ಕರಾಳ ರಾತ್ರಿಯ ಕತ್ತಲ ರಹಸ್ಯ..ಭಾಗ 2

ಕರಾಳ ರಾತ್ರಿಯ ಕತ್ತಲ ರಹಸ್ಯ..ಭಾಗ 2

 
    ಕಾಡಿನೊಳಕ್ಕೆ ತನ್ನ ಮಗನನ್ನು ಹುಡುಕಿಕೊಂಡು ಹೋದ ರಾಚಯ್ಯ ಸ್ವಲ್ಪ ಹೊತ್ತು ಮಗನಿಗಾಗಿ ಹುಡುಕಿದ.ಅವನ ಪುಣ್ಯ ಮಗ ಅಲ್ಲೇ ಅಪ್ಪನನ್ನು ಕಾಣದೆ ಒಂದು ಮರದ ಕೆಳಗೆ ಕಂಗಾಲಾಗಿ ನಿಂತಿದ್ದ.ಅಪ್ಪನಿಗೆ ಮಗನನ್ನು ಕಂಡು ಹೋದ ಜೀವ ಬಂದಂತಾಯಿತು.ಮಗನನ್ನು ಆಗ ಏನು ಹೆಚ್ಚು ಮಾತಾಡಿಸಿದರು ಏನು ಮಾತಾಡಲಿಲ್ಲ.ರಾಚಯ್ಯ ಗಾಬರಿಯಾಗಿ ಹೆದರಾರಬೇಕು ಎಂದು ಮನೆಗೆ ಕರೆದುಕೊಂಡು ಬಂದ.ಮಗನನ್ನು ಮಲಗಲು ಕಳುಹಿಸಿ ಹೆಂಡತಿಗೆ ನೆಡೆದ ವಿಷಯ ತಿಳಿಸಿದ.ಅಕೆಯು ಸದ್ಯ ಎಂದು ನಿಟ್ಟುಸಿರುಬಿಟ್ಟಳು.ಅಸಲಿಗೆ ರಾಚಯ್ಯನ ಮಗ ಮಾತನಾಡದಿರುವುದಕ್ಕೆ ಕಾರಣವೇ ಬೇರೆ ಇತ್ತು...
 
 
ಬೆಳಗಾಗೆದ್ದು ಲಕ್ಷ್ಮೀಯ ತಾಯಿ ಹಸು ಏನು ಮಾಡಿದರು ಕರು ಇಲ್ಲದೆ ಹಾಲು ಇಳಿಸಲಿಲ್ಲ..
ಚುವಿಗೆ ತನ್ನ ಪ್ರೀತಿಯ ಕರು ಕಾಡಿನಲ್ಲೇನಾಗಿರಬಹುದೆಂಬುದೇ ಚಿಂತೆ.ಅವಳ ಪ್ರೀತಿಯ ಕರು ಕಾಡಿನಲ್ಲಿ ಬಲಿಯಾದ ವಿಚಾರ ಅವಳಿಗೆ ಇನ್ನು ತಿಳಿದಿಲ್ಲ.ಆ ದಿನ ರಾಚಯ್ಯನೊಬ್ಬನೇ
ಕರು ಹುಡುಕಿಕೊಂಡು ಹೋದ.ಅಂದು ಅವನು ಹೆಚ್ಚಾಗೆ ಹುಡುಕಿದ.ನೆನ್ನೆ ರಾತ್ರಿ ತನ್ನ ಮಗ ದಾರಿತಪ್ಪಿ ಮತ್ತೆ ಹುಡುಕಿಕೊಂಡು ಬಂದಾಗ ನಿಂತಿದ್ದ ಆ ಮರದ ಕೆಳಗಿನಿಂದ ಅನತಿ ದೂರದಲ್ಲಿ  ಅವನಿಗೆ  ಕರುವಿನ ದೇಹದಿಂದ ಬೇರ್ಪಟ್ಟ ತಲೆ ಸಿಕ್ಕಿತು.ಇದನ್ನು ಕಂಡು ರಾಚಯ್ಯನೇ ಕ್ಷಣಕಾಲ ತಬಿಬ್ಬಾದ..
ಇದೇನಿದು ಈ  ರೀತಿ ಯಾರು ಮಾಡಿರಬಹುದು  ಚಿರತೆ ಏನಾದರು ತಿ೦ದಿದ್ದರೆ ಹೀಗೆ ಆಗುತಿರಲಿಲ್ಲ..ಇಲ್ಲ  ಯಾರೋ ಇದನ್ನು ನಮ್ಮ  ಮೇಲಿನ  ಸಿಟ್ಟಿಗಾಗಿ  ಈ  ಮೂಕ  ಪ್ರಾಣಿಯನ್ನು ಈ  ರೀತಿ ಕೊ೦ದಿದ್ದಾರೆ ಎ೦ದು ಮರುಗಿದ..ಅವರ  ವ೦ಶ  ನಿರ್ವ೦ಶ  ಆಗಿ ಹೋಗಲಿ ಎ೦ದು ಶಪಿಸಿ ಮನೆಗೆ ಹಿ೦ದಿರುಗಿದ..ಮನೆಯಲ್ಲಿ ಕರು ಸತ್ತ  ವಿಷಯ  ಅದನ್ನು ಯಾರೋ ಕೊ೦ದಿದ್ದಾರೆ೦ದು
ತಿಳಿಸಿದ.ಪಾರ್ವತಕ್ಕ 
ಕೊ೦ದವರಿಗೆ ಹಿಡಿ ಶಾಪ  ಹಾಕಿ ಅಳುತ್ತಾ ಕುಳಿತಳು...ತನ್ನ  ಪ್ರೀತಿಯ  ಮಗಳಿಗೇನಾದರು ಈ  ವಿಷಯ  ತಿಳಿದರೆ ಅವಳು ತಡೆದುಕೊೞುವುದಿಲ್ಲವೆ೦ದು ಅವಳಿಗೆ ವಿಷಯ  ತಿಳಿಸಲಿಲ್ಲ..
 
ಮನೆಯಲ್ಲಿ ಬೆಳಗಿನಿ೦ದ  ಸ೦ತು ಏಕೆ ಒ೦ದೇ ಒ೦ದು ಮಾತನಾಡದಿರುವುದನ್ನು ರಾಚಯ್ಯ  ಗಮನಿಸಿದ್ದ....
 
       ಅಮವಾಸ್ಯೆಗೆ ಇನ್ನು ೨ ದಿನ  ಬಾಕಿ ಇತ್ತು..
 
ರಾಚಯ್ಯ  ಹಾಗು ಪಾರ್ವತಕ್ಕ  ಎಷ್ಟೆ ಪ್ರಯತ್ನಿಸಿದರು  ಆತ  ಸ್ತ೦ಭಿಭೂತನಾಗೆ ಇದ್ದ...ಇಬ್ಬರು ಗಾಬರಿಯಾಗಿ ಊರ  ದೇವರ  ದೇವಾಲಯಕ್ಕೆ ಹೋಗಿ ತಾಯತ  ಕಟ್ಟಿಸಿಜಕೊ೦ಡು ಬ೦ದು ಕಟ್ಟಿದರು...