ಪ್ರಾದೇಶಿಕ ಪತ್ರಿಕೆಗಳು, ಅಂದು..
ಭಾಷಾ ಬೆಳವಣಿಗೆಗೆ ಮತ್ತು ಉಳಿವಿಗೆ ಪ್ರಾದೇಶಿಕ ಪತ್ರಿಕೆಗಳ ಕೊಡುಗೆ..
ಭಾಷೆ, ಬಹುಷಹ ಮನಸಿನ ಮುಕ್ತ ಮಾತೃಕೆಗಳ ಸಂವಹನ ಕ್ರಿಯೆಯ ಮೂಲ ದಾತುವಾದರೆ ಅದರ ಅಸ್ಥಿತ್ವವನ್ನು ಬಲಪಡಿಸುವಲ್ಲಿ ಪ್ರಾದೇಶಿಕ/ಸಣ್ಣ ಪತ್ರಿಕೆಗಳ ಪಾತ್ರ ದೊಡ್ಡದು, ವಿದ್ಯುನ್ಮಾನ ಮಾಧ್ಯಮದ ಅಬ್ಬರದ ನಡುವೆಯು ಸ್ಥಳಿಂiÀi ಜನಸಮುದಾಯವನ್ನು ಓದಿನತ್ತ ಮುಖ ಮಾಡಿಸಿ ಪ್ರಾಧೇಶಿಕತೆಯನ್ನು ಹೆಚ್ಚಿಸುವಲ್ಲಿ ಮತ್ತು ಸಮಾಜದ ಮುಖ್ಯವಾಹಿನಿಯಿಂದ ದೂರವಾದವರ ಧ ನಿಯಾಗುವಲ್ಲಿ ಈ ಪತ್ರಿಕೆಗಳ ಪಾತ್ರ ಮಹತ್ತರವಾದುದು. ಜಾಗತೀಕರಣಕ್ಕೆ ಒಳಗಾದ ಬಹುತೇಕ ಅಂಶಗಳಲ್ಲಿ ಮಾಧ್ಯಮಗಳು ಅಗ್ರ ಸ್ಥಾನವನ್ನು ಪಡೆಯುತ್ತವೆ, ಅಭಿವೃದ್ಧಿಯು ನಿರಂತರ ಬೆಳವಣಿಗೆಯಿಂದ ಕೂಡಿರುತ್ತದೆ ಎಂಬುದೆಷ್ಟು ಸತ್ಯವೋ ತಾತ್ವಿಕ ಸಿದ್ದಾಂತಗಳನ್ನು ಅಭಿವೃದ್ದಿಯು ಮುಸುಕುಗೊಳಿಸುತ್ತದೆ ಎಂಬುದೂ ಅಷ್ಟೇ ಸತ್ಯ.
ಉದಾತ್ತ ಧ್ಯೇಯ ಮತ್ತು ಸ್ವಾತಂತ್ರದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಪತ್ರಿಕೆಗಳು ಅದ್ಯಾವ ಪರಿ ವಾಣಿಜ್ಯೀಕರಣಗೊಂಡವೆಂದರೆ ಅವು ತಮ್ಮ ಸಾಮಾಜಿಕ ಅಜೆಂಡಗಳನ್ನೆ ಬದಲಿಸಿಕೊಂಡವು. ಆದರೆ ರಾಷ್ಟ್ರೀಯ ಪತ್ರಿಕೆಗಳಿಗೆ ಹೋಲಿಸಿದಾಗ ಪ್ರಾದೇಶಿಕ ಪತ್ರಿಕೆಗಳು ಆ ಮಟ್ಟದ ಬದಲಾವಣೆಗೆ ತೆರೆದುಕೊಳ್ಳಲಿಲ್ಲ ಅವುಗಳೆಂದಿಗೂ ಸ್ಥಳಿಯಾ ಜನಸಮುದಾಯದ ಅಭಿಪ್ರಾಯ ಮತ್ತು ಅನಿವಾರ್ಯತೆಯ ಧ್ಯೂತಕವಾಗಿಯೆ ಬೆಳೆದವು.
ವಾಣಿಜ್ಯೀಕರಣ ಅಥಾವಾ ಜಾಗತೀಕರಣದ ಪದಗಳಷ್ಟು ಸರಳವಾಗಿ ಅವುಗಳ ಪ್ರಭಾವ ಸರಳವಾಗಿಲ್ಲ. ಜನ ಜೀವನ, ಸಾಂಸ್ಕೃತಿಕ ನೆಲೆ, ಭಾವನೆಗಳು, ಜೀವನ ಶೈಲಿ, ಸಂಬಂಧಗಳು ಸೇರಿದಂತೆ ಒಂದು ನಾಗರೀಕತೆಯ ಮೇಲಾಗುವ ಪರಿವರ್ತನಾ ದಬ್ಬಾಳಿಕೆ ಎಂಬುದನ್ನು ನಾವು ತಿಳಿಯಬೇಕಿದೆ. ಹಾಗೆಂದು ಅವುಗಳೆಲ್ಲ ಋಣಾತ್ಮಕ ಅಂಶಗಳೇ ಎಂದು ಹೇಳುತ್ತಿಲ್ಲ. ಇದರಿಂದಾಗಿ ಓದುಗ, ಬರಹಗಾರ, ಮುದ್ರಕ ಸೇರಿದಂತೆ ಇಡೀ ಒಂದು ವ್ಯವಸ್ಥೆ ವಿದ್ಯುನ್ಮಾನವನ್ನು ಆಧರಿಸಿದಂತಾಗಿದ್ದೂ ನಿಜಕ್ಕೂ ಬೇಸರದ ಸಂಗತಿ ಅಷ್ಟರ ಮಟ್ಟಿಗೆ ಓದುಗನನ್ನು ಸೆಳೆದುಕೊಂಡವು. ಅಲ್ಲಿಗೆ ಇದನ್ನು ಒಂದು ಚಾರಿತ್ರಿಕ ಸಮೂಹಕ್ಕೆ ಬಿದ್ದ ಪೆಟ್ಟೆಂದು ಅರ್ಥೈಸಬಹುದಲ್ಲವೇ? ಈ ದೆಸೆಯಿಂದಲೆ ಪ್ರಾದೇಶಿಕ ಪತ್ರಿಕೆಗಳು ಗಮನಾರ್ಹ ಮಾನ್ಯತೆಯನ್ನು ಪಡೆಯುತ್ತವೆ.
ಅದರಲ್ಲೂ ಕರ್ನಾಟಕದ ಮಟ್ಟಿಗೆ ಹಲವು ಪತ್ರಿಕೆಗಳು ಸಮಾಜ ಸುಧಾರಣೆಯ ಆಯುಧವಾಗಿದ್ದವು ಹಾಗೂ ಅವುಗಳೆಲ್ಲವು ಸಾಹಿತ್ಯೀಕ ನೆಲೆಯಲ್ಲಿ ರೂಪುಗೊಂಡಿದ್ದವು ಎಂಬುದು ಪ್ರಮುಖವಾದ ಅಂಶ. ಅವುಗಳಲ್ಲಿ ಕೆಲವುಗಳೆಂದರೆ ಕನ್ನಡದ ಆಸ್ತಿಯಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರಿಂದ 1940ರಿಂದ1977ರ ವರೆಗೆ ಪ್ರಕmÀಗೊಂಡ ‘ಜೀವನ’ ಪತ್ರಿಕೆ, ಬೆಂಗಳೂರು ಸೆಂಟ್ರಲ್ ಕಾಲೇಜಿನ ‘ಪ್ರಬುದ್ಧ ಕರ್ನಾಟಕ’(1916), 1972ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಹೊರತಂದ ‘ಸಾಧನೆ’ ಇದರ ಆರಂಭಿಕ ಸಂಪಾದಕರು ಇಂದಿನ ರಾಷ್ಟ್ರಕವಿ ಶಿವರುದ್ರಪ್ಪರವರಾಗಿದ್ದರು, ಕೇ.ವಿ ಸುಬ್ಬಣ್ಣ ಅವರ ‘ಸಾಕ್ಷಿ’. ಪೂರ್ಣ ಚಂದ್ರ ತೇಜಸ್ವಿಯವರ ‘ಲಹರಿ’ ಚಂದ್ರಶೇಲರ್ ಪಾಟೀಲರ ‘ಸಂಕ್ರಮಣ’, ಎಂ ಶ್ರೀನಿವಾಸ್ ಅವರ ‘ಶೂದ್ರ’ ಹಾಗೂ ಜಾಗೃತಿ ಮಹಿಳಾ ಅಧ್ಯನ ಖೇಂದ್ರದಿಂದ ಪ್ರಸಾರವಾಗಿತ್ತಿದ್ದ ‘ಅಚಲ’ ಎಂಬ ಪತ್ರಿಕೆಗಳು ಪ್ರಾದೇಶಿಕತೆಗೆ ಜೀವತುಂಬಿ ಜನಸಮುದಾಯದ ಜೀವನಾಡಿಯಾಗಿದ್ದವು ಮತ್ತೊಂದು ಮುಖ್ಯ ಅಂಶವೆಂದರೆ ಇವೆಲ್ಲವು ಸಾಹಿತ್ಯಿಕ ಪ್ರೇರಣೆಯಿಂದ ಹುಟ್ಟಿಕೊಂಡವಾಗಿದ್ದರೂ ರಾಜಕೀಯ ಧೋರಣೆಯನ್ನು ಪ್ರಶ್ನಿಸಿದ್ದವು ಮತ್ತು ಸಾಮಾಜಿಕ ಸಮಾನತೆಯನ್ನು ಸಮರ್ಥಿಸಿದ್ದವು.ಆದರೆ ಎಂದಿಗೂ ಆಧುನಿಕರಣ, ಜಾಗತೀಕರಣದ ಸೋಗಿನಲ್ಲಿ ತಮ್ಮನ್ನು ತಾವು ಮಾರಿಕೊಳ್ಳಲಿಲ್ಲ. ಹಾಗಾಗಿಯೆ ಆ ಕಾಲದ ಸಮೂಹ ಪ್ರಜ್ಞೆಯ ಜನ ಸಮೂದಾಯವನ್ನು ರೂಪಿಸಿ ಕರ್ನಾಟಕದ ಪತ್ರಿಕಾ ಇತಿಹಾಸದಲ್ಲಿ ಮೈಲುಗಲ್ಲಾಗಿವೆ ಹೀಗೆ ಒಂದು ಸಮಾಜದ ಎಲ್ಲಾ ವರ್ಗದವರಿಗೂ, ಎಲ್ಲಾ ಕಾಲಕ್ಕೂ ಸಲ್ಲುವ ಪತ್ರಿಕೆಗಳನ್ನು ಕಟ್ಟಿ ಆ ಮೂಲಕ ಪ್ರಾದೇಶಿಕತೆಯ ಬೀಜ ಬಿತ್ತಿದ ಮತ್ತು ಪ್ರಾದೇಶಿಕತೆಯ ಮಹತ್ವವನ್ನು ತಿಳಿಸಿದ ಆ ಪತ್ರಿಕೆಗಳ ಉದ್ದೇಶಗಳನ್ನು ಸಂಪೂರ್ಣ ಸಾಧ್ಯವಾಗಿಸುವ ಬಗ್ಗೆ ಇನ್ನಾದರೂ ಮಾಧ್ಯಮಗಳು ಚಿಂತಿಸುತ್ತವೆಯೆ ಎಂಬುದನ್ನು ಪ್ರಜ್ಞಾನವಂತ ಸಮಾಜ ಎದುರು ನೋಡುತ್ತಿದೆ.
~ಶಿವಪ್ರಸಾದ್ ಶಹಾಪುರ.