ಸಂಪದಿಗರಿಬ್ಬರ ವಿಶೇಸಮ್ಮಿಲನ @ ಮೆಜೆಸ್ಟಿಕ್-ಕೊನೆಯ ಭಾಗ...

ಸಂಪದಿಗರಿಬ್ಬರ ವಿಶೇಸಮ್ಮಿಲನ @ ಮೆಜೆಸ್ಟಿಕ್-ಕೊನೆಯ ಭಾಗ...

 


ಇಲ್ಲೀವರೆಗೆ-

ನಮ್ಮ ಸಂಪದದ - ಸದಾ ಸಕ್ರಿಯ ಮಿತ್ರರು(ವಯಸ್ಸಲ್ಲಿ ಹಿರಿಯರು),ಅವರ ಫೋಟೋ ನೋಡದೇ ಅವರು ಹೇಗಿರುವರೋ ಅಂತ ತಿಳಿಯದೇ ಬರೀ ಊಹೆ ಮಾಡಿಕೊಳ್ಳುತ್ತ ಇರುವ ನಾವ್...(ಇದು ಬಹುತೇಕ ಜನ ಸಂಪದ ಮಿತ್ರರ ಮಟ್ಟಿಗೆ ನಿಜ- ಫೋಟೋ ಹಾಕದೆ ಇರುವವರನ್ನು ಅವರು ಬರೆವ ಲೇಖನ ಬರಹ್ಗಳಿಂದ ಹೀಗೆ ಇರಬಹುದಾ? ಎನ್ನುವ ಭಾವ ಕಲ್ಪನೆ ಊಹೆ ಮೂಡುವುದು ಸಹಜ)  ಆದರೆ ಎಲ್ಲರನ್ನೂ ಬಿಟ್ಟು ಸಪ್ತಗಿರಿವಾಸಿಯನ್ನು ಅವರು ಮೀಟ್ ಮಾಡಲು ಆಯ್ದುಕೊಡದ್ದಕ್ಕೆ ಯಾವ ವಿಶೇಷತೆಯೂ ಇಲ್ಲ.
 
ಮತ್ತೆ????
 
ನಿಮ್ಮ ಯಾರ ಫೋನ್ ನಂಬರ್ ಆಗಲಿ ವಿಳಾಸವಾಗಲಿ ಅವರಿಗೆ ಗೊತ್ತಿರಲಿಲ್ಲ..!!
ನನ್ನ ನಂಬರ್ ಅವರಿಗೆ ಹೇಗೆ ಸಿಕ್ಕಿತು???
ಅದೊಮ್ಮೆ ನಾ ಅವರಿಗೆ ಮೇಲ್ ಮಾಡಿದ್ದೆ ಅದರಲ್ಲಿ ನನ್ನ ನಂಬರ್ ಕೊಟ್ಟಿದ್ದೆ...
 
'ಅವರು' ಬೆಂಗಳೂರಿನ ಕೆಂಪೇಗೌಡ ಬಸ್ಸು ನಿಲ್ದಾಣದಲ್ಲಿ(ಕೆ ಎಸ್ ಆರ್ ಟೀ ಸಿ) ನನಗೆ ಸಿಕ್ಕರು-
ಆಮೇಲೆ ಏನಾಯ್ತು? 
 
ಓದಿ ಕೊನೆಯ ಈ ಭಾಗದಲ್ಲಿ..

ವಧು ಅನ್ವೇಷಣೆಗೆ ಹೋಗುವಾಗ-ಲವ್ನಲ್ಲ್ ಬಿದ್ದು ಆ ವಿಷ್ಯ ಹುಡುಗಿಗೆ ಹೇಳುವಾಗ ಪರೀಕ್ಷೆ ಬರೆವಾಗ-ರಿಜಲ್ತು ಬಂದಾಗ ಆಗುವದಕ್ಕಿಂತ ಹೆಚ್ಚಿನ ಉದ್ವೇಗ-ಆತುರ-ಕಾತುರ-ಸಂತಸ-ಸಂಭ್ರಮ-ದುಗುಡ-ಆತಂಕ ಎಲ್ಲವೂ ನನ್ನಲ್ಲಿ ಮೇಳಯಿಸಿ ಕೊನೆಗೂ
ಆ ಕ್ಷಣ ಬಂತು.....
 
ಮಾತಾಡುತ್ತಾ  'ಅವರು' ಒಳಗೆ ಬಂದರು, ಆ ಹಾವ ಭಾವ ಉಚಾರಣೆ ವ್ಯಕ್ತಿತ್ವ ನೋಡಿ ನಾ ಅಂದುಕೊಂಡೆ ಇವರೇ ಇರಬೇಕು..

ಸ್ಸಾ.. ಅದು ನೀವೇನಾ? ಅಂತ ಕೈ ಮಾಡಿ ಕೇಳಿದೆ, ಅವರು ನಾ ಕೈ ಅಡ್ಡಡ್ಡ ಆಡಿಸುತ್ತಿರುವುದು ನೋಡಿ ನಃಗುತ್ತಾ ಹತ್ತಿರ ಬಂದರು,ಕೈ ಕುಲುಕಿದರು, ನನ್ನಸ್ತೆ ಖ್ಸುಷಿ ಸಂಭ್ರಮ ಅವರ ಮುಖದಲ್ಲೂ ಎದ್ದು ಕಾಣುತ್ತಿತ್ತು... 
ಹೌದು ಅದೆಲ್ಲ ಅತ್ಲಾಗಿರ್‍ಲೀ...
ಅವರು ಹೇಗಿದ್ದರು?
ಯಾವ ಡ್ರೆಸ್ ಹಾಕಿದ್ದರು?
ಅವರು ನಾವ್ ಕಲ್ಪ್ಸಿಕೊಂಡ ಹಾಗೆಯೇ ಇರುವರೆ?
ಅಂತ ನೀವೆಲ್ಲ ಕೇಳುವಿರಿ,,,ನನಗೆ ಗೊತ್ತು....
ಅವರು .......??????
 





ನಾವೆಲ್ಲ ಕಲ್ಪಿಸಿಕೊಂಡಿದ್ದಕ್ಕೆ ವಿರುದ್ಧವಾಗಿದ್ದರು....:((((

ಫುಲ್ಲ್ ಸಿಂಪಲ್....
ಸುಮಾರು ೫೫ ರೇಂಜಿನ ವಯಸ್ಸು- ವ್ಯಾಯಾಮ ಮಾಡಿದ್ದರ ಮತ್ತು ಯೋಗ - ಧ್ಯಾನ -ಪ್ರಾಣಾಯಾಮ ಮಾಡುವುದಕ್ಕೋ ಏನೋ ಆರೋಗ್ಯಕರವಾದ ಶರೀರ... ಆದರೆ ಎತ್ತರಕ್ಕೂ ಅಲ್ಲ ಕುಳ್ಳಗೂ ಅಲ್ಲ ದಪ್ಪಗೂ ಅಲ್ಲ ಸಣ್ನಗೂ ಅಲ್ಲ-ಮೀಡಿಯಮ್ ಅಂತಾರಲ್ಲ ಹಾಗೆ ಇದ್ದರು...

ಅರೆ ಕಪ್ಪು ಅರೆ ಬೆಳ್ಳಿ ಕೇಶರಾಶಿ...!!!

ಎಡಗಡೆ ಇಂದ ಬಲಗಡೆಗೆ ಬಾಚಿದ ಕೂದಲು, ಕಣ್ಣಿಗೆ........ಕನ್ನಡಕ(ಅದು ನಾವ್ ಊಹಿಸಿದ್ದೆ...ಅಲ್ಲ..!!)
ಗಡ್ಡ ಸ್ವಲ್ಪ ಬೆಳೆದು(ಯಾವ ವಿಧವಾಗಿ ನೋಡಿದರೂ ಒಬ್ಬ ಬರಹಗಾರ-ಲೇಖಕ ಅನ್ನುವ ಹಾಗೆಯೇ ಕಾಣಿಸುತ್ತಿದ್ದರು..!!-ಮತ್ತು ಅದು ನಿಜ ಕೂಡ..)
ಕಂದು ಬಣ್ಣದ ಪ್ಯಾಂಟು(ನಾವ್ ಊಹಿಸಿದ ಹಾಗೆ ಬೆಲ್ ಅಲ್ಲ-ಬಟನ್ನು ಅಲ್ಲ..!!)
ಅದಕ್ಕೆ ವಿರುದ್ಧವಾಗಿ ಫುಲ್ಲ್ ತಿಳಿ ಶರ್ಟ್,ಇನ್ ಶರ್ಟ್ ಮಾಡಿದ್ದರು, ಕಾಲಲ್ಲಿ ಚಪ್ಪಲಿ... ಹೆಗಲಲ್ಲಿ ಮೀಡಿಯಮ್ ಸೈಜ್ ಬ್ಯಾಗು ....
ಒಟ್ಟಿನಲ್ಲಿ ನಾವ್ ಕಲ್ಪಿಸಿಕೊಂಡದ್ದಕ್ಕೆ ತೀರಾ ವಿರುದ್ಧ ವ್ಯಕ್ತಿ-ವ್ಯಕ್ತಿತ್ವ...!!
 
ಭೇಟಿಯಾಗಿ ಇದು ನಿಮಿಷಗಳಲ್ಲೇ ಎಸ್ಟು 'ಪರಿಚಿತರು' ಅನ್ನಿಸಿತು ಅಂದ್ರೆ ನಾವ್ ಅವರೊಡನೆ ತುಂಬಾ ವರುಷಗಳಿಂದ 'ಸಲುಗೆಯಿಂದ' ಇರುವಸ್ತು...!!
ನನ್ನ ಅವರ ವಯಸ್ಸಿನ 'ಅಂತರವೂ'  ಯಾವುದೇ ಪರಿಣಾಮ ಉಂಟು ಮಾಡಲಿಲ್ಲ.. ಅವರ ಸ್ನೇಹ ಸಲುಗೆ ನನಗೆ 'ಅಚ್ಚರಿ' ಉಂಟು ಮಾಡಿತು..
ಬನ್ನಿ ಸ್ಸಾ... ಊಟ ಮಾಡುವ ಅಂತ ,ಅಲ್ಲಿಯೇ ಮೊದಲ ಮಹಡಿಯಲ್ಲಿ ಇರುವ(ಕೆಂಪೇಗೌಡ ಕೆ ಎಸ್ ಆರ್ ಟೀ ಸಿ ಬಸ್ಸು ನಿಲ್ದಾಣ ಮೇಲೆ) ಹೊಟೆಲ್ಲಿಗೆ ಹೋದೆವು....
ಅಲ್ಲಿ ನಾವ್ ಇಬ್ಬರು ಮಾತಾಲು 'ಪ್ರಸ್ಯಸ್ತ ಸ್ಥಳ' ಹುಡುಕಿಕೊಂಡು ಕೂತೆವು..
ಕೈ ತೊಳೆದುಕೊಂಡು ಬಂದು, ಮೆನೂ ನೋಡಿ ಸಾ... ನೀವ್ ವೆಜ್ಜ? ನಾನ್ ವೆಜ್ಜ?

ಅದೇನ್ ಹಾಗೆ ಕೇಳುವಿರಿ?
ನಾನೂ ವೇಜ್ಜೂ -ನೀವೂ ವೇಜ್ಜೆ ಅನ್ನೊದ......!

ಅಲ್ಲ ಸ್ಸಾರ್. ಊಟ ನಿಮಗೆ ಸಸ್ಯಾಹಾರಿ -ಮಾಂಸಾಹಾರಿ ಬೇಕೋ? ಅಂತ....

ಸಸ್ಯಾಹಾರಿ -ನೀವು?
ನನಗೂ ಅದೇ ಬೇಕು ಸ್ಸಾರ್...
ಬೇರರ್‌ಗೆ ಎರಡು ವೇಜ್  ದಕ್ಷಿಣ ಭಾರತ ಶೈಲಿ ಊಟ ಹೇಳಿ,
ನಾ ಅವರಿಗೆ ಕೊಡಲೇ ಅಂತ ಮನೆಯಿಂದ ತಂದಿದ್ದ 'ಸುಧಾ ಯುಗಾದಿ ವಿಶೇಷಾಂಕ-೨೦೧೨' ಕೈಗಿತ್ತೆ, ಓ..!! ಇದರ ಬಗ್ಗೆ ನೀವ್ ಸಂಪದದಲ್ಲಿ ಬರೆದಿದ್ದೀರಲ್ಲ... 
ಊರಿಗೆ ಹೋಗುವಾಗ ಬಸ್ಸಿನಲ್ಲಿ-ಹೋದ ಮೇಲೆ ಅದನ್ನು ಓದುವೆ... ವಂದನೆಗಳು...
 
 ಈಗ ಮಾತು ಶುರು ಮಾಡಿದೆವು...
 
ನಿರೀಕ್ಷೆಯಂತೆಯೇ ಸಂಪದ -ಸಂಪದದಲ್ಲಿ ನಾವ್ -ನೀವ್ ಬರೆವ ಬರಹಗಳು ಪ್ರತಿಕ್ರಿಯೆಗಳು ಕರ್ನಾಟಕ ಭಾಷೆ -ಸಂಸ್ಕೃತಿ-ಅನ್ಯ ರಾಜ್ಯಗಳ ಬಗ್ಗೆ ಅಲ್ಲಿನ  ಸಮಸ್ಯೆಗಳ ಬಗ್ಗೆ ಬೆಂಗಳೂರು ಟ್ರಾಫಿಕ್ಕು -ರಾಮ ಮೋಹನ ಅವ್ರ -ಬೆಂಗಳೂರು ಟ್ರಾಫಿಕ್ ಹಾಡು ಸಹಾ ಬಂತು- ಅದನ್ನು ಇಬ್ಬರೂ ನೆನೆದು ನಕ್ಕೆವು..ಮೆಟ್ರೋ ರಾಜಕೀಯ, ಸಿನೆಮಾ ಡಬ್ಬಿಂಗ್ ಎಲ್ಲವೂ ಚರ್ಚೆ ಮಾಡಿದೆವು...
 
ನಮ್ಮ ಮಾತು ಕಥೆ ಮದ್ಯೆ ನಾವ್ ನೆನೆಸಿದ್ದು- 
 
ಆಸು ಹೆಗ್ಡೆ- (ಸಂಪದದಲ್ಲಿ ಹಳಬರು-ಸಕ್ರಿಯರು ಅಂತ)-
ಗುರುಗಳು-
ರಾಮ ಮೋಹನ-
ಕವಿ ನಾಗರಾಜ ಅವರು(ಮೂಢ ಉವಾಚ)-
ಶ್ರೀಕರ್(ಕೊಂಡಿ) ಅವರು-(ಸಂಪದದಲ್ಲಿ ಹಳಬರು-ಸಕ್ರಿಯರು ಅಂತ)-
ಸುಪ್ರೀತ್-(ಸಂಪದದಲ್ಲಿ ಹಳಬರು-ಸಕ್ರಿಯರು ಅಂತ)-
ಹೇಮಾ ಪವಾರ್(ಹೆಣ್ಣು ನೋಡಲು ಬಂದವರ ಬಗ್ಗೆ ಬರೆದ ಬರಹಗಳು..!!) + (ಸಂಪದದಲ್ಲಿ ಹಳಬರು-ಸಕ್ರಿಯರು ಅಂತ)-
ಚೇತನ್(ಮೊನ್ನೆ ಮದುವೆ ಆಯ್ತು ಅಂತ..!!)-
ಸತೀಶ್-ನರ ಹರಿ ಒಳಗೊಂಡ ನುಡಿ ಮುತ್ತುಗಳ ಬಗ್ಗೆ
ಹರಿ ಪ್ರಸಾದ್-ಸುಮ ನಾಡಿಗ್ ದಂಪತಿ(ಸಂಪದ ತಾಣವನ್ನು ಅವರು ನಡೆಸುತ್ತಿರುವ ಬಗ್ಗೆ)-
ನಂಜುಂಡ ಅವರು(ಅವರು ವ್ಯಾಕರಣ ದೋಷ ಹುಡುಕುವುದು-ತಿದ್ದುವುದರ ಬಗ್ಗೆ)-
ಪೀ ಕುಮಾರ್(ಹೊಸ ಸದಸ್ಯರು), ಹೊ ರ ಲ ವೆಂಕಟೇಶ್ ಅವರು(ಅವರ ಚಿತ್ರಗಳಿಗಾಗಿ), ಲಿಸ್ಟ್ ದೊಡ್ಡದು ಆಗುತ್ತೆ... 
ಅಸ್ತೆಲ್ಲಾ ಲಿಸ್ಟ್ ನೋಡಿದ ಮೇಲೆ ನಿಮಗೆ ಇಲ್ಲಿ ಇನ್ನೂ ಕೆಲವರ ಅವರಲ್ಲೂ .......ರ ಹೆಸರು ಇಲ್ಲವಲ್ಲ ಅಂತ ಅಚ್ಚರಿಯೇ?... 
ಅದು ನಾ ಆಮೇಲೆ ಹೇಳುವೆ...ಗೆಸ್ ಗೇಂಗಾಗಿ ಈಗ ಹೇಳಿಲ್ಲ...!!
 
ಅಂದ್ ಹಾಗೆ ನಾವ್ ಈ ಎಲ್ಲ ವಿಷ್ಯಗಳನ್ನ ಮಾತಾಡಿದ್ದು 'ದಕ್ಷಿಣ ಶೈಲಿ' ಊಟ ಮಾಡುತ್ತಲೇ-ಮತ್ತು ನಿಮ್ಮ ಊಹೆ ನಿಜ-ಒಂದು ಊಟ ಮುಗಿಸಲು ಅರ್ಧ ಘಂಟೆಗಿಂತಲೂ ಹೆಚ್ಚು ಆಯ್ತು..!!
 
ಆ ಮಧ್ಯ ನಮ್ಮ ಅಕ್ಕಪಕ್ಕ ಟೇಬಲ್ ಗೆ ಹೊಸ ಗ್ರಾಹಕರ ಆಗಮನ ಆಗುತ್ತಲೇ ಇತ್ತು..!!
ನಾವ್ ಸಾಹಿತ್ಯ-ಸಂಪದ ಬರಹ ಕಥೆ ಪ್ರತಿಕ್ರಿಯೆ ಅಂತೆಲ್ಲಾ ಮಾತಾಡೋದು ಕಂಡು ಸುತ್ತಮುತ್ತಲಿನ ಟೇಬಲ್ ಜನ, ನನ್ನ ಎದುರು ಕುಳಿತಿದ್ದ ಅವರನ್ನು(ಅವರ ಮುಖ  ಚಹರೆ ಮತ್ತು ವೇಷ ಭೂಷಣ ಹಾಗೆ ಅನ್ನಿಸುವ ಹಾಗೆ ಮಾಡಿದ್ದವೇನೋ...!!) ಯಾರೋ ಫೇಮಸ್ ಕಥೆಗಾರ ಇರಬೇಕು,ಈ ಹುಡುಗ(ನಾನೇ) ಅವರ ಅಭಿಮಾನಿ ಇರಬೇಕು ಅಂತ ಅಂದುಕೊಂಡ ಹಾಗಿತ್ತು...!! 
ಊಟ  ಮುಗಿಸಿ ಕೈ ತೊಳೆದುಕೊಳ್ಳಲು ನಾ ಮುಂದೆ ಹೋದೆ, ಹಿಂದೆ ಇವರು ಎಸ್ಟು ಹೊತ್ತಾದರೂ ಬಾರದೇ ಇದ್ದಾಗ, ವಾಪಾಸ್ಸು ಬಂದು ನೋಡಿದರೆ.............????

ಸೀದಾ ಬಿಲ್ ಕೌಂಟೆರ್ ಹತ್ತಿರ ಹೋಗಿ 'ಬಿಲ್ ' ಕೊಟ್ಟು ವಾಪಾಸ್ಸು ಬರುತ್ತಿರುವರು...:()))
ಆ ಬಿಲ್ ನಾನೇ ಕೊಡಬೇಕು ಅಂದುಕೊಂಡಿದ್ದೆ ಆದರೆ.........!!
ಆಮೇಲೆ ಅವರಿಗೆ ಆ ಬಗ್ಗೆ ಕೇಳಿದಾಗ,ಅಯ್ಯೋ ಈ ಸಣ್ಣ ಪುಟ್ ಬಿಲ್ ಏನು, ಮುಂದೊಮ್ಮೆ ದೊಡ್ಡ  ಟ್ರೀಟ್ಕೊಟ್ಟು  'ಬಿಲ್ 'ನೀವೇ ಎತ್ತುವಿರಂತೆ ಎನ್ನೋದಾ...:(
 
ಹೊಟೇಲಿನಿಂದ ಆಚೆ ಬಂದು ಅದೇ ೩ ನೇ ಪ್ಲಾಟ್‍ಫಾರ್ಮ್‌ನಲ್ಲಿ  ನಿಂತುಕೊಂಡೆ(ರಾತ್ರಿ ಮತ್ತು ವೀಕೆಂಡ್ ಹೀಗಾಗಿ ಇರುವ ಕೆಲವೇ ಸೀಟುಗಳನ್ನು ಹಲವಾರು ಆಕ್ರಮಿಸಿದ್ದರು-ಅತಿಕ್ರಮಿಸಿದ್ದರು..!!)ಮತ್ತೆ ಒಂದು ಘಂಟೆ ಮಾತಾಡಿದೆವು,ನಾ ಸಹಜ ಕೃಷಿ ' -'ಸಾವಯವ ಕೃಷಿಯಲಿ' ಆಸಕ್ತಿ ವ್ಯಕ್ತಪಡಿಸಿ ಅವರು ಏನಾರಾ ಸಹಾಯ ಮಾಡಬಹುದಾ? ಎಂದಾಗ ಮೈಸೂರಿನ ತಮ್ಮ ಸ್ನೇಹಿತ್ರ ದೂರವಾಣಿ ನಂಬರ್ ಕೊಟ್ಟು ಸಂಪರ್ಕಿಸಲು ಹೇಳಿದರು...
 
ಆ ಮದ್ಯೆ ನಮ್ಮ ಮದ್ಯೆ ಡಬ್ಬಿಂಗ್ ವಿಚಾರವೂ ಬಂತು.. ಆ ಬಗ್ಗೆಯೂ ಕೊಂಚ ಹೊತ್ತು ಚರ್ಚೆ ನಡೆಯಿತೆನ್ನಿ... ಆ ಮದ್ಯೆ ಅವರು ಹೇಳುತ್ತಲೇ ಇದ್ದರು-ನಿಮಗೆ ಹೊತ್ತಾಗುತ್ತೆ ನೀವ್ ಹೊರಡಿ ಅಂತ....ಅವರು ಸಿಕ್ಕ್ದ್ಡೆ  ಹೆಚ್ಚು  ಅವರನ್ನು ಬಿಟ್ಟು(ಅಸ್ತು ಬೇಗ..!!)ನಾ ಹೊರಡಲು ಸಿದ್ಧನಿರಲಿಲ್ಲ.. ಅಯ್ಯೋ ನನಗೆ ಬೇಜಾನ್ ಬಸ್ಸಿದೆ ಬಿಡಿ ಸ್ಸಾ.. ನೀವ್ನ್ ಚಿಂತಿಸಬೇಡಿ..(ನಂ ಏರಿಯಾ ಕ್ಕೆ ಕೊನೆಯ ಬಸ್ಸು ರಾತ್ರಿ ೧೦ ಘಂಟೆಗೆ ಅದು ತಪ್ಪಿದರೆ ಬೀ ಈ ಎಲ್ ಗೆ ಬಂದು ಖಾಸಗಿ ವಾಹನ-ಆಟೋ ಹಿಡಿಯಬೇಕು:)) ಎನ್ನುತ್ತಿದ್ದೆ... ನಾವ್ ಸುಮಾರು ೧-:೩೦ ವರೆಗೆ ಮಾತಾಡುತ್ತಲೇ ಇದ್ದೆವು.. ಕೊನೆಗೆ ಅವರೇ ತಮಗೆ ಹೋಗಲು ಲೇಟ್ ಆಗಬಹುದು, ಬಸ್ಸು ನೋಡುವ ನಡೆಯಿರಿ ಅಂದಾಗ...!!!

ಹೋಗಿ ಬಸ್ಸು ಹುಡುಕಿ ಸೀಟು ದಕ್ಕಿಸಿಕೊಂಡು....!! ಅವರ ಬ್ಯಾಗು ಅಲ್ಲಿ ಇಟ್ತು, ಸೀಟು ಕಾಯ್ದಿರಿಸಿ ಮತ್ತೆ ಬೇರೆ ರಾಜಹಂಸ -ಐರಾವತ ಇತ್ಯಾದಿಗಳಿಗಾಗಿ ನೋಡಿದೆವು.. ಕೊನೆಗೂ ಅದೇ ಬಸ್ಸನ್ನೆ ಅವರು ಊರಿಗೆ ಹೋಗಲು ಆಯ್ದುಕೊಂಡು ಕುಳಿತರು, ಆ ಮಧ್ಯೆ ನಾ ಅವರ ಫೋಟೋ ತೆಗೆಯಲು, ನಾವ್ ಇಬ್ಬರು ಜೊತೆಯಾಗಿ ನಿಂತು ಫೋಟೋ ತೆಗೆದುಕೊಳ್ಳಲು ಕಾಯ್ತಿದ್ದೆ, ಅದನ್ನು ಅವರಿಗೂ ಹೇಳಿದೆ, ಆದರೆ ಅಲ್ಲಿ ವಿಪರೀತ ಜನವೋ ಜನ, ಎಲ್ಲಿಯೂ ಫೋಟೋ ತೆಗೆಯಲು ಸೂಕ್ತ ಸ್ಥಳವಿಲ್ಲ, ನನ್ನ್ ಮೊಬೈಲ್‌ನಲ್ಲಿ ಫ್ಲಾಷ್ ಇಲ್ಲ..:((
ಅವರು ತುಂಬಾ ಸಿಂಪಲ್ ಅಂತ ಹೇಳಿದೆನಲ್ಲಾ.. ಅವರದು ಸಾಮಾನ್ಯ ಮೊಬೈಲು(ಕರೆ-ಮೆಸೇಜ್ ಮಾತ್ರ)... ಬಸ್ಸು ಹೊರಡುವ ಕೊನೇ ಗಳಿಗೇವರೇಗೂ ಫೋಟೋ ತೆಗೆಯಲು ಕಾದೆ...ಪ್ಚ್... ಆದಾಗಲೇ ಇಲ್ಲ ಹೋಗಿ........:(((
 
 ನಾ ಅವರಿಗೆ-ಅವರು ನನಗೆ ಟಾ.....ಟ .... ಅವರು ಹೊರಟ ನಂತರ ಆ ಬಸ್ಸು ಹಿಂದುಗಡೆ ನೋಡುತ್ತಾ ಬಸ್ಸಿನ ನಂಬರ್ ಮತ್ತು ಹೆಸರು-ಡಿಪೋ ಇತ್ಯಾದಿ ಮಾಹಿತಿಯನ್ನ ಮೊಬೈಲಿನಲ್ಲಿ ಮೆಸೇಜ್ನಲ್ಲಿ ಟೈಪ್ ಮಾಡಿ ಡ್ರಾಫ್ಟ್ಸ್ಗೆ ಸೇವ್ ಮಾಡಿದೆ, ಅವರಿಗೆ ಒಂದು ಮೆಸೇಜ್ ಕಳಿಸಿದೆ..(ನಾ ಮೆಸೇಜ್ ಮಾಡುವುದು ಅತಿ ವಿರಳ...!!),,
ಸಾ.. ನಿಮ್ಮನ್ನು ನೋಡಿ-ಮಾತಾಡಿ-ಜೊತೆಗೆ ಊಟ ಮಾಡಿ ನನಗೆ ಬೋ ಖುಷಿ ಆತ್... 
ನಿಮ್ಮ ಪ್ರಯಾಣ ಸುಖಕರವಾಗಿರಲಿ
ಶುಭವಾಗಲಿ 
ನಾಳೆ ಬೆಳಗ್ಗೆ ಕರೆ ಮಾಡುವೆ...
ನನ್ನಿ
\|/

ಸ್ವಲ್ಪ ಹೊತ್ತಿನ ನಂತರ ಅವರಿಂದ  ಮೆಸೇಜ್  ಬಂತು..

ಥ್ಯಾಂಕ್ ಯೂ ವೇರಿ ಮಚ್ ... ಗುಡ್ ನೈಟ್...

ನಾ (೧೧-೩೦  ರ ಕೊನೆಯ ಬಸ್ಸು)  ೨೭೬ -ನಂಬರ್ -ವಿದ್ಯಾರಣ್ಯಪುರ ಬಸ್ಸು ಹಿಡಿದು -ಸೀಟು ಸಹಾ ಸಿಕ್ಕಿ  (ರಾತ್ರಿ ಇರುವ ರಶ್ಯೂ ತಿಳಿದವರೇ ಬಲ್ಲರು..!!)ಅವರು ಮತ್ತು ಸೀಟು ಸಿಕ್ಕ ಖುಷಿಯಲ್ಲಿ ಆರಾಮಾಗಿ ಕುಳಿತೆ.. 
ಬೀ ಈ ಎಲ್ ಗೆ ಬಂದು ಮುಟ್ಟಿ ನಂ ತಮ್ಮನಿಗೆ ಆಗಲೇ ಕರೆ ಮಾಡಿದ್ದರಿಂದ ಅವನು ಅಲ್ಲಿ ಗಾಡಿ ತೆಗೆದುಕೊಂಡು ಬಂದಿದ್ದ ಅದರಲ್ಲಿ ಮನೆಗೆ ಹೋಗಿ ಮಲಗಿದೆ...
ಇವತ್ತು(೦೩-೦೬-೨೦೧೨) ಬಗ್ಗೆ ಅಲ್ಲದಿದ್ದರೂ ಸುಮಾರು ೧೦-೩೦ ಸುಮಾರಿಗೆ ಕಾಲು ಮಾಡಿ ಅವರ ಸುಖಕರ ಮತ್ತು ಸುರಕ್ಷಿತ ಪ್ರಯಾಣದ ಬಗ್ಗೆ ಅರಿತುಕೊಂಡು   ಮುಂದೊಮ್ಮೆ ಮತ್ತೆ ಭೇಟಿ ಮಾಡುವ ಅಂತ ಹೇಳಿದೆ...


---------------------------  ಮುಗಿಯಿತು------------------------
 
ಮೊದಲ ಭಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ 
 

ಈಗ ನಿಮಗೆ ಅವರು ಯಾರು ಎಂಬ ಸ್ಪುಷ್ಟ ಮಾಹಿತಿ ಸಿಕ್ಕಿದೆ ಎಂದುಕೊಂಡಿರುವೆ....
ಆದರೂ..... ನಿಮ್ಮ ಊಹೆ.................. ದೆ....??????
'ಅವರು'- 'ಅವರಲ್ಲ'
ಮತ್ತೆ....????
ನೀವ್ ಊಹಿಸದೇ ಇದ್ದವರು....??
ಅವರು ಯಾರು ಅಂತ ಅವರೇ ಹೇಳುವರು........
ಇನ್ನೂ ೩-೪-೫ ದಿನಗಳ ಒಳಗೆ....

ಅಲ್ಲೀವರೆಗೆ.......
ಗೆಸ್ ಗೇಂ ಚಾಲ್ತಿಯಲ್ಲಿರಲಿ.............:()))

\|/
 

 

Comments