ಹಾಲು ಯಾರ ಪಾಲು?
ಇದೊಂದು ಪುಟ್ಟ ಕಥೆ. ನೀತಿ ಬಹಳ ಇದೆ. ಇಬ್ಬರು ಗಂಡುಮಕ್ಕಳನ್ನಗಲಿ ತಂದೆ ವಿಧಿವಶರಾಗುತ್ತಾನೆ. ಒಬ್ಬ ಬುದ್ಧಿವಂತ. ನೀರಿನಲ್ಲೂ ಬೆಣ್ನೆ ತೆಗೆಯಬಲ್ಲ ಚಾಣಾಕ್ಷ.ಮತ್ತೊಬ್ಬ ದಡ್ದ, ಮುಗ್ಧ. ಅಪ್ಪನ ಆಸ್ತಿಯಾಗಿ ಇವರಿಗೆ ಉಳಿದದ್ದು ಒಂದು ಹಸು. ಒಂದು ಕಂಬಳಿ. ಅದನ್ನು ಭಾಗ ಮಾಡಿಕೊಳ್ಳಬೇಕು.ಇರುವುದು ಒಂದೊಂದೇ. ಅವುಗಳನ್ನು ಇಬ್ಬರೂ ಸಮನಾಗಿ ಹಂಚಿಕೊಳ್ಲಬೇಕು! ಬುದ್ಧಿವಂತ ದಡ್ದ ತಮ್ಮನನ್ನು ಕೇಳಿದ. ಹೇಗೆ ಹಂಚಿಕೊಳ್ಳೋಣ? ದಡ್ಡ ತಮ್ಮ ಹೇಳಿದ. ನೀನು ಬುದ್ಧಿವಂತ. ಅಣ್ಣ ಕೂಡ. ನೀನೇ ಹಂಚು-ಎಂದ. "ನನ್ನ ಹಂಚುವಿಕೆಯನ್ನು ನೀನು ಒಪ್ಪುವೆಯಾ?-ಅಣ್ಣ ಕೇಳಿದ. "ಖಂಡಿತವಾಗಿ ಒಪ್ಪುವೆ.ಯಾವ ತಕರಾರು ಮಾಡಲಾರೆ"-ತಮ್ಮ ಹೇಳಿದ. ಸರಿ ಅಣ್ನ ಹೇಳಿದ" ನೋಡು, ಹಸುವಿನಲ್ಲಿ ಮುಂಬಾಗ ನಿನ್ನ ಪಾಲು. ಹಿಂಬಾಗ ನನ್ನ ಪಾಲು" " ಆಯ್ತು, ಒಪ್ಪಿದೆ"-ತಮ್ಮ ಹೇಳಿದ.ಹಸುವಿನ ಮುಭಾಗದಲ್ಲಿ ತಲೆ ಇದೆಯಲ್ಲಾ! ಬಾಯಿಯಿಂದ ತಾನೇ ಹುಲ್ಲು ತಿನ್ನಬೇಕು! ನಿತ್ಯವೂ ಹಸುವಿಗೆಹುಲ್ಲು ತಿನ್ನಿಸುತ್ತಾ ತಮ್ಮ ಕಾಲ ಕಳೆದ. ಅಣ್ನನಾದರೋ ಹಿಂಭಾಗದಲ್ಲಿರುವ ಕೆಚ್ಚಲಿನಿಂದ ನಿತ್ಯವೂ ಹಾಲು ಕರೆದು ಉಪಯೋಗಿಸುತ್ತಾ, ಸಗಣಿಯನ್ನೂ ಕೂಡ ತನ್ನ ಪಾಲೆಂದು ...ತಮ್ಮನು ಮುಟ್ಟಲೂ ಸಹ ಬಿಡಲಿಲ್ಲ.
ಇನ್ನು ಕಂಬಳಿಯನ್ನು ಹಂಚಬೇಕಲ್ಲಾ! ಅಣ್ಣ ಹೇಳಿದ "ಇರುವುದು ಒಂದೇ. ಇದನ್ನು ಎರಡು ತುಂಡು ಮಾಡಿದರೆ ಯಾರಿಗೂ ಉಪಯೋಗವಿಲ್ಲ, ಆದ್ದರಿಂದ ನೀನು ಇಟ್ಟುಕೋ ಎಂದು ಹೇಳಲಿಲ್ಲ. ಬದಲಿಗೆ "ಹಗಲೆಲ್ಲಾ ನಿನ್ನ ಪಾಲು. ರಾತ್ರಿ ನನ್ನ ಪಾಲು" -ಎಂದ. ಸರಿ.ಹಗಲೆಲ್ಲಾ ಕಂಬಳಿಯನ್ನು ಜೋಪಾನವಾಗಿಟ್ಟು ,ಅಗತ್ಯಬಿದ್ದಾಗ ಅದನ್ನು ಶುದ್ಧಗೊಳಿಸುತ್ತಾ ರಾತ್ರಿ ಅಣ್ನನಿಗೆ ಕೊಟ್ಟು ತಾನು ನೆಲದ ಮೇಲೆ ಮಲಗುತ್ತಿದ್ದ. ಅಣ್ನ ಹಸುವಿನ ಹಾಲು ಕುಡಿದು ಕಂಬಳಿ ಹೊದ್ದು ಆರಾಮವಾಗಿ ನಿದ್ರೆ ಮಾಡಿಕೊಂಡಿದ್ದ. ಹೀಗೆಯೇ ನಾಲ್ಕಾರು ದಿನಗಳು ಕಳೆದವು. ಒಂದುದಿನ ಈ ದಡ್ದ ತಮ್ಮ ಕೆರೆಯ ದಡದಲ್ಲಿ ಹಸುವಿನ ಮೈ ತೊಳೆಯುತ್ತಾ ಇದ್ದ. ಅಲ್ಲಿಗ್ಫ಼ೆ ಸಾದುಒಬ್ಬ ಬಂದ. ಕೆರೆಯಲ್ಲಿ ಕೈಕಾಲು ತೊಳೆದುಕೊಂಡು ಮೇಲೆ ಬಂದ. ಈ ಮುಗ್ಧ ವ್ಯಕ್ತಿಯನ್ನು ನೋಡಿದ " ಯಾರು ತಮ್ಮಾ, ನೀನು ಎಂದ.
" ನಮ್ಮಣ್ಣ ನಿಮಗೆ ಗೊತ್ತಿರಬೇಕಲ್ಲಾ, ಈ ಊರಿಗೇ ತುಂಬಾ ಜಾಣ ನಮ್ಮಣ್ಣ. ಅವನ ತಮ್ಮ ನಾನು.-ಮುಗ್ಧವಾಗಿ ಉತ್ತರಿಸಿದ.
ಈ ಮುಗ್ಧನನ್ನು ನೋಡಿದಾಗಲೇ ಇವನ ವಿಚಾರವನ್ನೆಲ್ಲಾ ತನ್ನ ಅಂತ:ಚಕ್ಷುವಿನಿಂದಲೇ ಅರಿತ ಸಾದು ಮುಗ್ಧತಮ್ಮನನ್ನು ಕೇಳಿದ" ಈ ಹಸು ನಿಂದಾ? "
ಮುಗ್ಧ ತಮ್ಮ ಹೇಳಿದ."ಇದು ನಮ್ಮ ಅಣ್ಣ ಮತ್ತು ನನಗೆ, ಇಬ್ಬರಿಗೂ ಸೇರಿದ್ದು. " ಅದು ಹೇಗೆ ಹಂಚಿಕೊಂಡಿರಿ?"-ಸಾದು ಕೇಳಿದ.
ಬಲು ಸುಲಭ. ಮುಂದಿನ ಭಾಗ ನನ್ನ ಪಾಲು, ಹಿಂದಿನ ಭಾಗ ನಮ್ಮ ಅಣ್ಣನ ಪಾಲು.ಹಿಂದಿನಿಂದ ಇದು ಹಸು ಅಂತ್ಯಾ ಯಾರಿಗೆ ಗೊತ್ತಾಗುತ್ತೇ? ಅದಕ್ಕೆ ಎಲ್ಲರೂ "ಈ ಹಸು ನಿಂದಾ ? ಅಂತಲೇ ಕೇಳ್ತಾರೆ.
ಸರಿ, ಹಾಲು ಯಾರ ಪಾಲು?
ಅದು ನಮ್ಮಣ್ಣನ ಪಾಲು. ಅದೇ ನ್ಯಾಯವಲ್ಲವೇ? ಕೆಚ್ಚಲು ಮುಂದಿದ್ದರೆ ನನ್ನ ಪಾಲಾಗುತ್ತಿತ್ತು. ನಿಮಗೆ ಅಷ್ಟೂ ಗೊತ್ತಾಗುವುದಿಲ್ಲವೇ?- ಮುಗ್ಧ ತಮ್ಮ ಸಾದುವಿನ ಬಗ್ಗೆ ಕನಿಕರದ ಮಾತನಾಡಿದ.
ಸಾದುವಿಗೆ ಮುಗ್ಧ ತಮ್ಮನ ಬಗ್ಗೆ ಕನಿಕರವೂ ಅಣ್ಣನ ಬಗ್ಗೆ ಸಿಟ್ಟೂ ಒಮ್ಮೆಲೇ ಬಂದಿತು.
ತಮ್ಮನನ್ನು ಕೇಳಿದ" ಆಸ್ತಿ ,ಇಷ್ಟೇ ನಾ? ಇನ್ನೂ ಏನಾದರೂ ಇದೆಯೇ?"
ತಮ್ಮ ಹೇಳಿದ" ಇನ್ನೂ ಇದೆ, ಒಂದು ಕಂಬಳಿ ಇದೆ. ಅದು ಹಗಲಲ್ಲಿ ನನ್ನ ಹತ್ತಿರ ಇರುತ್ತೆ. ರಾತ್ರಿ ನಮ್ಮಣ್ನನಿಗೆ ಕೊಡ್ತೀನಿ"
ಸಾದುವಿಗೆ ಈ ದಡ್ದ ತಮ್ಮನ ಬಗ್ಗೆ ಕನಿಕರ ಇನ್ನೂ ಹೆಚ್ಚಾಗಿ ಅವನ ಅಣ್ನನ ಮೇಲೆ ಬಲು ಕೋಪ ಬಂತು. ತಮ್ಮನಿಗೆ ಹೇಳಿದ" ನೋಡು ನಾನು ಹೇಳಿದಂತೆ ಮಾಡುವೆಯಾ? ನಿನಗೆ ಅನುಕೂಲ ಮಾಡುವೆ"
ತಮ್ಮ ಹೇಳಿದ" ನಾನು ಯಾರಿಗೊ ದ್ರೋಹ ಬಗೆಯಲಾರೆ. ದೇವರು ಮೆಚ್ಚುವಂತಿದ್ದರೆ ಹೇಳಿ ನಿಮ್ಮ ಮಾತು ಕೇಳುವೆ.
ಸಾದು ಹೇಳಿದ " ಅಯ್ಯೋ ದಡ್ಡ, ನಾನು ಸಾದು ಅನ್ನೋದೂ ನಿನಗೆ ಗೊತ್ತಾಗಲಿಲ್ಲವೇ? ನಾನು ಯಾವತ್ತೂ ಯಾರಿಗೂ ದ್ರೋಹ ಬಗೆಯುವ ಕೆಲಸ ಮಾಡಿಸುವುದಿಲ್ಲ, ಹಾಗೆಯೇ ಅನ್ಯಾಯವನ್ನು ಸಹಿಸಿಕೊಳ್ಳುವುದೂ ಇಲ್ಲ.
"ಆಯ್ತು ,ಹೇಳಿ ಸ್ವಾಮಿ, ನಾನೇನು ಮಾಡಬೇಕು"-ದಡ್ದ ಕೇಳಿದ
"ನೀನು ಒಂದು ಚಿಕ್ಕ ಕೆಲಸ ಮಾಡಬೇಕು. ಹಸುವಿನ ಮುಂಭಾಗ ನಿನ್ನದು ತಾನೇ?"
"ಹೌದು"
-ಹಾಗಾದರೆ ನಿಮ್ಮಣ್ಣ ಹಾಲು ಕರೆಯುವಾಗ ನೀನು ಹಸುವಿನ ತಲೆಯ ಮೇಲೆ ಸ್ವಲ್ಪ ಪೆಟ್ಟು ಕೊಡಬೇಕು ಹಸುವಿಗೆ ಕಿರಿ ಉಂಟುಮಾಡಿ ಅದು ಅಡ್ಡಾಡುವಂತೆ ಮಾದಬೇಕು"
ದಡ್ದ ಹಾಗೆಯೇ ಮಾಡಿದ .ಅಣ್ಣ ಹಾಲು ಕರೆವಾಗ ಹಸುವಿಗೆ ಕಿರಿಕಿರಿ ಉಂಟು ಮಾಡಿದ .ಹಸು ಒಮ್ಮೆಲೇ ಹಾಲು ಕರೆಯುತ್ತಿದ್ದ ಅಣ್ಣನಿಗೆ ಜಾಡಿಸಿ ಒದೆಯಿತು. ಹಾಲು ಚೆಲ್ಲಿಹೋಯ್ತು.
" ಯಾಕೆ ಹೀಗೆ ಮಾಡಿದೆ?- ಅಣ್ಣ ಕೇಳಿದ
ಸಾದು ಹೇಳಿಕೊಟ್ಟಿದ್ದಂತೆ ತಮ್ಮ ನುಡಿದ" ನನ್ನ ಪಾಲಿನಲ್ಲಿ ನಾನು ಏಬ್ನಾದರೂ ಮಾಡಿಕೊಳ್ಳುವೆ. ನಿನ್ನ ಪಾಲಿಗೆ ಬರಲಿಲ್ಲವಲ್ಲಾ!
ಅಣ್ಣ ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಹಾಲಿನಲ್ಲಿ ಸಮಭಾಗವನ್ನು ತಮ್ಮನಿಗೂ ಕೊಡಲು ಆರಂಭಿಸಿದ. ಅದಾಗಲೇ ಕಂಬಳಿ ಬಗೆಗೂ ಸಾದು ಯೋಜನೆ ರೂಪಿಸಿದ್ದರು" ಸಂಜೆ ಸೂರ್ಯ ಮುಳುಗುವ ವೇಳೆಗೆ ಕಂಬಳಿಯನ್ನು ನೀರಿನಲ್ಲಿ ನೆನೆಸಲು ತಿಳಿಸಿದ್ದರು. ಅಂತೆಯೇ ದಡ್ದ ನು ಸಾದುವಿನ ಸೂಚನೆಯನ್ನು ಪಾಲಿಸಿದ್ದ. ಅಂದು ರಾತ್ರಿ ಇಬ್ಬರೂ ಛಳಿಯಲ್ಲಿ ಮಲಗಿದ್ದರು. ಬೆಳಗಾಗುತ್ತಲೇ ಅಣ್ನ ಹೇಳಿದ" ಇಂದಿನಿಂದ ರಾತ್ರಿ ಮಲಗುವಾಗ ಇಬ್ಬರೂ ಒಟ್ಟಿಗೆ ಹೊದ್ದು ಮಲಗೋಣ. ದಡ್ದನಿಗೆ ಹಾಲಿನಲ್ಲೂ ತನ್ನ ಪಾಲು ಸಿಕ್ಕಿತು. ಕಂಬಳಿಯಲ್ಲೂ. ನಾವು ನ್ಯಾಯಸಮ್ಮತ ವ್ಯವಹಾರವನ್ನು ನೋಡಬೇಕೇ ಹೊರತೂ ಇವ ಅಣ್ಣ ,ತಮ್ಮ,ಅಕ್ಕ ತಂಗಿ, ಬಂಧು ಬಳಗ ಅನ್ನೋ ಭಾವ ಬೇಡ. ಮನುಷ್ಯತ್ವ ಮರೆತ ಅಣ್ಣನು ಅಣ್ಣನಾಗಿರಲು ಸಾಧ್ಯವೇ?
Comments
ಉ: ಹಾಲು ಯಾರ ಪಾಲು?:ಉತ್ತಮ ನೀತಿ ಕಥಾ ಬರಹ,..
In reply to ಉ: ಹಾಲು ಯಾರ ಪಾಲು?:ಉತ್ತಮ ನೀತಿ ಕಥಾ ಬರಹ,.. by venkatb83
ಉ: ಹಾಲು ಯಾರ ಪಾಲು?:ಉತ್ತಮ ನೀತಿ ಕಥಾ ಬರಹ,..
In reply to ಉ: ಹಾಲು ಯಾರ ಪಾಲು?:ಉತ್ತಮ ನೀತಿ ಕಥಾ ಬರಹ,.. by hariharapurasridhar
ಉ: ಹಾಲು ಯಾರ ಪಾಲು?:ಉತ್ತಮ ನೀತಿ ಕಥಾ ಬರಹ,..
In reply to ಉ: ಹಾಲು ಯಾರ ಪಾಲು?:ಉತ್ತಮ ನೀತಿ ಕಥಾ ಬರಹ,.. by hariharapurasridhar
ಉ: ಹಾಲು ಯಾರ ಪಾಲು?:\|/ ಟೈಪಿಂಗ್ ದೋಷ ಪ್ರವೀಣ್ ಬಿರುದು..!!
In reply to ಉ: ಹಾಲು ಯಾರ ಪಾಲು?:\|/ ಟೈಪಿಂಗ್ ದೋಷ ಪ್ರವೀಣ್ ಬಿರುದು..!! by venkatb83
ಉ: ಹಾಲು ಯಾರ ಪಾಲು?:\|/ ಟೈಪಿಂಗ್ ದೋಷ ಪ್ರವೀಣ್ ಬಿರುದು..!!
In reply to ಉ: ಹಾಲು ಯಾರ ಪಾಲು?:\|/ ಟೈಪಿಂಗ್ ದೋಷ ಪ್ರವೀಣ್ ಬಿರುದು..!! by hariharapurasridhar
ಉ: ಹಾಲು ಯಾರ ಪಾಲು?:ಎಲ್ಲರೂ ಹಾಗೆ ಇರಲು ಕಸ್ಟ ಸಾಧ್ಯ...