ಚುಟುಕುಗಳು ( ಭಾಗ 1 )
ಕವನ
ಕಂಡದ್ದು ಭೂಗೋಳ
ಕೇಳಿದ್ದು ಇತಿಹಾಸ
ಕನಸಿದ್ದು ಕಾವ್ಯ
ಗೀಚಿದ್ದು ಗೀತೆ
ಹಾಡಿದ್ದು ಹಾಡು ಈ
ಎಲ್ಲವುಗಳ ಸಮ್ಮಿಲನ
ಈ ಜೀವನ
***
ಸ್ವಾತಂತ್ರ ವೆಂದರೇನು ?
ಅನಂತ ದಿಗಂತದಲಿ
ಸ್ವೇಚ್ಛೆಯಲಿ
ಹಾರುವ ಗರುಡ
ಮಹಾ ಸಾಗರದಲಿ
ಈಜುವ ತಿಮಿಂಗಲ
ದಟ್ಚ ಕಾನನದಿ
ಅಬ್ಬರಿಪ ವನರಾಜ
ವಿಶಾಲ ಗಗನದಿ ಸಂಚರಿಪ
ಸೂರ್ಯ ಚಂದ್ರರು ಮಾತ್ರ
ಉತ್ತರಿಸಬಲ್ಲರು.
***
ನೆಲವನ್ನು ಪ್ರೀತಿಸುವವ
ಎಲ್ಲವನು ಪ್ರೀತಿಸುತ್ತಾನೆಂದು
ತಿಳಿಯ ಬೇಕಿಲ್ಲ !
ಈಗಿನ ವ್ಯಾಖ್ಯೆ ಬದಲಾಗಿದೆ
ನೆಲವೆಂದರೆ
ಲಕ್ಷ ಕೋಟಿಗಳಿಗೆ
ಹರಾಜಾಗುವ ಒಂದು ವಸ್ತು
***
Comments
ಉ: 'ಚುಟುಕುಗಳು'
In reply to ಉ: 'ಚುಟುಕುಗಳು' by swara kamath
ಉ: 'ಚುಟುಕುಗಳು'
ಉ: 'ಚುಟುಕುಗಳು'
In reply to ಉ: 'ಚುಟುಕುಗಳು' by partha1059
ಉ: 'ಚುಟುಕುಗಳು'
ಉ: 'ಚುಟುಕುಗಳು'
In reply to ಉ: 'ಚುಟುಕುಗಳು' by venkatb83
ಉ: 'ಚುಟುಕುಗಳು'
ಉ: 'ಚುಟುಕುಗಳು'
In reply to ಉ: 'ಚುಟುಕುಗಳು' by spsshivaprasad
ಉ: 'ಚುಟುಕುಗಳು'