ಕಪ್ಪು ರ೦ಧ್ರ = ಭಾಗ ಎರಡು
ಪಾರ್ಥಸಾರಥಿಯವರ ಕಪ್ಪುರ೦ಧ್ರ ಕಥೆಯ ಎರಡನೇ ಭಾಗವನ್ನು ನನಗೆ ಬರೆಯಲು ಕೇಳಿದಾಗ ನನಗೆ ಇದೊ೦ದು ಹೊಸ ಹಾಗೂ ವಿಭಿನ್ನ ಪ್ರಯತ್ನ ಎನಿಸಿತು. ಅದರ ಪ್ರಯತ್ನವಾಗಿ ಎರಡನೇ ಭಾಗವನ್ನು ನಿಮ್ಮ ಮು೦ದೆ ಇಡುತ್ತಿದ್ದೇನೆ.
ಪಾರ್ಥಸಾರಥಿಯವರೇ, ನನ್ನ ಊಹೆಯ೦ತೆ ಕಥೆಯನ್ನು ಮು೦ದುವರಿಸಿದ್ದೇನೆ. ನಿಮ್ಮ ಮನದಲ್ಲಿದ್ದ ಚಿತ್ರಣಕ್ಕೆ ಸರಿಹೊ೦ದುತ್ತದೆ ಎ೦ದು ಭಾವಿಸುತ್ತೇನೆ.
-------------------------------------------------------------------------------------------------------------------------------
ಇಂದಿರಾಳಿಗೆ ನೇರವಾಗಿ ಕಲ್ಯಾಣ್ ನನ್ನು ಬಿಟ್ಟು ಬಿಡು ಎಂದು ಹೇಳಬಹುದುದು. ಆದರೆ ಅದರಿಂದ ಇನ್ನೇನಾದರೂ ಅನಾಹುತ ಸಂಭವಿಸಬಹುದು. ನೇರವಾಗಿ ಕಲ್ಯಾಣ್ ಗೆ ನನ್ನ ಮಗಳನ್ನು ಬಿಟ್ಟು ಬಿಡು ಎಂದು ಹೇಳಬಹುದು. ಆದರೆ ಅವನು ಇಂದಿರಾಗೆ ಈ ವಿಷಯ ತಿಳಿಸಿದರೆ ಅವಳು ನನ್ನ ಮೇಲೆ ಅಸಹ್ಯ ಪಡಬಹುದು. ಮುಳ್ಲು ಹೋಗಿ ಬಟ್ಟೆಯ ಮೇಲೆ ಬಿದ್ದರೂ ಬಟ್ಟೆಯೇ ಬಂದು ಮುಳ್ಳಿನ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ. ಆದ್ದರಿಂದ ಈ ಸಮಸ್ಯೆಯನ್ನು ಬುದ್ಧಿವಂತಿಕೆಯಿಂದ ಬಗೆಹರಿಸಬೇಕು ಎಂದು ಆಲೋಚಿಸುತ್ತಿದ್ದ ರಮಣ ರಾವ್ ಗೆ ಥಟ್ಟನೆ ಒ೦ದು ಉಪಾಯ ಹೊಳೆಯಿತು. ಕಾರಿನಿಂದ ಇಳಿಯುವ ಮುನ್ನ ರಾಘವೇಂದ್ರನಿಗೆ
ತಮ್ಮ ಮನದಲ್ಲಿ ಹೊಳೆದಿದ್ದ ಉಪಾಯವನ್ನು ತಿಳಿಸಿದರು.
ಅದೇ ರೀತಿ ರಾಘವೇಂದ್ರ ಕಲ್ಯಾಣ್ ಮೊಬೈಲಿಗೆ ಪ್ರತಿಷ್ಟಿತ ಐ.ಟಿ ಕಂಪನಿ ಒಒದರಲ್ಲಿ ಕೆಲಸ ಇರುವುದಾಗಿ ಆಸಕ್ತಿ ಇದ್ದಲ್ಲಿ ಕೂಡಲೇ ಬಂದು ಸೇರಬೇಕು ಎಂದು ಸಂದೇಶ ಕಳುಹಿಸುತ್ತಾನೆ. ಕೆಲಸದ ಅನ್ವೇಷಣೆಯಲ್ಲಿ ತೊಡಗಿದ್ದ ಕಲ್ಯಾಣ್ ಗೆ ಈ ಸಂದೇಶ ಕಂಡು ಅತೀವ ಸಂತೋಷವಾಗಿ ಸೀದಾ ಹೋಗಿ ರಾಘವೇಂದ್ರನನ್ನು ಭೇಟಿ ಆಗುತ್ತಾನೆ. ರಾಘವೇಂದ್ರ ತಾನು ಫ್ಯೂಚರ್ ಟೆಕ್ ಇನ್ಫೋಟೆಕ್ ನ ಕನ್ಸಲ್ಟೆಂಟ್ ಎಂದು ಹೇಳಿ ನೀವು ಅಲ್ಲಿ ಹೋಗಿ ನಾನು ಕಳುಹಿಸಿದೆ ಎಂದು ಹೇಳಿ, ಅಲ್ಲಿ ಪ್ರಣವ್ ಎಂಬ ವ್ಯಕ್ತಿ ಇಂಟರ್ವ್ಯೂ ಮಾಡುತ್ತಾರೆ. ನಿಮ್ಮ ಬಯೋ ಡಾಟ, ಹಾಗೂ ನಿಮ್ಮ ಬಿ ಈ ಪ್ರಮಾಣ ಪತ್ರಗಳು ಎಲ್ಲವನ್ನೂ ತೆಗೆದುಕೊಂಡು ಹೋಗಿ. ಆಲ್ ದ ಬೆಸ್ಟ್ ಎಂದು ಅವನನ್ನು ಬೀಳ್ಕೊಟ್ಟು ರಮಣ ರಾವ್ ಗೆ ಕರೆಮಾಡಿ ಸರ್ ನೀವಂದಂತೆ ಕಲ್ಯಾಣ್ ನನ್ನು ನಿಮ್ಮದೇ ಕಂಪನಿ ಗೆ ಇಂಟರ್ವ್ಯೂ ಗೆ ಕಳುಹಿಸಿದ್ದೇನೆ ಎಂದು ಕರೆ ಕಟ್ ಮಾಡಿದ.
ಫ್ಯೂಚರ್ ಟೆಕ್ ಇನ್ಫೋಟೆಕ್ ಕಂಪನಿ ಯ ಇಂಟರ್ವ್ಯೂ ಕೊಠಡಿಯಲ್ಲಿ ಮೊದಲನೇ ಸುತ್ತಿನ ಪರೀಕ್ಷೆ ಮುಗಿಸಿ ಹೆಚ್ ಆರ್ ಸುತ್ತಿಗೆ ಕಾಯುತ್ತಾ ಕುಳಿತಿದ್ದ ಕಲ್ಯಾಣ್ ಕಂಪನಿಯ ಒಳಾಂಗಣದ ಬೆರಗಿಗೆ ಮಾರು ಹೋಗಿದ್ದ. ದೇವರ ದಯದಿಂದ ಇಲ್ಲೇನಾದರೂ ಕೆಲಸ ಸಿಕ್ಕಿಬಿಟ್ಟರೆ ಒಂದೆರಡು ವರ್ಷ ಕೆಲಸ ಮಾಡಿ ಆಮೇಲೆ ಇಂದಿರಾಳನ್ನು ನನಗೆ ಕೊಟ್ಟು ಮದುವೆ ಮಾಡಲು ಅವರ ಅಪ್ಪ ಅಮ್ಮನಲ್ಲಿ ಕೇಳಬಹುದು ಎಂದು ಆಲೋಚಿಸುತ್ತಿದ್ದ. ಅಷ್ಟರಲ್ಲಿ ಒಳಗೆ ಬಂದ ಹೆಚ್ ಆರ್ ಮ್ಯಾನೇಜರ್ ಶ್ರೀಧರ್ ಏನೂ ಗೊತ್ತಿಲ್ಲದವರಂತೆ ಕಲ್ಯಾಣ್ ನ ಫೈಲ್ ತೆಗೆದುಕೊಂಡು ಸುಮ್ಮನೆ ಪರೀಕ್ಷಿಸಿ ನಿಮ್ಮ ಬಗ್ಗೆ ಹೇಳಿ ಎಂದು ಅವನ ಪೂರ್ವಾಪರ ತಿಳಿದುಕೊಂಡು ನೋಡಿ ಕಲ್ಯಾಣ್, ನಿಮ್ಮ ಡಿಗ್ರೀ ಫಲಿತಾಂಶ ಅಷ್ಟೊಂದು ಸಮಾಧಾನಕರವಾಗಿಲ್ಲ. ಆದರೂ ನಿಮಗೊಂದು ಅವಕಾಶ ಕೊಡುತ್ತೇವೆ. ಆರು ತಿಂಗಳು ಟ್ರೇನಿಂಗ ಇರುತ್ತದೆ. ನಿಮ್ಮ ಕೆಲಸ ನಮಗೆ ಇಷ್ಟವಾದರೆ ನಿಮ್ಮನ್ನು ಮುಂದುವರಿಸುತ್ತೇವೆ. ಟ್ರೇನಿಂಗ ನಲ್ಲಿ ನಿಮಗೆ ೧೫,೦೦೦ ಸಂಬಳ ಇರುತ್ತದೆ. ನಂತರ ಜಾಸ್ತಿ ಮಾಡುತ್ತೇವೆ. ಆಮೇಲೆ ಇನ್ನೊಂದು ವಿಷಯ ಮುಂದಿನ ವಾರದಿಂದಲೇ ನೀವು ಸೇರಬೇಕು ಎಂದು ಹೇಳಿ ಅವನನ್ನು ಬೀಳ್ಕೊಟ್ಟರು.
ಆಚೆ ಬಂದ ಕಲ್ಯಾಣ್ ಸಂತಸದಲ್ಲಿ ಕುಣಿದಾಡುತ್ತಿದ್ದ. ಕೂಡಲೇ ಇಂದಿರಾಗೆ ಫೋನ್ ಮಾಡಿ, ಇಂದಿರಾ ನನಗೆ ಕೆಲಸ ಸಿಕ್ಕಿತು. ಮೊದಲಿಗೆ ಹದಿನೈದು ಸಾವಿರ ಸಂಬಳ, ಆಮೇಲೆ ಜಾಸ್ತಿ ಮಾಡ್ತಾರಂತೆ. ಸಂತಸದಿಂದ ಇಂದಿರಾ ಯಾವ ಕಂಪನಿ ಕಲ್ಯಾಣ್ ಎಂದು ಕೇಳಿದ್ದಕ್ಕೆ ಫ್ಯೂಚರ್ ಟೆಕ್ ಇನ್ಫೋಟೆಕ್ ಎಂಬ ಐ ಟಿ ಕಂಪನಿ ಎಂದ. ಹೇಯ್ ಹೌದಾ ಕಲ್ಯಾಣ್ ಅದು ನಮ್ಮ ತಂದೆಯವರದೇ ಕಂಪನಿ ಕಣೋ. ಒಳ್ಳೆಯದೇ ಆಯಿತು. ನೀನು ಚೆನ್ನಾಗಿ ಕೆಲಸ ಮಾಡಿ ಒಳ್ಳೆ ಹೆಸರು ಸಂಪಾದಿಸಿದರೆ ನಮ್ಮಿಬ್ಬರ ದಾರಿ ಸುಗಮವಾಗುತ್ತದೆ ಕಲ್ಯಾಣ್.
ಹೌದಾ ಇಂದಿರಾ ನೀನು ಹೇಳ್ತಾ ಇರೋದು ನಿಜಾನ? ನಿನ್ನ ಪ್ರೀತಿ ಪಡೆಯಲು ನಾನೆಷ್ಟು ಕಷ್ಟ ಬೇಕಾದರೂ ಪಡ್ತೀನಿ.
ಕೆಲಸಕ್ಕೆ ಸೇರಿದ ದಿನದಿಂದ ಕಲ್ಯಾಣ್ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ ಎಲ್ಲರ ಕೈಯಲ್ಲೂ ಒಳ್ಳೆಯ ಹೆಸರನ್ನು ಸಂಪಾದಿಸಿದ್ದ. ಆರು ತಿಂಗಳ ಟ್ರೈನಿಂಗ್ ಇದ್ದದ್ದನ್ನು ಇವನ ಕೆಲಸ ನೋಡಿ ನಾಲ್ಕು ತಿಂಗಳಿಗೆ ಟ್ರೈನಿಂಗ್ ಮುಗಿಸಿ ಅವನ ಕೆಲಸವನ್ನು ಖಾಯಂ ಮಾಡಿದ್ದರು. ಜೊತೆಗೆ ಸಂಬಳವನ್ನು ೨೫೦೦೦ ಕ್ಕೆ ಏರಿಸಿದ್ದರು. ಕಲ್ಯಾಣ್ ತಾನು ಪಟ್ಟ ಶ್ರಮ ಸಾರ್ಥಕವಾಯಿತು ಎಂದು ಆಲೋಚಿಸುತ್ತಿದ್ದ. ಆದರೆ ಇದರ ಹಿಂದೆ ರಮಣ ರಾವ್ ಅವರ ಕೈವಾಡ ಇದೆ ಎಂದು ಗೊತ್ತಿರಲಿಲ್ಲ.
ಕಲ್ಯಾಣ್ ಗೆ ತನ್ನ ತಂದೆಯ ಕಂಪನಿ ಯಲ್ಲೇ ಕೆಲಸ ಆಗಿರುವುದು ಗೊತ್ತಿದ್ದರೂ ಇಂದಿರಾ ತನ್ನ ತಂದೆಯ ಬಳಿ ಈ ವಿಷಯ ಪ್ರಸ್ತಾಪಿಸಿರಲಿಲ್ಲ. ಇನ್ನೂ ಈಗಷ್ಟೇ ಕೆಲಸ ಖಾಯಂ ಆಗಿದೆ ಇನ್ನೂ ಸ್ವಲ್ಪ ಸಮಯ ಕಳೆದ ಮೇಲೆ ಅಪ್ಪನ ಬಳಿ ಈ ವಿಷಯದ ಬಗ್ಗೆ ಮಾತಾಡಬೇಕು ಎಂದು ನಿರ್ಧರಿಸಿದ್ದಳು.
ಇತ್ತ ರಮಣ ರಾವ್ ಅವರು ಕಲ್ಯಾಣ್ ಹಾಗೂ ಇಂದಿರಾ ಪ್ರೀತಿ ಹೆಚ್ಚು ಬೆಳೆಯಲು ಬಿಡಬಾರದು, ಬಿಟ್ಟರೆ ಇಲ್ಲದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದಷ್ಟು ಬೇಗ ಅವರಿಬ್ಬರನ್ನೂ ಬೇರೆ ಮಾಡಬೇಕು ಆದರೆ ಮಧ್ಯದಲ್ಲಿ ನಾನು ಕೆಟ್ಟವನಾಗಬಾರದು ಎಂದು ಆಲೋಚಿಸಿ ಒಂದು ಉಪಾಯವನ್ನು ಮಾಡಿದ್ದರು.
ಕಲ್ಯಾಣ್ ಕೆಲಸ ಖಾಯಂ ಆಗಿ ಎರಡು ತಿಂಗಳು ಕಳೆದಿತ್ತು. ಒಂದು ದಿನ ಬೆಳಿಗ್ಗೆ ಆಫೀಸಿಗೆ ಬಂದು ಸಿಸ್ಟಂ ಆನ್ ಮಾಡಿ ಮೇಲ್ ನೋಡುತ್ತಿದ್ದಾಗ ಟೀಮ್ ಮ್ಯಾನೇಜರ್ ಇಂದ ಒಂದು ಮೇಲ್ ಬಂದಿರುವುದು ಕಣ್ಣಿಗೆ ಬಿಟ್ಟು. ಕೂಡಲೇ ಬಂದು ನನ್ನನ್ನು ನನ್ನ ಕೊಠಡಿಯಲ್ಲಿ ಭೇಟಿ ಮಾಡು ಎಂದು ತಿಳಿಸಿದ್ದರು. ಏನಿದು ಅಷ್ಟೊಂದು ಅರ್ಜೆಂಟ್ ಎಂದು ಕೊಠಡಿಗೆ ಹೋದಾಗ ಕಲ್ಯಾಣ್ ನಿಮಗೊಂದು ಸಿಹಿ ಸುದ್ದಿ ಎಂದರು. ಏನು ಸರ್ ಎಂದಿದ್ದಕ್ಕೆ ಕಲ್ಯಾಣ್ ನಿಮ್ಮನ್ನು ಯುಎಸ್ ನಲ್ಲಿರುವ ನಮ್ಮ ಬ್ರಾಂಚ್ ಗೆ ವರ್ಗಾಯಿಸಲು ಕಂಪನಿ ನಿರ್ಧಾರ ಮಾಡಿದೆ. ನೀವು ಕೂಡಲೇ ಕಂಪನಿ ಯ ಸಿ ಇ ಓ ಅವರನ್ನು ಭೇಟಿ ಮಾಡಿ ಅವರು ಎಲ್ಲ ವಿವರವಾಗಿ ತಿಳಿಸುತ್ತಾರೆ ಎಂದರು.
ಕಲ್ಯಾಣ್ ಗೆ ಆಗಸದಲ್ಲಿ ತೇಲುತ್ತಿರುವಂತೆ ಭಾಸವಾಗುತ್ತಿತ್ತು. ಸೀದಾ ಸಿ ಇ ಓ ಕೊಠಡಿ ಬಳಿ ಬಂದ. ಮೊಟ್ಟ ಮೊದಲ ಬಾರಿಗೆ ನನ್ನ ಭಾವಿ ಮಾವನವರನ್ನು ಭೇಟಿ ಮಾಡುತ್ತಿದ್ದೇನೆ ಎಂದುಕೊಂಡು ಒಳಗೆ ಹೋದ. ಯಾವುದೋ ಫೈಲ್ ನೋಡುವುದರಲ್ಲಿ ಮಗ್ನರಾಗಿದ್ದ ರಮಣ ರಾವ್ ಕಲ್ಯಾಣ್ ಆಗಮನವನ್ನು ಗಮನಿಸಿ ಬನ್ನಿ ಮಿ.ಕಲ್ಯಾಣ್. ನಿಮ್ಮ ಬಗ್ಗೆ ನಿಮ್ಮ ಮ್ಯಾನೇಜರ್ ಬಹಳ ಹೊಗಳುತ್ತಿರುತ್ತಾರೆ. ಸೇರಿದ ಆರೇ ತಿಂಗಳಲ್ಲಿ ತಮ್ಮ ಅದ್ಭುತ ಕೆಲಸದಿಂದ ಒಳ್ಳೆಯ ಹೆಸರು ಸಂಪಾದಿಸಿದ್ದೀರ. ನಿಮ್ಮ ಕೆಲಸವನ್ನು ಮೆಚ್ಚಿ ನಿಮಗೊಂದು ಸುವರ್ಣಾವಕಾಶ ನೀಡಲು ನಿರ್ಧರಿಸಿದ್ದೇವೆ. ನಿಮ್ಮನ್ನು ಯುಎಸ್ ನಲ್ಲಿರುವ ನಮ್ಮ ಬ್ರಾಂಚ್ ಗೆ ವರ್ಗಾಯಿಸಲು ನಿರ್ಧರಿಸಿದ್ದೇವೆ. ಇನ್ನು ಎರಡು ವಾರದಲ್ಲೇ ನೀವು ಪ್ರಯಾಣಿಸಬೇಕು. ಅಲ್ಲಿನ ಖರ್ಚಿಗೆ ತಕ್ಕಂತೆ ನಿಮ್ಮ ಸಂಬಳ ಕೂಡ ಇರುತ್ತದೆ. ನೋಡಿ ಕಲ್ಯಾಣ್ ಬಹಳ ಕಡಿಮೆ ಜನಕ್ಕೆ ಸಿಗುವ ಅವಕಾಶ ನಾನು ನಿಮಗೆ ಕೊಡುತ್ತಿದ್ದೇನೆ. ಇದರ ಸದುಪಯೋಗ ಮಾಡಿಕೊಂಡು ಕಂಪನಿ ಗೆ ಒಳ್ಳೆಯ ಹೆಸರು ತರುತ್ತೀರ ಎಂದು ಆಶಿಸುತ್ತೇನೆ. ನಿಮ್ಮ ವಿಸಾ, ಟಿಕೆಟ್ ಎಲ್ಲದರ ಬಗ್ಗೆ ನಮ್ಮ ಟ್ರಾವೆಲ್ ಕೋ ಆರ್ಡಿನೆಟರ್ ತಿಳಿಸುತ್ತಾರೆ. ಆಲ್ ದಿ ಬೆಸ್ಟ್ ಮಿ.ಕಲ್ಯಾಣ್ ಎಂದು ಹೇಳಿ ಮತ್ತೆ ಫೈಲ್ ಕೈಗೆತ್ತಿಕೊಂಡು ಸುಮ್ಮನೆ ಅದರಲ್ಲಿ ಮುಖ ಹುದುಗಿಸಿಕೊಂಡು ಕಲ್ಯಾಣ್ ಆಚೆ ಹೋಗುವರೆಗೂ ಸುಮ್ಮನಿದ್ದು ಕಲ್ಯಾಣ್ ಆಚೆ ಬಂದ ಮೇಲೆ ತನ್ನ ತಂತ್ರಕ್ಕೆ ಒಳಗೊಳಗೇ ಸಂತಸ ಪಡುತ್ತಿದ್ದರು ರಮಣ ರಾವ್.
ಮಗಳನ್ನು ಕಲ್ಯಾಣ್ ನನ್ನು ಬೇರ್ಪಡಿಸುವ ರಮಣ ರಾವ್ ತಂತ್ರ ಸಫಲವಾಗುತ್ತದೋ ಇಲ್ಲವೋ ವಿಫಲವಾಗುತ್ತದೋ ಕಾದು ನೋಡೋಣ...
------------------------------------------------------------------------
ಈ ಕಥೆಯ ಮು೦ದಿನ ಹಾಗೂ ಕೊನೆಯ ಭಾಗವನ್ನು ವೆ೦ಕಟೇಶ್ ಕಾಮತ್ ಕು೦ಬ್ಳೆ ಅವರು ಮು೦ದುವರಿಸುತ್ತಾರೆ.
Comments
ಉ: ಕಪ್ಪು ರ೦ಧ್ರ = ಭಾಗ ಎರಡು
In reply to ಉ: ಕಪ್ಪು ರ೦ಧ್ರ = ಭಾಗ ಎರಡು by sathishnasa
ಉ: ಕಪ್ಪು ರ೦ಧ್ರ = ಭಾಗ ಎರಡು
ಉ: ಕಪ್ಪು ರ೦ಧ್ರ = ಭಾಗ ಎರಡು
In reply to ಉ: ಕಪ್ಪು ರ೦ಧ್ರ = ಭಾಗ ಎರಡು by venkatb83
ಉ: ಕಪ್ಪು ರ೦ಧ್ರ = ಭಾಗ ಎರಡು
ಉ: ಕಪ್ಪು ರ೦ಧ್ರ = ಭಾಗ ಎರಡು
In reply to ಉ: ಕಪ್ಪು ರ೦ಧ್ರ = ಭಾಗ ಎರಡು by kavinagaraj
ಉ: ಕಪ್ಪು ರ೦ಧ್ರ = ಭಾಗ ಎರಡು
ಉ: ಕಪ್ಪು ರ೦ಧ್ರ = ಭಾಗ ಎರಡು
In reply to ಉ: ಕಪ್ಪು ರ೦ಧ್ರ = ಭಾಗ ಎರಡು by partha1059
ಉ: ಕಪ್ಪು ರ೦ಧ್ರ = ಭಾಗ ಎರಡು
ಉ: ಕಪ್ಪು ರ೦ಧ್ರ = ಭಾಗ ಎರಡು
In reply to ಉ: ಕಪ್ಪು ರ೦ಧ್ರ = ಭಾಗ ಎರಡು by sasmi90
ಉ: ಕಪ್ಪು ರ೦ಧ್ರ = ಭಾಗ ಎರಡು