ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೫
ಇಲ್ಲೀವರೆಗೆ-
'ಸೃಷ್ಟಿ' ಮತ್ತು ಡಾ: ವಿಶಾಲ್ ಒಂದಾಗಿದ್ದು, ಮನೆಗೆ ವಾಪಾಸ್ಸು ಮರಳಿದ ಡಾ:ಸಿರಿ ತನ್ನ ಪತಿಗೆ ಉಗಿದು ಉಪ್ಪಿನ ಕಾಯಿ ಹಾಕಿ, ತನ್ನ ಪೋಷಕರ ಮನೆಗೆ ಹೋಗಿದ್ದು, ಅಲ್ಲಿ ಸಿರಿಯನ್ನು ಸಂಧಾನಪಡಿಸಿ- ಪೂಸಿ ಹೊಡೆದು ವಾಪಾಸ್ಸು ಮನೆಗೆ ಕರೆದುಕೊಂಡು ಬಂದು, 'ಸೃಷ್ಟಿ' ಅಲ್ಲಿಯೇ ಇರುವುದು ಕಂಡು ಸಮಾಧಾನವಾಗಿ, ಮಂಕಾಗಿ ಕುಳಿತು ತನ್ಣನು ಶತ್ರು ತರಹ ನೋಡುತ್ತಿದ್ದ 'ಸೃಷ್ಟಿ' ಗೆ ಸಮಾಧಾನ ಪಡಿಸಲು ಪೂಸಿ ಹೊಡೆಯಲು ಡಾ: ಸಿರಿ 'ಸೃಷ್ಟಿ'ಯ ಪ್ರಿಯ ಬೆಕ್ಕನ್ನು ಬಾಕ್ಸ್ನಲ್ಲಿ ಇತ್ತು ಉಡುಗೊರೆ ಕೊಟ್ಟದ್ದು ಅದನ್ನು ತೆರೆದು ನೋಡದ 'ಸೃಷ್ಟಿ' ಯ ವರ್ತನೆಗೆ ಅಚ್ಚರಿ ಪಡುತ್ತಾ, ತಾನೇ ಓಪನ್ ಮಾಡಿ 'ಸೃಷ್ಟಿ' ಯ ಕೈಗ್ ಕೊಟ್ಟರೆ ಅವಳು ಅದನ್ನು ಎತ್ತಿ ನೆಲಕ್ಕೆ ಎಸೆದು ತನ್ನ ಬಾಲದಿಂದ ಅದೆಂತದ್ದೋ ಸೂಜಿಯಂತಾದ್ದರಿಂದ ಅದಕ್ಕೆ ಚುಚ್ಚಿ ವಿಷವನ್ನೋ ಏನೋ ಅದರ ದೇಹಕ್ಕೆ ಸೇರಿಸಿ ಅದನ್ನು ಹಿಂಸೆ ಕೊಟ್ಟು ಸಾಯಿಸಿದಳು..
ಅದನ್ನು ಕನಸೋ ಎಂಬಂತೆ ನೋಡುತಿದ್ದ ಡಾ: ಸಿರಿ ಅದು ನಿಜವಾಗಿಯೂ ಕಣ್ಣ ಮುಂದೆಯೇ ನಡೆದದ್ದು ಅಂತ ಅರಿವಾಗಿ 'ಸೃಷ್ಟಿ'ಗೆ ತರಾಟೆ ತೆಗೆದುಕೊಳ್ಳಲು, ಮೊದಲೇ ಸಿರಿ ಕಂಡರೆ ಗುರ್ರ ಎನ್ನುತ್ತಿದ್ದ 'ಸೃಷ್ಟಿ' ಕೈ ಬೀಸಿ ಸಿರಿಯ ಕೆನ್ನೆಗೆ ಹೊಡೆದ ರಭಸಕ್ಕೆ ಅವಳು ಹಾರಿ ಮಾರು ದೂರ ಬಿದ್ದುದು ಹಿಂದೆಯೇ ಅಲ್ಲಿಗೆ ಹಾರಿ ನಿಂತ 'ಸೃಷ್ಟಿ' ಡಾ: ಸಿರಿ ಕತ್ತಿನಲ್ಲಿದ್ದ ಡಾ:ವಿಶಾಲ್-ಸಿರಿ ಜೋಡಿಯ ಲಾಕೆಟ್ ತೆಗೆದು ಅದರಿಂದ ಸಿರಿ ಲಾಕೆಟ್ ಬೇರೆ ಮಾಡಿ ಎಲ್ಲಿಯೋ ಎಸೆದಳು..ಇದನ್ನು ಅಚ್ಚರಿಯಿಂದ ನೋಡುತ್ತಿದ್ದ ಸಿರಿಗೆ ಮತ್ತೊಂದು ಏಟು ಕೊಟ್ಟು, ಸಿರಿ ಗೆ ಮೂರ್ಛೆ ಬಂದಂತಾದಾಗ, 'ಸೃಷ್ಟಿ ಮನೆಯಿಂದ ಓಡಿ ಹೋಗಲು 'ಮುಕ್ತ ಸ್ವಾತಾಂತ್ರ್ಯದ ಹಕ್ಕಿ' ಆಗಲು ಬಯಸಿ ಮನೆಯ ಮುಖ್ಯ ದ್ವಾರದ ಬಳಿ ಬಂದು ಚೆನ್ನಾಗಿ ಬೀಸುತ್ತಿದ್ದ ಗಾಳಿಗೆ ಮೈ ಮನ ಒಡ್ಡಿ ಕಣ್ಣು ಮುಚ್ಚಿದಾಗ ತಲೆ ಮೇಲೆ ಬಿದ್ದಿತ್ತು ಒಂದು ಮರದ ತುಂಡಿನ ಬಲವಾದ ಏಟು, ಹಿಂದಕ್ಕೆ ತಿರುಗಿ ನೋಡಿದರೆ ಅಲ್ಲಿ ಕೈನಲ್ಲಿ ಕಟ್ಟಿಗೆ ಹಿಡಿದು ನಿಂತಿದ್ದಳು-ಸಿರಿ, ಕುಸಿದು ಬಿದ್ದ 'ಸೃಷ್ಟಿ' ಕೈ ಕಾಲು ಕಟ್ಟಿ ಆಪರೇಷನ್ ಟೇಬಲ್ ಗೆ ಬಿಗಿದು ಮೈ ಮನವೆಲ್ಲ ಸಿಟ್ಟು ಆಕ್ರೋಶ ತುಂಬಿಕೊಂಡು ಕೈಗೆ ಗ್ಲೌಸ್ ಹಾಕಿಕೊಂಡು ಕೈನಲ್ಲಿ ದೊಡ್ಡ ಚಾಕು ಹಿಡಿದು 'ಸೃಷ್ಟಿ' ಹತ್ತಿರ ಬಂದಳು.. ಕಣ್ಣೀರು ಸುರಿಸಿ ಏನೂ ಮಾಡಬೇಡ ಎಂದ 'ಸೃಷ್ಟಿ' ಯ ಕಣ್ಣೀರಿಗೆ ಕರಗದೆ ಕೈನಲ್ಲಿನ ಚಾಕು ಎತ್ತಿ ಬೀಸಿದಳು......
ಮುಂದೇನಾಯ್ತು.....???
---------------------------------------------------------------------
ಈ ಕಥೆಯ ೧-೨-೩-೪ ನೇ ಭಾಗಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...
sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A7/10/05/2012/36658
sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A8/10/05/2012/36667
sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A9/16/05/2012/36717
sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%AA/31/05/2012/36893
------------------------------------------------------------------------------------------------------------------
ಮುಂದೇನಾಯ್ತು.....???
ಓದಿ....
ಡಾ: ಸಿರಿ ಕೈನಲ್ಲಿನ ಚಾಕು ಜೋರಾಗಿ ಬೀಸಿದ್ದು 'ಸೃಷ್ಟಿ' ತನ್ನ ಕೊನೆಗಾಲ ಬಂತು ಅಂತ ಕಣ್ಣು ಮುಚ್ಚಿದಳು, ಹಿಂದೆಯೇ ಬಾಯಿಯಿಂದ ಹೊರ ಬಂತು ಬೊಬ್ಬಿರಿಯುವಂತ ಶಬ್ಧ ಮತ್ತು ಕಣ್ಣೀರು ಸಮೇತ ಅಳು..... ಅಸಾಧ್ಯ ನೋವು ಕಾರಣವಾಗಿ, ಕಣ್ಣು ತೆರೆದರೆ ತಾ ಇನ್ನೂ ಬದುಕಿಯೇ ಇರುವೆ, ಹಾಗಾದರೆ ನೋವು ಎಲ್ಲಿಯದು?
ಹೊರಳಿ ನೋಡಿದರೆ ಬಾಲದಿಂದ ಬೇರೆಯಾದ ಬಾಲ್ಡದ ತುದಿಯ ಕೊಂಚ ಭಾಗ ಮತ್ತು ತೊಟ್ಟಿಕ್ಕುತ್ತಿರುವ ರಕ್ತ.....
ಡಾ: ಸಿರಿ ಚಾಕು ಬೀಸಿ ಕತ್ತರಿಸಿದ್ದು- 'ಸೃಷ್ಟಿ'ಯ ಬಾಲದ ವಿಷಕಾರಿ ಮುಳ್ಳಿನ ತುದಿಯನ್ನ...!!
ಆ ತುಂಡಾದ ಭಾಗವನ್ನು ಒಯ್ದು ಒಂದು ಬಾಕ್ಸ್ ಗೆ ಹಾಕಿ ಒಯ್ದು ದೂರ ಎಸೆದಳು...ಈಗ ಅವಳಿಗೆ ಸಮಾಧಾನವಾಯ್ತು, ಆ ವಿಷಕಾರಿ ಭಾಗವನ್ನು ಕಟ್ ಮಾಡಿ ಆಗಿದೆಯಲ್ಲಾ, ಇನ್ನೆಲ್ಲಿ 'ಸೃಷ್ಟಿ' ಅದನ್ನು ಉಪಯೋಗಿಸಲು ಸಾಧ್ಯ?
ತನ್ನೆಡೆಗೆ ಇನ್ನೂ ಕೋಪದಿಂದ ನೋಡುತ್ತಿದ್ದ 'ಸೃಷ್ಟಿ' ಯನ್ನು ನೋಡಿ ಪ್ಚ್.. ಅನುತ್ತಾ ಹೊರಡುವಾಗ....... ಅದೇ ತಾನೇ ವಾಪಾಸ್ ಬಂದ ಡಾ: ವಿಶಾಲ್ ಆಪರೇಷನ್ ಟೇಬಲ್, ಅದರ ಮೇಲೆ ನಗ್ನವಾಗಿ ಮಲಗಿದ್ದ 'ಸೃಷ್ಟಿ' ಮತ್ತು ತುಂಡಾದ ಬಾಳ, ಅದಕ್ಕೆ ಬ್ಯಾಂಡೆಜ್, ಕಂಡು ಅಚ್ಚರಿಯಿಂದ ಸಿರಿ ಮುಖ ನೋಡಲು - ಅವಳು ನಡೆದದ್ದು ಎಲ್ಲವನ್ನು ಹೇಳಿದಳು...
ಅದನ್ನು ಕೇಳಿ ವಿಶಾಲ್ ಗೆ ಮೈ ನಡುಕ ಬಂತು, ಮೈ ಗಾಡ್..!! 'ಸೃಷ್ಟಿ' ತುಂಬಾ ಅಪಾಯಕಾರಿಯಾಗುತ್ತಿರುವಲು, ಅವಳನ್ನು ನಾಜೂಕಾಗಿ ಹ್ಯಾಂಡಲ್ ಮಾಡಬೇಕು ಎಂದುಕೊಳ್ಳುತ್ತ ಸಿರಿ ಗೆ ಕನ್ನ್ನು ಸನ್ನೆ ಮಾಡಿ ಹೋಗಲು ಹೇಳಿ, ಅನುಮಾನದಿಂದ ನೋಡುತ್ತಿದ್ದ ಹೆಂಡತಿಗೆ, ಸದಾ ಶಿವನಿಗೆ ಅದೇ ಧ್ಯಾನ ಇರಲ್ಲ ತಾಯಿ, ನಾ ಈಗ ಅವಳನ್ನು ಸಮಾಧಾನಪಡಿಸುವೆ, ನಂ ಬಗ್ಗೆ ಸಂದೇಹ ಪಡುವ ಅವಶ್ಯಕತೆ ಇಲ್ಲ ಎಂದ...
ಸಿರಿ ಉರಿ ಗಣ್ಣು ಬೀರುತ್ತಾ ಅಲ್ಲಿಂದ ಹೊರಟಳು...
'ಸೃಷ್ಟಿ' ನೋವಿನಿಂದ ಮತ್ತು ಕೈ ಕಾಲು ಕಟ್ಟಿ ಹಾಕಿದ್ದರಿಂದ ಹೊರಲಲೂ ಆಗದೆ ಕಣ್ಣೀರು ಸುರಿಸುತ್ತಾ ನರಳುತ್ತಿದ್ದಳು, ವಿಶಾಲ್ನತ್ಟ ಕರುಣೆ ತೋರು ಎಂಬಂತೆ ನೋಡಿದಾಗ, ವಿಶಾಲ್ ಅವಳ ಹತ್ತಿರ ಹೋಗಿ ಕೈ ಕಾಲಿಗೆ ಕಟ್ಟಿದ್ದ ಹಗ್ಗ ಬಿಚ್ಚಿ ಮೈ ಗೆ ಬಟ್ಟೆ ತೊಡಿಸಿ ಅವಳ ಹೆಗಲಿಗೆ ಕೈ ಹಾಕಿ ನಡೆಸಿಕೊಂಡು ಹೋಗಿ ಸೋಫಾದ ಮೇಲೆ ಕೂರಿಸಿ ಅವಳಿಗೆ ಕುಡಿಯಲು ಫ್ರೀಜ್ನಿಂದ ಜೂಸ್ ತೆಗೆದು ಕೊಟ್ಟ... ಅವಳನ್ನು ಅವಳ ರೂಮಿಗೆ ಒಯ್ದು ಮಲಗಿಸಿ ತಾ ತನ್ನ ರೂಮಿಗೆ ಹೋಗಿ ಅಲ್ಲಿ ಸಿರಿ ಜೊತೆ ಮಾತಾಡುತ್ತಾ ಕುಳಿತ...'ಸೃಷ್ಟಿ' ಭವಿಷ್ಯದ ಬಗ್ಗೆಯೇ ಮಾತು ಕತೆ ೨-೩ ಘಂಟೆಗಳಿಗೂ ಮಿಕ್ಕಿ ನಡೆಯಿತು.. ಮಾತಾಡುತ್ತಾ ಇರುವಾಗ ಫಕ್ಕನೆ ಕರೆಂಟ್ ಹೋಯ್ತು, ಮೇಣದ ಬತ್ತಿಗಾಗಿ ಹುಡುಕಾಡುವಾಗ, ವಿಶಾಲ್ ಹೇಳಿದ ಬೇಡ ಬಿಡು, ಬೆಳದಿಂಗಳು ಚೆನ್ನಾಗಿದೆ, ಆಸ್ಟ್ ಬೆಳಕೇ ಸಾಕು ಎನ್ನುತ್ತಿರುವಾಗ, ತಟ್ಟನೆ ಬಾಗಿಲು ತೆರೆದ ಶಬ್ಧ ಹಿಂದೆಯೇ ಹೆಜ್ಜೆಗಳ ಶಬ್ಧ ಮತ್ತು ಮುಂಬಾಗಿಲು ತೆರೆದದ್ದು ಮುಚ್ಚಿದ್ದು ಎಲ್ಲವೂ ಕ್ಷಣಮಾತರದಲ್ಲಿ ನಡೆದು ಇಬ್ಬರೂ ಓಡುತ್ತಾ ಹೋಃಗ್ ನೋಡಿದರೆ ಗೋಡೆಗಳ ಮೇಲೆ ಸರ ಸರನೇ ಹತ್ತಿ ಮನೆ ಮೇಲೆ ಹೋಗುತ್ತಿರುವ 'ಸೃಷ್ಟಿ' ಕಾಣಿಸಿ ಅಸ್ಟೆ ಬೇಗ ಮರೆಯೂ ಆದಳು...
ದಿಗ್ಭ್ರಾಂತಿಯಿಂದ ಎಚ್ಚೆತ್ತು ವಿಶಾಲ್ ಓಡಿ ಹೋಗಿ ಮನೆಯೊಳಗಿನ ಏಣಿ ತಂದು ಸಿರಿ ಗೆ ಅದನ್ನು ಬಿಗಿಯಾಗಿ ಹಿಡಿದುಕೊಂಡು ನಿಂತಿರಲು ಹೇಳಿ ಸರ ಸರನೇ ಮೇಲೆ ಹತ್ತಿದ, ಅಲ್ಲಿ 'ಸೃಷ್ಟಿ ಬೆಳದಿಂಗಳು ಮತ್ತು ಬೀಸುತ್ತಿರುವ ಗಾಳಿಗೆ ಕೈ ಅಗಲ ಮಾಡಿ ನಿಂತುಕೊಂಡು ಖುಷಿ ಪಡುತ್ತಿರುವುದು ಕಂಡಿತು, ಒಮ್ಮೆ ವಿಶಾಲ್ ಕಡೆ ಮತ್ತು ಇನ್ನೊಮ್ಮೆ ಪೂರ್ಣ ಚಂದ್ರನ ಕಡೆ ನೋಡುತ್ತಾ ನಕ್ಕಳು, ಹಿಂದೆಯೇ ಅವಳ ಬೆನ್ನಿನ ಭಾಗದಲ್ಲಿ ಏನೋ ಶಬ್ಧ ಕೇಳಿಸುತ್ತಾ ಎರಡು ಕಡೆ ಚರ್ಮ ಸೀಳಿಕೊಂಡು ಏನೋ ಹೊರ ಬಂದಂತೆ ವಿಶಾಲ್ ಗೆ ಅನ್ನಿಸಿತು, ಆಗ ಬಾಲದಿಂದ ವಿಷಪೂರಿತ ಸೂಜಿ ತರಹದ್ದು ಈಗ ಅವಳ ಬೆನ್ನಿನ ಬಾಗದಲ್ಲಿ ಏನು ಬರಬಹುದು ಅಂತ ಭಯ ಪಡುತ್ತಾ ನೋಡುತಿರಲು......................
ಕೆಳಗೆ ಏಣಿ ಹಿಡಿದು ನಿಂತಿದ್ದ ಸಿರಿ ಕೇಳಿದಳು- ವಿಶಾಲ್ 'ಸೃಷ್ಟಿ' ಅಲ್ಲಿರುವಳೇ? ಯಾಕೆ ಮೂಕನಾಗಿ ನಿಂತಿರುವೆ? ಅವಳ ಯಾವ ಪ್ರಶ್ನೆಗೂ ಪ್ರತಿಕ್ರಿಯೆ ಬರದೇ ಇರಲು, ಅವಳ ಮನ ಕೇಡು ಶಂಕಿಸಿ ತಾ ಸಹಾ ಏಣಿ ಹತ್ತಿ ಬಂದು ಅಲ್ಲಿ ಮನೆಯ ಕೊನೆಯಲ್ಲಿ ತುದಿಯಲ್ಲಿ ಕೈ ಆಗಲಿಸಿ ನಿಂತಿದ್ದ 'ಸೃಷ್ಟಿ ಬೆನ್ನಿನ ಪಕ್ಕೆಯಿಂದ ಎರಡು ರೆಕ್ಕೆಗಳು ಆಚೆ ಬಂದು ಕಾಲು ಹಕ್ಕಿಗಳ ರೀತಿ ಬದಲಾಗಿ, ಇನ್ನೇನು ಅವಳು ಹಾರಲು ಅಣಿಯಾಗಬೇಕು, ಆಗ ಸಿರಿ ಎಚ್ಚೆತ್ತು ಕರೆದಳು, 'ಸೃಷ್ಟಿ, ಬೇಡ ಹೋಗಬೇಡ, ನಾವ್ ನಿನ್ನನ್ನು ತುಂಬಾ ಪ್ರೀತಿಸುವೆವು, 'ಕಣ್ಣು ಮುಚ್ಚಿ ನಿಂತಿದ್ದ 'ಸೃಷ್ಟಿ' ಈ ಮಾತು ಕೇಳಿ ಕೆಂಗಣ್ಣಿನಿಂದ ತಿರುಗಿ ನೋಡಲು, ಸಿರಿ- ನಿನ್ನ ಬೆಕ್ಕು ಕಿತ್ತಿಕೊಂಡು ಹೋಗಿದ್ದು ನಿನಗೆ ನೀ ಈಗ ದೊಡ್ಡವಳಾಗಿರುವೆ,ವಯಸ್ಸಿಗೆ ತಕ್ಕ ಪ್ರೌಢಿಮೆ ಬರಲಿ - ಅರಿವು ಮೂಡಲಿ ಅಂತ, ಇನ್ನು ನಿನ್ನ ಬಾಲ ಕತ್ತರಿಸಲು ಅದರಲ್ಲಿ ವಿಷದ ಅಂಶ ಇದ್ದುದೇ ಕಾರಣ,ನೀ ನಂಗೆ ಹೊಡೆದೇ ಅಂತ ನಾ ಏನೂ ಬೇಜಾರಾಗಿಲ್ಲ ಗೊತ್ತಾ? ಅಂದಳು, ವಿಶಾಲ್- 'ಸೃಷ್ಟಿ' ನೀ ಸದಾ ನಮ್ಮೊಡನೆಯೇ ಇರಬೇಕು, ಇನ್ನೂ ಮುಂದೆ ನಿನಗೆ ಯಾವ ಕೊರತೆಯೂ ಆಗದ ಹಾಗೆ ನಾವ್ ನೋಡಿಕೊಳ್ಳುವೆವು, ನೀ ನಿನ್ನ ಇಸ್ಟ ಬಂದ ಹಾಗೆ ಇರಬಹುದು ಎಂದ, ಕೈ ಆಗಲಿಸಿ ಆಲಂಗಿಸಿಕೊಳ್ಳಲು ದೈನ್ಯತೆಯಿಂದ ತನ್ನೆಡೆಗೆ ನೋಡುತ್ತಿದ್ದ ವಿಶಾಲ್ ಬಳಿ ಹಾರುತ್ತ ಬಂದು ಅಪ್ಪಿಕೊಂಡು ನಿಂತಳು 'ಸೃಷ್ಟಿ'.....
ಅವಳನ್ನು ಮರಳಿ ಕೆಳಗೆ ಕರೆದುಕೊಂಡು ಹೋಗಿ ಅವಳ ಮೈದಡ್ವಿ ನಿದ್ದೆ ಆವರಿಸಿದ ಮೇಲೆ ಹೊದಿಕೆ ಹೊದೆಸಿ ಬಾಗಿಲು ಹಾಕಿಕೊಂಡು ಹೋದರು ವಿಶಾಲ್ ಮತ್ತು ಸಿರಿ....
ಚಿಂತಿತರಾಗಿ ಕುಳಿತರು- ಮೊದಲು ವಿಷಕಾರಿ ಬಾಲ-ಅದು ಕತ್ತರಿಸಿ ತೆಗೆದು ಆಯ್ತು, ಈಗ ರೆಕ್ಕೆಗಳು ಮೂಡುವುದು, ಅವಳು ಹಾರಿ ಹೋಗಲು ತಮ್ಮಿಂದ ದೂರಾಗಲು ಆಸ್ಟ್ಯೂ ಸಾಕಲ್ಲ...!!
ಇಂತಹ ಕ್ಷಣದಲ್ಲಿ ಮೈ ಮನ್ ರಿಲಾಕ್ಸ್ ಆಗಬೇಕು, ಎನ್ನುತ್ತಾ ಸಿರಿ , ವಿಶಾಲ್ ಬಳಿ ಸಾರಿ ಅವನ ದೇಹಕ್ಕೆ ತಾಗಿ ಕುಳಿತುಕೊಂಡಳೂ, ಅವನ ಬೆನ್ನ ಮೇಲೆ ಕೈ ಆಡಿಸುತ್ತಿರಲು, ವಿಶಾಲ್ ಅವಳನ್ನು ಎತ್ತಿಕೊಂಡು ತಮ್ಮ ರೂಮ್ ಕಡೆಗೆ ಹೊರಟ, ಇದೆಲ್ಲವನ್ನೂ ಬಾಗಿಲ ಮರೆಯಿಂದ ಇಣುಕಿ ನೋಡುತ್ತಿದ್ದ 'ಸೃಷ್ಟಿ' ತಲೇ ಎತ್ತಿ ನೋಡಿದರೆ ಅಲ್ಲಿ ಹಾಲಿನಲ್ಲಿ ಮನೆ ಮೇಲುಗಡೆ ನೇರವಾಗಿ ಒಂದು ಕಿಟಕಿ ಇದ್ದುದು ಅದು ಓಪನ್ ಆಗಿದ್ದುದು ಕಾಣಿಸಿ, ಕೈ ಆಗಲ್ ಮಾಡಿ ತನ್ನ ರೆಕ್ಕೆಗಳನ್ನು ಹೊರ ತೆಗೆದು ಹಾರುತ್ತ ಆ ಕಿಟಕಿ ಮೂಲಕ ಹೊರ ಹೋಗಿ ಮನೆಯಿಂದ ದೂರದಲ್ಲಿ ಕಾಣಿಸುತ್ತಿದ ಗಿಡ ಗ೦ಟಿ ಬೆಳೆದ ಪ್ರದೇಶದಲ್ಲಿ ಇಳಿದು ಸದ್ದು ಬರದ ಹಾಗೆ ಕಾದು ಕುಳಿತಳು ಹೊಂಚು ಹಾಕುತ್ತಾ.....???
ಡಾ: ವಿಶಾಲ್ -ಸಿರಿ ದಂಪತಿ ಮಲಗಲು ಅಣಿಯಾಗುವಾಗ ಕಾರಿನ ಶಬ್ಧ ಮತ್ತು ಅದರ ಲೈಟ್ಸ್ ಕಣ್ಣಿಗೆ ರಾಚಿ ಇಸ್ಟ್ಯೂ ಹೊತ್ಟಲ್ಲಿ ಯಾರು ಬಂದಿದ್ದು ಅಂತ ನೋಡಿದರೆ..........
ಅಲ್ಲಿ ಕಾರಿಂದ ಇಳಿದು ಇವರ ಕಡೆ ನೋಡುತ್ತಾ ನಿಂತಿದ್ದು... ಡಾ: ಕಣ್ನನ್...!!
ಹಾಯ್- ಹೇಗಿದೀರಾ?
'ಸೃಷ್ಟಿ' ಹೇಗಿದೆ?
ಎಲ್ಲಿದೆ?
ಈಗ ನನಗೆ ಅದು ಬೇಕಿತ್ತಲ್ಲ...
ಸ್ಸಾ.... ಸೃಷ್ಟಿ....ಸೃಷ್ಟಿ....
ಹಾ ಸೃಷ್ಟಿಯೆ, ಎಲ್ಲಿ?
ನೀವ್ ಅವತ್ತೇ ಅದನ್ನು ನಾಶಪಡಿಸಲು ಹೇಳಿದ್ರಲ್ಲ ಸ್ಸಾ... ಈಗ ಕೇಳಿದರೆ.....
ಹಾ ಅದನ್ನು ನಾಶ ಪಡಿಸಲು ಹೇಳಿದ್ದೆ, ಆದರೆ ಅದು ನಾಶ ಆಗಿಲ್ಲವಲ್ಲ, ನೀವ್ ನಾಶ ಮಾಡಿಲ್ಲವಲ್ಲ, ಅದು ಅಂದು ಇಂದು ಮುಂದೂ ಕಂಪನಿ ಆಸ್ತಿ- ಹಕ್ಕು... ನಾ ಈಗ ಅದನ್ನು ತೆಗೆದುಕೊಂಡು ಹೋಗಲು ಬಂದಿರುವೆ...
ಡಾ: ವಿಶಾಲ್ ಮತ್ತು ಸಿರಿ ಈ ಅಚ್ಚರಿಯ ಆಘಾತಕ್ಕೆ ಮುಖವನ್ನು ಸಣ್ಣಗೆ ಮಾಡಿಕೊಂಡು ನಿಂತಿರಲು, ಡಾ: ಕಣ್ನನ್ ಪ್ಲೀಜ್... ಅಂದರು..
ಅದು ದೈನ್ಯತೆಯ ಕೋರಿಕೆಯ ಜೊತೆಗೆ ಅಧಿಕಾರಯುತ ಆಜ್ಞೆ ಸಹಾ ಅನ್ನಿಸಿತು..
ಬನ್ನಿ ಸ್ಸಾ... 'ಸೃಷ್ಟಿ' ಅಲ್ಲಿರುವಲು, ಎನ್ನುತ್ತಾ ಮನೆಯೊಳಗೆ ಹೋಗಿ ನೋಡಿದರೆ ಏನಿದೆ ಅಲ್ಲಿ....??
ಡಾ: ವಿಶಾಲ್ ಮತ್ತು ಸಿರಿ ಮುಖ ಮುಖ ನೋಡಿಕೊಂಡಾಗ , ಡಾ: ಕಣ್ನನ್ ಎಲ್ಲಿ ಬಚ್ಚಿಟ್ತಿರುವಿರಿ ಅದನ್ನು?
ಅದು ನಂಗೆ ಬೇಕು ಅಸ್ಟೆ...
ಅಯ್ಯೋ..!! ಇಲ್ಲಿಯೇ ಮಲಗಿಸಿ ಹೋಗಿದ್ದೇನಲ್ಲ, ಎಲ್ಲಿ ಹೋದಳು ಅಂತ ಒಮ್ಮೆ ಮೇಲೆ ನೋಡಿದರೆ ಓಪನ್ ಆಗಿದ್ದ ಕಿಟಕಿ ಕಾಣಿಸಿ.......:(((
ಹಿಂದೆಯೇ ಓಡುತ್ತಾ ಬಂದು ಹೊರಗೆ ಏಣಿ ಹಾಕಿ ಮೇಲೆ ಹತ್ತಿ ನೋಡಿದರೆ ತುದಿಯಲ್ಲಿ 'ಸೃಷ್ಟಿ' ಉಟ್ಟುಕೊಂಡಿದ ವಸ್ತ್ರದ ಒಂದು ತುಂಡು ತಂತಿ ಒಂದಕ್ಕೆ ಸಿಕ್ಕಿದ್ದು ಕಾಣಿಸಿತು.. ಕೆಳಗೆ ನೋಡಿದರೆ ಕತ್ತಲು ಏನೂ ಕಾಣುತ್ತಿಲ್ಲ.... ಕೆಳಗೆ ಇಳಿದು ಬಂದು ಡಾ: ವಿಶಾಲ್ ಆ ಬಟ್ಟೆ ತುಂಡು ತೋರಿಸಿ - ಮೊದಲಿನಿಂದಲೂ ಇಲ್ಲೀವರೆಗೆ ಆದ ಎಲ್ಲ ಘಟನೆಗಳನ್ನು ಹೇಳಿದ- ತಾ 'ಸೃಷ್ಟಿ' ಸೇರಿದ್ದು ಬಿಟ್ಟು...:())
ಅದನ್ನೆಲ್ಲ ಕೇಳಿ ಡಾ: ಕಣ್ನನ್ ಹೌವ್ವಾರಿದರು, ಓ ಮೈ ಗಾಡ್..!! ಅವಳು ಈಗ ಓಡಿ ಹೋಗಿ ಎಲ್ಲಿ ಏನು ಮಾಡುತ್ತಿರುವಳೋ?
ನಿಮ್ಮಿಬ್ಬರ ಮೂರ್ಖತನದಿಂದ- ಬೇಜಾವಾಬ್ದಾರಿತನದಿಂದ ನಂ ಕಂಪನಿ ಇಮೇಜ್ ಹಾಳು ಜೊತೆಗೆ ನಾವೆಲ್ಲ ಕಂಬಿ ಎಣಿಸುವ ಹಾಗೆ ಮಾಡಿದಿರಲ್ಲ, ಈ ವಿಷ್ಯ ತಿಳಿದರೆ ಧರ್ಮ ಗುರುಗಳು, ಸಾಮಾನ್ಯ ಜನತೆ- ಮೀಡಿಯಾ ಎಲ್ಲರೂ ನಮ್ಮ ಮೇಲೆ ಮುಗಿ ಬೀಳುವರು..... ಎಲ್ಲ ಹಾಳಾಗಿ ಹೋಯ್ತು ಅಂತೆಲ್ಲಾ ಬಡಬಡಿಸುತ್ತಿರಲು.............??
ನೋಡಿ- ಈಗಲೆ 'ಸೃಷ್ಟಿ' ಉಪಯೋಗಿಸಿದ ಎಲ್ಲ ವಸ್ತುಗಳನ್ನು ಅವಳು ಇಲ್ಲಿದ್ದಳು ಎಂಬಂತಾ ಎಲ್ಲ ಕುರುಹುಗಳನ್ನು ನಾಶ ಮಾಡಿ... ಪೊಲೀಸರು ಬಂದರೆ ಮುಂದೆ ತೊಂದರೆ ಅದಕ್ಕೆ...!!
ಕ್ವಿಕ್....
ಡಾ: ವಿಶಾಲ್ ಮತ್ತು ಸಿರಿ ಮನೆಯೊಳಗೆ ಹೋಗಿ 'ಸೃಷ್ಟಿ' ಕೋಣೆಯಲ್ಲಿ ಅವಳು ಉಪಯೋಗಿಸಿದ್ದ ಎಲ್ಲ ವಸ್ತುಗಳನ್ನು ಬೆಡ್ -ಬೇಡ್ಸೀಟ್- ಬಟ್ಟೆ ಬರೆ- ಅಲಂಕಾರಿಕ ಸಾಮಾಗ್ರಿ- ಎತ್ತಿಕೊಳ್ಳುವಾಗ, ಒಂದು ಹಾಳೆಗಳ ಬನ್ದಲ್ ಕೆಳಗೆ ಬಿಟ್ಟು, ಅದನ್ನು ಎತ್ತಿಕೊಂಡು ನೋಡಿದರೆ, 'ಸೃಷ್ಟಿ' ಅದರಲ್ಲಿ ತನ್ನ ಮತ್ತು ವಿಶಾಲ್ ಸಿರಿ ಯ ಚಿತ್ರಗಳನ್ನು ಬಿಡಿಸಿದ್ದು, ತನ್ನ ಬೋಳು ತಲೆಗೆ ಇನ್ನೊಂದು ಚಿತ್ರದಲ್ಲಿ ಸಿರಿ ಯ ತರಹ ಕೂದಲು ಬಿಡಿಸಿದ್ದಳು..!! ಎಸ್ತೊಂದು ಚಿತ್ರಗಳು...ಅಬ್ಬಾ..!! ಅವಳು ಇಸ್ತು ಚಿತ್ರ ಯಾವಾಗ ಬಿಡಿಸಿದಳು? ನಾ ಒಂದು ದಿನವೂ ಗಮನಿಸಲಿಲ್ಲವಲ್ಲ... ವಿಶಾಲ್-ಸಿರಿ ಒಬ್ಬರಿಗೊಬ್ಬರು ಹೇಳಿದರು.... ಬೇಗ ಬಾ ಇವನ್ನೆಲ್ಲ ಒಯ್ದು ಹೊರಗೆ ಸುಟ್ಟು ಹಾಕೋಣ ಎನ್ನುತ್ತಾ ವಿಶಾಲ್ ಹೊರಟ, ಸಿರಿ ಹಿಂಬಾಲಿಸಿದಳು ಭಾರವಾದ ಹೃದಯದೊಂದಿಗೆ....
ಹೊರಗೆ ಹೋಗಿ ಅಲ್ಲಿ ಕಟ್ಟಿಗೆ ಒಟ್ಟು ಗೂಡಿಸಿ ಕೆರೋಸಿನ್ ಸುರಿದು ಅದರಲ್ಲಿ 'ಸೃಷ್ಟಿ' ಯ ಎಲ್ಲ ವಸ್ತುಗಳನ್ನು ಹಾಕಿ ಬೆಂಕಿ ಇಕ್ಕಿದರು.... ಉರಿಯುತ್ತಿರುವ ಬೆಂಕಿಯಲ್ಲಿ ಸುಡುತ್ತಿರುವ ವಸ್ತುಗಳನ್ನು ನೋಡುತ್ತಾ, ಕಣ್ಮರೆಯಾದ 'ಸೃಷ್ಟಿ' ಬಗ್ಗೆ ಎಲ್ಲರೂ ಚಿಂತಿಸುತ್ತಾ ಇರಲು, ಏನೋ ಸುತ್ತ ಮುತ್ತ ಹಾರಾಡಿದ ಹಾಗೆ ಅನಿಸಿ, ಡಾ: ಕಣ್ನನ್ , ವಿಶಾಲ್ ಮತ್ತು ಸಿರಿ ನೋಡಿದಾಗ ಏನೋ ಬಂದು ತಮ್ಮ ಮುಂದೆ ಬಿದ್ದ ಹಾಗೆ ಅನ್ನಿಸಿತು........???
ಏನದು?...
ಏನದು???
ಅಂತ ಬಗ್ಗಿ ನೋಡಿ ಅದನ್ನು ಕೈನಲ್ಲಿ ಎತ್ತಿಕೊಂಡ ಡಾ: ಕಣ್ಣನ್ನ್ ಕಿರುಚಿದರು.... ಹಾಗೆಯೇ ಅದನ್ನು ಎಸೆದರು ಭಯದಿಂದ ನಡುಗುತ್ತಾ....
ಅವರು ಕೈನಲ್ಲಿ ಹಿಡಿದದ್ದು- ...................................................................
ರಕ್ತ ಸೋರುತ್ತಿದ್ದ ಮನುಷ್ಯನ ಕೈ ಭಾಗ....!!
ಸರ್ರನೇ ಹಿಂದೆ ತಿರುಗಿ ತಮ್ಮ ಕಾರಿನತ್ತ ನೋಡಿದರೆ ಅಲ್ಲಿ ತನ್ನನ್ನ್ ಕರೆ ತಂದ ಡ್ರೈವರ್ ಇಲ್ಲ... ಅಂದ್ರೆ ಡ್ರೈವರ್ನ ಯಾರೋ ಸಾಯಿಸಿರುವರು....
ನಾವ್ ಇಲ್ಲೇ ಇರುವಾಗ ಶಬ್ಧವೇ ಆಗದಂತೆ ಹೊತ್ತೊಯ್ದು ಹೇಗೆ ಸಾಯಿಸಲು ಸಾಧ್ಯ?
ಯಾರದೂ?
------------------------------------------------------------------------------------------------------
ಕೊನೆಯ ಭಾಗ(೬ ನೇಯದೇ) ಈಗಾಗಲೇ ಟೈಪಿಸಿ ಇಟ್ಟಿದ್ದು(ಇದೆ ಪ್ರಥಮ ಬಾರಿ ಬರಹ ಟೈಪಿಸಿ ಇಟ್ಟಿದ್ದು!!!) ನಾಳೆ ರಾತ್ರಿಯೊಳಗೆ ಸೇರಿಸುವೆ.....
ಅಂತ್ಯ......ದೇ...??
ನಿರೀಕ್ಷಿಸಿ.......
Comments
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೫
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೫ by sathishnasa
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ ೫:ಸತೀಶ್ ಅವ್ರೆ...
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೫
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೫ by kavinagaraj
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ ೫:ಹಿರಿಯರೇ....
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೫
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೫ by dattatraya
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ ೫:ದತ್ತಾತ್ರೇಯ ಅವರೇ-