈಲು ಕೊಡ್ಸಿ ತಪ್ಪು ಮಾಡಿಬಿಟ್ವಿ ಕಂಡ್ರೀ…ಮೂರೊತ್ತೂ ಅದನ್ನೇ ಕೈಲಿ ಹಿಡ್ಕೊಂಡಿರ್ತಾನೆ. ನಾನೇನೂ ಹೊರಗಡೆ ಹೋಗ್ತಿರ್ತೀನಿ ಯಾರಾದ್ರೂ ಬಂದ್ರೆ ಹೋದ್ರೆ ಅಂತ ನಾನು ಶ್ರೀಧರನಿಗೆ ವೊಬೈಲ್ ಕೊಡಿಸ್ದೆ. ಆದ್ರೆ ಅವನು ಅದನ್ನ ಈ ಥರ ಅವಲಂಭಿಸ್ಕೊತಾನೆ, ಅಂತ ನಾನಂದ್ಕೊಡಿರಲಿಲ್ಲ. ಶ್ರೀಧರನ ತಾಯಿ ಸುಂದಮ್ಮ ಮುಂದಗಡೆ ಮನೆ ಸುನಂದಮ್ಮನಿಗೆ ಹೇಳಿದ ಮಾತಿದು. “ ಅಲ್ಲ ಕಂಡ್ರೀ ಸುನಂದಮ್ಮ ಮಗನಿಗೆ ಕಾಂಟ್ಯಾಕ್ಟ್ಗೆ ಇರಲಿ ಅಂತ ವೊಬೈಲ್ ಕೊಡಿಸ್ತಾ ಕೊಡಿಸ್ತಾ ಹೈರೇಂಜ್ ಹ್ಯಾಂಡ್ ಸೆಟ್ ಯಾಕೆ ಕೊಡಿಸಿದ್ರೀ”? ಶೀಲಾ ಅವರ ತಾರ್ಕಿಕ ಪ್ರಶ್ನೆ ಇದು.
“ಹ್ಞೂಂ ಕಂಡ್ರಿ ನಾನೂ ಅದೇ ಅಂದ್ಕೊಂಡೆ. ನಾನು ವೊಬೈಲ್ ಅಂಗಡಿಗೆ ಅವನನ್ನು ಕರ್ಕೊಂಡು ಹೋಗ್ಬಾರ್ದು ಅಂತಾನೇ ಅಂದ್ಕೊಂಡಿದ್ದೆ. ಆದರೆ ಏನ್ಮಾಡೋದು ಅವನೇ ಬರ್ತೀನಿ ಅಂತ ಹಟ ಹಿಡಿದ. ಈಗ ನೋಡಿದ್ರೆ ಯಾವಾಗಲೂ ಅದೇನೋ ಕಿವಿಗೆ ಸಿಕ್ಕಿಸ್ಕೊಂಡು ಹಾಡು ಕೇಳ್ತಾ ಇರ್ತಾನೆ. ಈಗೀಗ ಅವನ ಓದಿನಲ್ಲೂ ಆಸಕ್ತಿ ಕಮ್ಮಿಯಾಗಿದೆ. ಈ ಸಲ ಅವನ ಪೇರೆಂಡ್ಸ್ ಮೀಟಿಂಗ್ ಅಲ್ಲಿ ನಾನು ಅವರ ಕ್ಲಾಸ್ ಟೀಚರ್ಗೆ ಕಂಪ್ಲೆಂಟ್ ಮಾಡ್ದೆ. ಅವರೇನಂದ್ರೆ “ಮಗನಿಗೆ ನೀವು ವೊಬೈಲು ಕೊಡಿಸಬಾರದಾಗಿತ್ತು” ಅಂದ್ರು. ಎಂದು ಸುನಂದಮ್ಮ ನುಡಿದರು. “ಹೇಯ್ ಅದನ್ನು ಹೇಳೋಕ್ಕೆ ಅವರೇ ಅಗಬೇಕಿತ್ತಾ” ಶೀಲಾ ಅವರ ಆಲೋಚನೆ ಇದು.
ಶ್ರೀಧರನಿಗ 8 ನೇ ತರಗತಿ. ಮನೆಯ ಹತ್ತಿರದ ಶಾಲೆಗೆ ಹೋಗುತ್ತಾನೆ. ಅವನ ತಂದೆ ತೀರಿಹೋಗಿ ಬಹಳ ವರ್ಷಗಳಾಯ್ತು. ಶ್ರೀಧರ 3 ನೇ ತರಗತಿಯಲ್ಲಿರುವಾಗಲೇ ಆತನ ತಂದೆ ಒಂದು ಕಾರ್ ಮತ್ತು ಬೈಕ್ ಆಕ್ಸಿಡೆಂಟ್ ನಲ್ಲಿ ತೀರಿಹೋದರು. ಇವನ ತಾಯಿ ಸುನಂದಮ್ಮ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಶ್ರೀಧರನಿಗೆ ಯಾವ ಕೊರತೆಯೂ ಇಲ್ಲದಂzತೆ ಸಾಕಬೇಕೆಂಬ ಹಂಬಲ ಸುನಂದಮ್ಮನದು.
ಶ್ರೀಧರ ಓದಿನಲ್ಲಿ ಜಾಣ. ಯಾವಾಗಲೂ ಕ್ಲಾಸಿಗೇ ಫಸ್ಟ್ ಬರುತ್ತಿದ್ದ. ಆದರೇ ಈ ಬಾರಿ ಅಷ್ಟೇನೂ ಸರಿಯಾಗಿ ಮಾಕ್ಕ್ಸ್ ತೊಗೊಂಡಿಲ್ಲ. ಎಲ್ಲಾ ಸಬ್ಜೆಕ್ಟ್ ಅಲ್ಲೂ ಜಸ್ಟ್ ಪಾಸ್ ಆಗಿದ್ದಾನೆ. ಇದು ಸುನಂದಮ್ಮನ ಅಳಲು.
ಮಗ ಶ್ರೀಧರ ಯಾವಾಗಲೂ ಫೋನಿನಲ್ಲಿ ಮೆಸ್ಸೇಜು, ಚಾಟಿಂಗು, ಮ್ಯೂಸಿಕ್ಕು, ಸೋಶಿಯಲ್ ನೆಟ್ವರ್ಕಿಂಗ್ ಮುಂತಾದವುಗಳಲ್ಲಿ ತೊಡಗಿರುತ್ತಾನೆ. “ಬೇಡ ಕಣೋ ಇದರಿಂದ ಹಾನಿಯೇ ಸರಿ” ಅಂತ ಅವನಮ್ಮ ಎಷ್ಟು ಹೇಳಿದ್ರೂ ಶ್ರೀಧರ ಕೇಳ್ತಾ ಇರಲಿಲ್ಲ.
ಶ್ರೀಧರನಿಗೆ ಇದೇ ಐದು ವರ್ಷ ಆದಮೇಲೆ, ಅಂದರೆ ಶ್ರೀಧರ ಈಗ || ಪಿ.ಯು.ಸಿ ಓದುವಾಗ ಇವನಿಗೆ ತಲೇನೋವು ಕಾಣಿಸಿಕೊಂಡಿತು. ತುಂಬಾ ಜಾಸ್ತಿ ತಲೇನೋವು..! ಏನು ಮಾತ್ರೆ ತೆಗೆದುಕೊಂಡರೂ ಕಮ್ಮಿ ಆಗ್ತಾ ಇಲ್ಲ. ಕಡೆಗೆ ಡಾಕ್ಟ್ರತ್ರ ತೋರಿಸಿದರು. ಡಾಕ್ಟ್ರು ಸ್ಕ್ಯಾನಿಂಗ್ ಮಾಡಿ “ಮೆದುಳಲ್ಲಿ ವಿಕಿರಣ ಪರಿಣಾಮ ಆಗಿದೆ. ಅದನ್ನು ಇವನಿಗೆ ತಡೆದುಕೊಳ್ಳಲು ಆಗ್ತಾ ಇಲ್ಲ ಅದಕ್ಕೆ ಇದು” ಎಂದಿದ್ದಾರೆ. ನಿಮ್ಮ ಮಗನಿಗೆ ಏನಾದ್ರು ಕೆಟ್ಟಭ್ಯಾಸ ಇತ್ತಾ?” ಡಾಕ್ಟರ್ ರ ಪ್ರಶ್ನೆ ಇದು. ಸುನಂದಮ್ಮ “ಹೌದು ಡಾಕ್ಟ್ರೇ ಇವನು ಯಾವಾಗಲೂ ವೊಬೈಲ್ ಹಿಡ್ಕೊಂಡಿರ್ತಿದ.್ದ ಮಲಗುವಾಗಲೂ ಅಸ್ಟೆ ವೊಬೈಲ್ ಅನ್ನ ದಿಂಬಿನ ಕೆಳಗೆ ಇಟ್ಕೊಂಡು ಮಲಗಿರ್ತಿದ್ದ.” ಅಂದ್ರು. “ಹ್ಹಾ.... ನೋಡೀಮಾ ಅದೇ ಇದರ ಪರಿಣಾಮ. ಈ ವೊಬೈಲ್ ನಿಂದ ಎಸ್ಟು ಅನುಕೂಲನೋ ಅಸ್ಟೇ ಅನಾನುಕೂಲ ನೋಡಿ. ಹ್ಹೂ.. ನಾನ್ ಬಂದ್ ವಿಷ್ಯಾನೇ ಮರೆತುಬಿಟ್ಟೆ ನೋಡಿ ನೋಡೀಮ್ಮಾ ನಾವು ನಿಮ್ಮ ಮಗನಿಗೆ ನಿಮ್ಹಾನ್ಸ್ ಇಂದ ಡಾಕ್ಟ್ರ ಕರೆಸಿ ಸರ್ಜರಿ ಮಾಡಿಸಬೇಕಾಗಿದೆ. ನೀವು ಯಾತಕ್ಕೂ ಅಡ್ವಾನ್ಸ್ ಅಂತ 10 ಲಕ್ಷ ಕಟ್ಟಿರಿ. ಆಮೇಲೆ ಇನ್ನೆಷ್ಟು ಅಂತ ನಾನು ಆಮೇಲೆ ಹೇಳುತ್ತೇನೆ” ಅಂದ್ರು..!
ಸುನಂದಮ್ಮನಿಗೆ ಸಿಡಿಲು ಬಡಿದಂತಾಯಿತು. “ಏನೂ 10 ಲಕ್ಷನಾ!!!” ಅಂತಾ ಬಾಯಿ ಬಾಯಿ ಬಿಟ್ರು.. ಅದಕ್ಕೆ ಡಾಕ್ರು “ನೋಡೀಮ್ಮಾ ಏನೂ ಮಾಡಕ್ಕಾಗಲ್ಲ ನಮ್ಮ ಆಸ್ಪತ್ರೆ ಆಡಳಿತ ತುಂಬಾ ಸ್ಟ್ರಿಕ್ಟು. ಬೇಕಾದ್ರೆ ನೀವೂ, ಬೇರೆ ಆಸ್ಪತ್ರೆಗೆ ಸೇರಿಸಬಹುದು” ಅಂದು.್ರ
ಸುನಂದಮ್ಮ ಊರೆಲ್ಲಾ ಸಾಲ ಮಾಡಿ ಮನೆಯ ವಸ್ತುಗಳನೆಲ್ಲಾ ಮಾರಿ ದುಡ್ಡು ಹೊಂದಿಸಿ ಕೊಟ್ಟಳು. ಮಗನಿಗೆ ಸರ್ಜರಿ ಆಯಿತು ಸೆಕ್ಸಸ್ಸೂ ಆಯಿತು.
“ಅಮ್ಮಾ, ನಾನಿನ್ಯಾವತ್ತೂ ನಾನು ವೊಬೈಲ್ ಮುಟ್ಟುವುದಿಲ್ಲಮ್ಮಾ ಅವತ್ತು ನೀನು ಹೇಳ್ದೆ ನಾನು ಕೇಳಬೇಕಾಗಿತ್ತು,,.. ಸಾರಿ ಅಮ್ಮಾ......” ಶ್ರೀಧರ ಅಳುತ್ತಾ ಹೇಳಿದನು......
ಇದು 2020ರ ಕಥೆ..
Comments
ಉ: ಮಕ್ಕಳ ಕೈಲಿ ಮೊಬೈಲು ಮಂಗನ ಕೈಲಿ ಮಾಣಿಕ್ಯ
In reply to ಉ: ಮಕ್ಕಳ ಕೈಲಿ ಮೊಬೈಲು ಮಂಗನ ಕೈಲಿ ಮಾಣಿಕ್ಯ by bhalle
ಉ: ಮಕ್ಕಳ ಕೈಲಿ ಮೊಬೈಲು ಮಂಗನ ಕೈಲಿ ಮಾಣಿಕ್ಯ
In reply to ಉ: ಮಕ್ಕಳ ಕೈಲಿ ಮೊಬೈಲು ಮಂಗನ ಕೈಲಿ ಮಾಣಿಕ್ಯ by bhalle
ಉ: ಮಕ್ಕಳ ಕೈಲಿ ಮೊಬೈಲು ಮಂಗನ ಕೈಲಿ ಮಾಣಿಕ್ಯ
In reply to ಉ: ಮಕ್ಕಳ ಕೈಲಿ ಮೊಬೈಲು ಮಂಗನ ಕೈಲಿ ಮಾಣಿಕ್ಯ by ಚಾರು.ಎಂ.ಕೆ
ಉ: ಮಕ್ಕಳ ಕೈಲಿ ಮೊಬೈಲು ಮಂಗನ ಕೈಲಿ ಮಾಣಿಕ್ಯ
ಉ: ಮಕ್ಕಳ ಕೈಲಿ ಮೊಬೈಲು ಮಂಗನ ಕೈಲಿ ಮಾಣಿಕ್ಯ