ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) ಭಾಗ ೩
ಬಸ್ನಲ್ಲಿ ಕುಳಿತಿದ್ದಾಗ ಮೃದುಲ ಫೋನ್ ಮಾಡಿದಳು. ಎಲ್ಲೋ ಇದ್ದೀಯ ಚೇತೂ ಮಧ್ಯಾಹ್ನದಿಂದ
ನಾನು ಊರಿಗೆ ಹೋಗ್ತಾ ಇದ್ದೀನಿ ಮೃದುಲ.... ಯಾವ ಊರಿಗೋ.... ಇನ್ಯಾವ ಊರಿಗೆ ಹೋಗ್ಲಿ ನಮ್ಮ ಊರಿಗೆ... ಏನೋ ಏನಾಯ್ತೋ ನಿಂಗೆ...ನಾಳೆ ಇಬ್ಬರೂ ಒಟ್ಟಿಗೆ ಹೋಗೋದು ಅಂತಾ ತಾನೇ ಪ್ಲಾ ಬಹುಶಃ ನನ್ನ ಈ ವಿಚಿತ್ರ ವರ್ತನೆ ಇಂದ ಅವಳಿಗೆ ಕೋಪ ಬಂದಿದೆ ಅನಿಸುತ್ತೆ. ಆದರೆ ನನ್ನ ಭಾವನೆಗಳನ್ನು ಹೇಗೆ ಅವಳ ಬಳಿ ಹೇಳಿಕೊಳ್ಳಲಿ. ಇಷ್ಟು ವರ್ಷದಿಂದ ಸ್ನೇಹಿತರ ಹಾಗೆ ಇದ್ದು ಈಗ ಇದ್ದಕ್ಕಿದ್ದಂತೆ ನಾನು ನಿನ್ನನ್ನು ಪ್ರೀತಿ ಮಾಡುತ್ತಿದ್ದೇನೆ ಎಂದರೆ ಅವ ಆದರೆ ನಾನೇನೂ ಮಾಡಬಾರದ ಅಪರಾಧವೇನೂ ಮೂರು ತಿಂಗಳ ನಂತರ ಮನೆಗೆ ಬಂದ ನನ್ನನ್ನು ಕಂಡು ಅಮ್ಮ ಬಹಳಷ್ಟು ಖುಷಿ ಆಗಿದ್ದರು. ಏನೋ ಚೇತೂ ಅಂತೂ ಮೂರು ತಿಂಗಳ ನಂತರ ಅಮ್ಮನ ನೆನಪಾಯ್ತೇನೋ...ಅಮ್ಮ ಹಾಗೇ ನಾನು ಕಳೆದ ಬಾರಿ ಬಂದಾಗಲೇ ಹೇಳಿದ್ದೆನಲ್ಲ... ಹೋಗಲಿ ಬಿಡು ಅಂತೂ ಬಂದೆಯಲ್ಲ...ಅದು ಸರಿ ನನ್ನ ಸೊಸೆ ಎಲ್ಲೋ.... ಅಮ್ಮ ಸುಮ್ಮನೆ ಸೊಸೆ ಸೊಸೆ ಅಂತ ಯಾಕೆ ಅಂತೀಯ....ಅವಳೇನು ನನ್ನ ಮದುವೆ ಮಾಡಿಕೊಳ್ಳುತ್ತಾಳ...ಸುಮ್ಮನೆ ಯಾಕೆ ಪದೇ ಪದೇ ಸೊಸೆ ಅಂತೀಯ...ಎಂದು ಕೋಪದಿಂದ ಒಳಗೆ ನಡೆ ಹಿಂದಿನಿಂದಲೇ ಬಂದ ಅಮ್ಮ ಅದ್ಯಾಕೋ ಚೇತೂ ಹಾಗೆ ಮಾತಾಡ್ತಾ ಇದ್ದೀಯ. ಏನಾ ಸರಿ ಬಿಡು ಇನ್ನು ಮುಂದೆ ಅವಳನ್ನು ಸೊಸೆ ಎಂದು ಕರೆಯುವುದಿಲ್ಲ ಆಯ್ತಾ... ಛೆ ಸುಮ್ಮನೆ ಅಮ್ಮನ ಮೇಲೆ ಯಾಕೆ ರೇ ಅದೆಂಥದೋ..ಅಮ್ಮ ಮಗನ ಮಧ್ಯೆ ಕ್ಷಮೆ ಅಮ್ಮನ ಕೈರುಚಿ ಬೀಳದ ಈ ನಾಲಿಗೆ ಹಳೆ ಕೈರುಚಿಯ ಊಟ ಎಲ್ಲ ಸೇರಿ ಒಳ್ಳೆ ನಿದ್ದೆ ಎಳೆಯುತ್ತಿತ್ತು. ಕಣ್ಣು ಮುಚ್ಚಿ ಮಲಗಿದ ಕೂ ಬೆಳಿಗ್ಗೆ ಒಂಭತ್ತು ಗಂಟೆ ಆದರೂ ಇನ್ನು ಮಲಗೆ ಇದ್ದೆ. ಚೇತೂ ಚೇತೂ ಎಂದು ಮೃದುಲ ಕರೆದಂತಾಯಿತು. ನಿದ್ದೆ ನಿಧಾನವಾಗಿ ಕಣ್ಣು ಬಿಟ್ಟು ನೋಡಿದರೆ ಎದುರುಗಡೆ ಮೃದುಲ ಕುಳಿತಿದ್ದಾಳೆ. ಒಂದು ಕ್ಷಣ ಇವಳ್ಯಾಕೆ ಇಲ್ಲಿದಾಳೆ ಎಂದೆನಿಸಿದರೂ ಮರುಕ್ಷಣದಲ್ಲೇ ಬೆಳಗಿನ ಬಸ್ಸಿಗೆ ಬಂದಿರುತ್ತಾಳೆ ಎಂದು ಗೊತ್ತಾಗಿ ಏನೇ ಮನೆಗೆ ಹೋದ್ಯೋ ಅಥವಾ ಸೀದಾ ಇಲ್ಲಿಗೆ ಬಂದ್ಯಾ...ಮೊ ಹೋಗ್ತೀನೋ ಹೋಗ್ತೀನಿ ನಿನಗೆ ಹುಚ್ಚು ಅವಳು ಏನೂ ಮಾತಾಡದೆ ಹೊರಟು ಹೋದಳು. ಅವಳು ಹೋಗುತ್ತಿದ್ದಂತೆ ಅಮ್ಮ ಒಳಗೆ ಬಂದು ಚೇತೂ ಏಳೋ ಗಂಟೆ ೯.೩೦ ಆಗಿದೆ. ಎದ್ದೇಳು ಬಿಸಿ ಬಿಸಿ ರೊಟ್ಟಿ ಮಾಡುತ್ತೇನೆ ತಿನ್ನು ಎಂದು ಹೊರಟಳು. ರೊಟ್ಟಿ ಎಂದಾಕ್ಷಣ ಎಲ್ಲ ಮರೆತು ಬಾಯಲ್ಲಿ ನೀರೂರಿತು. ಹೋಗಿ ಸ್ನಾನ ಮಾಡಿ ಬಂದು ಅಮ್ಮ ಮಾಡಿಕೊಟ್ಟ ಬಿಸಿ ಬಿಸಿ ಅಕ್ಕಿ ರೊಟ್ಟಿಯ ಸವಿಯುತ್ತ ಅಮ್ಮ, ನಾನು ತಿಂಡಿ ತಿಂದು ಹೊಲದ ಕಡೆ ಹೋಗಿ ಬರುತ್ತೇನೆ ಎಂದು ಇನ್ನೊಂದು ರೊಟ್ಟಿ ಹಾಕಿಸಿಕೊಂಡು ತಿಂದು ಮುಗಿಸಿ ತಟ್ಟೆ ಇಟ್ಟು ಕೈ ತೊಳೆದು ಬಂದಾಗ ಅಮ್ಮ ಕರೆದರು. ಚೇತೂ ಹೀಗೆ ಕೇಳ್ತೀನಿ ಅಂತ ತಪ್ಪು ತಿಳಿಯಬೇಡ, ಬೆಳಿಗ್ಗೆ ಮೃದುಲ ಇಲ್ಲಿಗೆ ಬಂದಿದ್ದಳಲ್ಲ ಅವಳ ಮೇಲೆ ಏನಾದರೂ ರೇಗಿದೆಯ? ಅವಳು ಹೋಗ್ತಾ ಕಣ್ಣಲ್ಲಿ ನೀರು ಹಾಕಿಕೊಂಡು ಹೋಗುತ್ತಿದ್ದಳು. ಏನೆಂದು ಕೇಳಿದ್ದಕ್ಕೆ ಏನಿಲ್ಲ ಅತ್ತೆ ನಿನ್ನ ಮಗ ತುಂಬಾ ಬದಲಾಗಿದ್ದಾನೆ. ಯಾಕೋ ಎರಡು ಮೂರು ದಿನದಿಂದ ವಿಚಿತ್ರವಾಗಿ ಆಡುತ್ತಿದ್ದಾನೆ ಎಂದು ಹೊರಟಳು. ಯಾಕೋ ಏನಾಯ್ತೋ ನೆನ್ನೆ ನಾನು ಸೊಸೆ ಅಂದಿದ್ದಕ್ಕೆ ಅದಕ್ಕೂ ನನ್ನ ಬೈದೆ, ಈಗ ಮೃದುಲ ಮೇಲೂ ರೇಗಿದ್ದೀಯ. ಏನಾದರೂ ಜಗಳ ಆಯ್ತಾ ನಿಮ್ಮಿಬ್ಬರ ಮಧ್ಯೆ? ಅಮ್ಮ ಅಂಥದ್ದು ಏನೂ ಇಲ್ಲಮ್ಮ ಸಮಯ ಬಂದಾಗ ಹೇಳ್ತೀನಿ ಈಗ ನಾನು ಹೊಲದ ಕಡೆ ಹೋಗ್ತೀನಿ, ಮೃದುಲ ಏನಾದರೂ ಬಂದು ಕೇಳಿದರೆ ಗೊತ್ತಿಲ್ಲ ಅಂತ ಹೇಳು ಎಂದು ಹೊಲದ ಕಡೆ ಹೊರಟೆ. ಇದ್ದ ಐದೆಕರೆ ಭೂಮಿಯಲ್ಲಿ ಮೂರೆಕರೆಯಲ್ಲಿ ಭತ್ತ ಬೆಳೆದಿದ್ದರೆ ಇನ್ನೆರಡು ಎಕರೆಯಲ್ಲಿ ತರಕಾರಿ ಸೊಪ್ಪು ಎಲ್ಲ ಬೆಳೆದಿದ್ದೆವು. ಬಹಳ ದಿನಗಳ ನಂತರ ಬೆಂಗಳೂರಿನ ಆ ಗಜಿಬಿಜಿ ವಾತಾವರಣದಿಂದ ಹಸಿರಿನ ವಾತಾವರಣಕ್ಕೆ ಬಂದದ್ದು ಮನಸಿಗೆ ಏನೋ ಒಂದು ರೀತಿ ಆಹ್ಲಾದ ಉಂಟಾಗಿತ್ತು. ಅಲ್ಲೇ ಕಳೆ ಕೀಳುತ್ತಿದ್ದ ಮುನಿಯಪ್ಪ ನನ್ನನ್ನು ನೋಡಿ ನನ್ನ ಬಳಿ ಬಂದು ಏನಪ್ಪಾ ಚೇತನ್ ಚೆನ್ನಾಗಿದ್ಯ? ಹೇಗಿದೆ ಬೆಂಗಳೂರು, ಕೆಲಸ? ಹಾ ಮುನಿಯಪ್ಪ ಎಲ್ಲ ಚೆನ್ನಾಗಿದೆ, ನೀನು ಚೆನ್ನಾಗಿದ್ಯ? ಹೇಗಿದೆ ಎಲ್ಲ ಬೆಳೆ? ಹಾ ಚೇತನ್ ಎಲ್ಲ ಚೆನ್ನಾಗಿದೆ. ಇನ್ನೇನು ವಿಶೇಷ. ಯಾವಾಗ ಮದುವೆ ಊಟ ಹಾಕಿಸ್ತೀರಾ? ಪಾಪ ನಿಮ್ಮಮ್ಮ ಎಷ್ಟು ದಿನ ಅಂತ ಒಬ್ಬರೇ ದುಡಿತಾರೆ ಅವರಿಗೂ ವಯಸ್ಸಾಯ್ತು. ಮನೆಯಲ್ಲಿ ಜೊತೆಯಾಗಿ ಸೊಸೆ ಇದ್ದಾರೆ ಆಕೆಗೂ ಸ್ವಲ್ಪ ಸಹಾಯ ಆಗತ್ತೆ ಅಲ್ವಾ... ಅದು ಸರಿ ಮುನಿಯಪ್ಪ ಆದರೆ ಇಷ್ಟು ಬೇಗ ಯಾಕೆ ಮದುವೆ. ಆಗಲಿ ಈಗ ತಾನೇ ಕೆಲಸಕ್ಕೆ ಸೇರಿದ್ದೇನೆ. ಇನ್ನೊಂದು ಮೂರು ವರ್ಷ ಆಗಲಿ ಆಮೇಲೆ ಆದರಾಯಿತು. ಅದೂ ಅಲ್ಲದೆ ನನಗ್ಯಾರು ಹುಡುಗಿಯನ್ನು ಕೊಡುತ್ತಾರೆ ಎಂದು ನಕ್ಕೆ. ಅದ್ಯಾಕೆ ಚೇತನ್ ಹಾಗೆ ಹೇಳ್ತೀಯ...ಹೇಗಿದ್ರೂ ನಿಮ್ಮ ಅತ್ತೆ ಚಿಕ್ಕಂದಿನಿಂದಲೂ ಈ ಬೆಟ್ಟ ಅಂದರೆ ನ ಒಡನಾಟ ಕಮ್ಮಿ ಆಗಿ ಯಾವಾಗಲಾದರೂ ಒಮ್ಮೆ ಬರುವುದು ಆಗಿತ್ತು
Comments
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) ಭಾಗ ೩:ಅಮ್ಮನ ಕೈ ಅಡುಗೆ /ಊಟ..
In reply to ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) ಭಾಗ ೩:ಅಮ್ಮನ ಕೈ ಅಡುಗೆ /ಊಟ.. by venkatb83
ಉ: ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) ಭಾಗ ೩:ಅಮ್ಮನ ಕೈ ಅಡುಗೆ /ಊಟ..