ರಸಬಾಳೆ
ಸೂಚನೆಃ ಕೆಳಗಿನ ಸಾಲುಗಳನ್ನು ``ರಘುಪತಿ ರಾಘವ ರಾಜಾ ರಾಂ`` ಇಲ್ಲವೆ `` ಚಂಡಕಿ ರಣಕುಲ ಮಂಡನ ರಾಂ`` ರಾಗದಲ್ಲಿ ಹೇಳುವುದು.
ನಂಜನಗೂಡಿನ ರಸ ಬಾಳೆ
ಹಳದಿಯ ಸಿಪ್ಪೆಯು ಹೊನ್ನಬಳೆ
ಜಿಗಿದರೆ ಬಾಯೊಳು ಜೇನ ಮಳೆ
ತುಂಬಿತು ಉದರದಿ ರಸದ ಹೊಳೆ
ನಂಜನಗೂಡಿನ...
ಕಪಿಲೆಯ ದಡದಿಹ ಕದಳಿ ವನ
ನೋಡಲು ಅರಳಿತು ನಗೊ-ವದನ
ಹರುಷದಿ ಕುಣಿಯಿತು ನಗುವ ಮನ
ನಳನಳಿಸುವ ಈ ಹಸಿರು ಬನ.
ನಂಜನಗೂಡಿನ.....
ಬಲವದು ಕಾಯಕೆ ಕದಳಿ ಫಲ
ಹನುಮನ ಪೂಜೆಗೆ ಇದು ಸು-ಫಲ
ನಿತ್ಯ ನಿರಂತರ ದೊರೆವ ಫಲ
ಸತ್ಯವೊ ಕರಿಗಿದು ಮಧುರ ಫಲ.
ನಂಜನಗೂಡಿನ.....
ಕಲ್ಲುಸಕ್ಕರೆಯ ಮರೆವ ಮನ
ರಸಬಾಳೆಯ ಸಿಹಿ ಸವಿದ ದಿನ.
ಬೇಡವೊ ಅದು ಇದು ಅನುಮಾನ
ತಿಂದು ನಿರತ ನೆನೆ ಶ್ರೀಕಂಠನ.
Rating
Comments
ಉ: ರಸಬಾಳೆ: ಸಿಹಿ-ಸವಿ ನೆನಪು.....
ಉ: ರಸಬಾಳೆ
ಉ: ರಸಬಾಳೆ
In reply to ಉ: ರಸಬಾಳೆ by H A Patil
ಉ: ರಸಬಾಳೆ