ಎಲ್ಲಿ ನೋಡಲಿ ನಿನ್ನ
ಎಲ್ಲಿ ನೋಡಲಿ ನಿನ್ನ, ಹೇಗೆ ಕಾಣಲಿ ನಿನ್ನ|
ನಿನ್ನಿರುವ ಹುಡುಕಿ ನಾ ಬಲು ಸೋತೆನು||
ಕಣ್ಣಿನಲಿ ನೋಟವನು,ಕಿವಿಯೊಳು ಶಬ್ಧವನು|
ಬಾಯ್ತುಂಬ ಹರಿನಾಮ ನುಡಿಸಿದವನಾರು? ||
ಎಲ್ಲಿ ನೋಡಲಿ ನಿನ್ನ, ಹೇಗೆ ಕಾಣಲಿ ನಿನ್ನ|
ನಿನ್ನಿರುವ ಹುಡುಕಿ ನಾ ಬಲು ಸೋತೆನು||
ಹಸಿವು ಕೊಟ್ಟವ ನೀನು ,ಅನ್ನ ಕೊಟ್ಟವ ನೀನು|
ಹೊನ್ನಿನಲಿ ಆಸೆಯನು ಇತ್ತವನು ನೀನು ||
ಸಕಲ ಇಂದ್ರಿಯಗಳಿಗೆ ಶಕ್ತಿದಾತನು ನೀನು|
ಮಾತಿಗೇ ನಿಲುಕದ ಚೈತನ್ಯ ನೀನು||
ಎಲ್ಲಿ ನೋಡಲಿ ನಿನ್ನ, ಹೇಗೆ ಕಾಣಲಿ ನಿನ್ನ|
ನಿನ್ನಿರುವ ಹುಡುಕಿ ನಾ ಬಲು ಸೋತೆನು||
ನನ್ನೊಳಗೆ ನಿನ್ನಿರುವು ಕಾಣಲಾರದೆ ನಾನು|
ಬರಿ ಭ್ರಮೆಯಲಿ ಕಾಲ ಕಳೆದ ನಾನು|
ಎಲ್ಲರೊಳು ನೆಲಸಿರುವ ನಿನ್ನರಿವ ಮರೆತು
ತಲ್ಲಣಿಸಿರುವ ಜನರ ಪೊರೆದವನು ನೀನು||
ಎಲ್ಲಿ ನೋಡಲಿ ನಿನ್ನ, ಹೇಗೆ ಕಾಣಲಿ ನಿನ್ನ|
ನಿನ್ನಿರುವ ಹುಡುಕಿ ನಾ ಬಲು ಸೋತೆನು||
ಸ್ನೇಹಿತರೇ, ರಾಗ ಸಂಯೋಜನೆಯೊಂದಿಗೆ ಬರೆದ ಕವನಗಳನ್ನು ಹಾಡಿದಾಗ ಕೇಳಲು ಬಲು ಹಿತಕರವಾಗಿರುತ್ತದೆ. ಈ ಕವನವನ್ನು ನಾನು ಬರೆದು ರಾಗ ಸಂಯೋಜನೆ ಮಾಡಿದ ನಂತರ ಗಾಯಕಿಯೊಬ್ಬರು ಹಾಡಿದ್ದಾರೆ. ಅದನ್ನು ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿರುವೆ. ಸಂಪದದ ನಿಯಮದಂತೆ ಇಲ್ಲಿ ಅದರ ಕೊಂಡಿ ಕೊಡುವುದು ತಪ್ಪಾಗಬಹುದು. ಆದರೆ ಸಂಪದಿಗರಿಗೆ ನಾನು ಈ ಹಾಡನ್ನು ಕೇಳಿಸಿ ಅವರಿಂದ ತಪ್ಪು-ಒಪ್ಪುಗಳ ಅಭಿಪ್ರಾಯಗಳನ್ನು ಪಡೆದರೆ ಹಾಡನ್ನು ಇನ್ನೂ ಚೆನ್ನಾಗಿ ಬರೆಯಲು/ಹಾಡಲು ಅನುಕೂಲವಾಗುತ್ತದೆ. ಆ ದೃಷ್ಟಿಯಿಂದ ಕಾಮೆಂಟ್ ಕಾಲಮ್ ನಲ್ಲಿ ಕೊಂಡಿ ನೀಡಿರುವೆ. ಸಂಪದ ವ್ಯವಸ್ಥಾಪಕರ ಅನುಮತಿ ಕೋರುವೆ.
Comments
ಉ: ಎಲ್ಲಿ ನೋಡಲಿ ನಿನ್ನ
In reply to ಉ: ಎಲ್ಲಿ ನೋಡಲಿ ನಿನ್ನ by hariharapurasridhar
ಉ: ಎಲ್ಲಿ ನೋಡಲಿ ನಿನ್ನ
ಉ: ಎಲ್ಲಿ ನೋಡಲಿ ನಿನ್ನ
In reply to ಉ: ಎಲ್ಲಿ ನೋಡಲಿ ನಿನ್ನ by sathishnasa
ಉ: ಎಲ್ಲಿ ನೋಡಲಿ ನಿನ್ನ
ಉ: ಎಲ್ಲಿ ನೋಡಲಿ ನಿನ್ನ
In reply to ಉ: ಎಲ್ಲಿ ನೋಡಲಿ ನಿನ್ನ by makara
ಉ: ಎಲ್ಲಿ ನೋಡಲಿ ನಿನ್ನ