ಓಹೋ ಅವ್ರ್ ಬಿಟ್ಟಾರಾ ; ನಯಾಗರ ದಾಟಿ, ಸಾಧ್ನೆ ಮಾಡೇ ಬಿಟ್ರು !

ಓಹೋ ಅವ್ರ್ ಬಿಟ್ಟಾರಾ ; ನಯಾಗರ ದಾಟಿ, ಸಾಧ್ನೆ ಮಾಡೇ ಬಿಟ್ರು !

ಅಮೆರಿಕದ ಹುಚ್ಚು ಸಾಹಸಿ  (Crazy) ನಿಕ್‌ ವಾಲೆಂಡ, ಅಮೆರಿಕ ಮತ್ತು ಕೆನಡಾವನ್ನು ಪ್ರತ್ಯೇಕಿಸುವ ಭೋರ್ಗರೆಯುವ ನಯಾಗರ ಜಲಪಾತದುದ್ದಕ್ಕೂ ಕಟ್ಟಲಾದ ಬಿಗಿಹಗ್ಗದ ಮೇಲೆ ನಡೆಯುವ ಮೂಲಕ ಭಾರೀ ಸಾಹಸವೊಂದನ್ನು ವಿಶ್ವದ ಸಾಹಸಿಗಳಿಗೆ ತೋರಿಸಿಕೊಟ್ಟಿ ದ್ಡಾರೆ. ಈ ಮೂಲಕ ವಾಲೆಂಡ, ನೂರುವರ್ಷಗಳಲ್ಲಿ  ಈ ವಿಕ್ರಮವನ್ನು ಮಾಡಿದ ವಿಶ್ವದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾರೆ.


೩೩ ವರ್ಷ ಹರೆಯದ ವಾಲೆಂಡರವರು,ಬಿಗಿ-ತಂತಿಮೇಲೆ ನಡೆಯುವ ವಿಶೇಷ ಕಲಾವಿದರಾಗಿದ್ದಾರೆ    ಅವರು ಎಲ್ಲ ಎಚ್ಚರಿಕೆಗಳ ಹೊರತಾಗಿಯೂ ನಯಾಗರ ಜಲಪಾತದುದ್ದಕ್ಕೂ ಕಟ್ಟಲಾದ  ೧,೮೦೦ ಅಡಿಗಳಷ್ಟು ಉದ್ದದ ೨ ಅಂಗುಲ ವ್ಯಾಸದ ಬಿಗಿ ಹಗ್ಗದ ಮೇಲೆ ನಡೆದು, ೨೫ ನಿಮಿಷಗಳಿಗಿಂತ ಸ್ವಲ್ಪ ಹೆಚ್ಚು ವೇಳೆಯಲ್ಲಿ  ಈ ದೂರವನ್ನು ಕ್ರಮಿಸಿ, ಹೊಸ ವಿಕ್ರಮ ಸಾಹಸವನ್ನು ಮೆರೆದರು. 

ಗಾಳಿಯ ಅಬ್ಬರ ಹಾಗೂ ಭೋರ್ಗರೆಯುವ ಜಲಪಾತದ ನೀರಿನ ರಭಸದ ನಡುವೆ ಈ ಸಾಹಸ ಅಸಾಧ್ಯ ಎಂದು ಆತನಿಗೆ ಎಚ್ಚರಿಕೆ ನೀಡಲಾಗಿತ್ತಲ್ಲದೆ, ಇಂತಹ ಹುಚ್ಚು ಸಾಹಸಕ್ಕೆ ಮುಂದಾದದ್ದೇ ಆದಲ್ಲಿ ಆತನ ಜೀವಕ್ಕೇ ಅಪಾಯವಿದೆ ಎಂದು ಹೇಳಲಾಗಿತ್ತು. ಆದರೆ ಇದ್ಯಾವುದನ್ನೂ ಲೆಕ್ಕಿಸದ ವಾಲೆಂಡ, ದಿಟ್ಟತನ ಪ್ರದರ್ಶಿಸಿ, ಯಶಸ್ವಿಯಾಗಿ ಮಂಜು ಕವಿದಿರುವ ಜಲಪಾತದುದ್ದಕ್ಕೂ ಕಟ್ಟಲಾದ ಹಗ್ಗದ ಮೇಲೆ ನಡೆಯುವ ಮೂಲಕ  ವಿಶ್ವ ದಾಖಲೆ ಮಾಡಿದ್ದಾರೆ.

ವಾಲೆಂಡನ ಸಾಹಸವನ್ನು ವೀಕ್ಷಿಸಲು ಜಲಪಾತದ ಇಕ್ಕೆಲಗಳಲ್ಲಿಯೂ ಅಮೆರಿಕ ಮತ್ತು ಕೆನಡಾದ ಸಹಸ್ರಾರು ಸಂಖ್ಯೆಯ ಜನರು ಜಮಾಯಿಸಿದ್ದರು. ಉತ್ತರ ಅಮೆರಿಕದ ಈ ಜಲಪಾತದುದ್ದಕ್ಕೂ ೧೯೬  ಅಡಿಗಳಷ್ಟು ಎತ್ತರದಲ್ಲಿ ಕಟ್ಟಲಾದ ಹಗ್ಗದ ಮೇಲೆ‌ ನಡೆಯುವ ಮೂಲಕ ವಾಲೆಂಡ, ಸೇರಿದ್ದ ಜನಸಾಗರ ವನ್ನು ನಿಬ್ಬೆರಗಾಗುವಂತೆ ಮಾಡಿದ. ಅಮೆರಿಕನ್‌ ತುದಿಯಿಂದ ನಡಿಗೆ ಆರಂಭಿಸಿದ ವಾಲೆಂಡ ಕೆನಡಾ ತುದಿಯಲ್ಲಿ ನಡಿಗೆಯನ್ನು ಅಂತ್ಯಗೊಳಿಸಿದ. ಈ ಜಲಪಾತವನ್ನು ದಾಟಿ ಕೆನಡಾ ಕಡೆ ಹೋಗಲು ಪಾಸ್ ಪೋರ್ಟ್ ಅಗತ್ಯವಿತ್ತು. ವಾಲೆಂಡ ಅವರಿಗೆ ವಿಶೇಷ ಅನುಮತಿಯನ್ನು ನೀಡಲಾಗಿತ್ತು.

ವಿಕ್ರಮ ಸಾಧಿಸುತ್ತಿರುವಂತೆಯೇ ವಾಲೆಂಡರವರಗೆ ತಮ್ಮ ಪಾಸ್ ಪೋರ್ಟ್ ನ್ನು ಅಧಿಕಾರಿಗಳಿಗೆ ಒಪ್ಪಿಸಿ ಅವರ ಪರವಾನಗಿ ಪಡೆಯಬೇಕಾಯಿತು. ನಿಕ್  ತಕ್ಷಣ ತನ್ನ ಅಜ್ಜಿಗೆ ದೂರವಾಣಿ ಕರೆ ಮಾಡಿ, ತನ್ನ ಸಾಧನೆಯನ್ನು ವಿವರಿಸಿದರು.. 'ತಮಗೆ ಹಗ್ಗದ ಮೇಲೆ ನಡೆಯುವಾಗ ಮೋಡದಲ್ಲಿ ನಡೆದಾಡಿದ ಅನುಭವವಾಯಿತು. ಅಸಾಧ್ಯವಾದುದು ಯಾವುದೂ ಇಲ್ಲ. ಎಲ್ಲದಕ್ಕೂ ನೀವು ದೃಢ ಮನಸ್ಸು ಮಾಡಬೇಕಷ್ಟೇ 'ಎಂದು ವಾಲೆಂಡ, ಸಾಹಸದ ಬಳಿಕ ಸುದ್ದಿಗಾರರೊಂದಿಗೆ ತನ್ನ ಅನುಭವವನ್ನು ಹಂಚಿಕೊಂಡರು. 

ವೈರ್ ಕೇಬಲ್  ಮೇಲೆ ನಡೆಯುವ ಕಲೆಯನ್ನೇ ಹವ್ಯಾಸವನ್ನಾಗಿಸಿಕೊಂಡ ಕುಟುಂಬದಲ್ಲಿ ಜನಿಸಿರುವ ವಾಲೆಂಡ, ತಮ್ಮ ಬಾಲ್ಯದಿಂದಲೂ ಈ ಕಲೆಯತ್ತ ಹೆಚ್ಚು ಆಸಕ್ತನಾಗಿದ್ದರು. ಈ ಹಿಂದೆ ನಯಾಗರ ಜಲಪಾತದುದ್ದಕ್ಕೂ ಕಟ್ಟಲಾದ ಹಗ್ಗದ ಮೇಲೆ ನಡೆಯುವ ಪ್ರಯತ್ನಗಳು ನಡೆದಿತ್ತವಾದರೂ ಅವೆಲ್ಲವೂ ವಿಫ‌ಲಗೊಂಡಿದ್ದವು. ನಿಕ್ ಮನೆಯಿಂದಲೇ ಈ ಸಾಹಸ ಕಾರ್ಯ ಶುರುವಾಗಿದ್ದು, ಅವರ ಪರಿವಾರದ ಸದಸ್ಯರಿಬ್ಬರು ಜೀವ ಬಿಟ್ಟಿದ್ದರು.

೧೨೩ ಕಿ.ಮೀ.ದೂರದ  ನಯಾಗರ ವಿಶ್ವ ವಿಖ್ಯಾತ ಜಲಪಾತಕ್ಕೆ ಈ ಮಾನ್ಯತೆ ಬಂದಮೇಲೆ ಅದೆಷ್ಟು ಜನಸಾಗರ  ಇಲ್ಲಿಗೆ ಭೇಟಿಕೊಡುವುದನ್ನು ಊಹಿಸುವುದು ಕಷ್ಟ ! ಟೊರಂಟೊನಗರದಲ್ಲಿ ವಾಸ್ತವ್ಯ ಹೂಡಿರುವ ನಾವು ನಾಳೆ ರವಿವಾರ (೧೭-೦೬-೨೦೧೨) ಅಲ್ಲಿಗೆ ಹೋಗಲಿದ್ದೇವೆ ! ಹೋದವಾರ  ಕಾರಿನಲ್ಲಿ ಅಲ್ಲಿಗೆ ಹೊರಟೆವು. ಆದರೆ ದಾರಿಯಲ್ಲಿ ಸೈಕಲ್ ಸವಾರರ  ಪ್ರತಿಯೋಗಿತೆ ಇದ್ದದ್ದರಿಂದ  ಅತಿಯಾದ  ಟ್ರಾಫಿಕ್ ನಿಂದಾಗಿ ಆದಿನದ ಕಾರ್ಯಕ್ರಮವನ್ನು ರದ್ದುಮಾಡಿದೆವು !

ಸೌಜನ್ಯತೆ : CNN ಟೆಲಿವಿಶನ್ :

http://www.cnn.com/video/?/video/us/2012/06/16/vo-ny-wellenda-niagara-walk.ctv#/video/us/2012/06/16/vo-ny-wellenda-niagara-walk.ctv

-ವೆಂಕಟೇಶ್

-ಟೊರಂಟೋ,

-ಕೆನಡಾ

Rating
No votes yet