ಪ್ರೀತಿ ಪ್ರೀತಿಸಬೇಕು ಭಾವನೆ ಪ್ರಕಟಿಸಬೇಕು

ಪ್ರೀತಿ ಪ್ರೀತಿಸಬೇಕು ಭಾವನೆ ಪ್ರಕಟಿಸಬೇಕು

ನಾನೊಬ್ಬ ಲೇಖಕನಾಗುತಿದ್ದರೆ ಎಷ್ಟು ಚೆನ್ನಾಗಿತ್ತು, ಬರೆಯಲು

 ಮನಸಲ್ಲಿ ಅದೆಷ್ಟು ಭಾವನೆಗಳು, ಅದೆಷ್ಟು ವಿಷಯಗಳು. ನನ್ನ

ಕರ್ಮ ಇಷ್ಟೆಲ್ಲಾ ಇದ್ದು ಅದನ್ನು ಒಂದು ವಾಕ್ಯ ಕೂಡಾ

ಮಾಡಲಾಗುವುದಿಲ್ಲ. ಅದೆಷ್ಟು ಭಾರಿ ಬರೆದೆ ಅಳಿಸಿ ಹಾಕಿದೆ,

ಮರೆತು ಹೋದೆ. ಅದೆಷ್ಟು ಕನಸುಗಳು ಅದನ್ನೆಲ್ಲಾ ಬರೆದರೆ

ಇನ್ನೆಷ್ಟಾಗಬಹುದಿತ್ತು. ಬರೆಯಲು ಮನಸಿದೆ ಆದರೆ ತಲೆ ತುಂಬಾ

ಸಿಮೆಂಟ್, ಸ್ಟೀಲ್,  ಕಾಂಕ್ರಿಟ್  ಮಾತ್ರ ತುಂಬಿದೆ.

 

    ಗೆಳೆಯರಲ್ಲಿ ಇದರ ಬಗ್ಗೆ ಚರ್ಚೆ ಮಾಡಿದೆ ಕೊನೆಗೂ ನನ್ನ ಬಗ್ಗೆ

 

ಅಧ್ಯಯನ ಮಾಡಿ ಅವರು ಒಂದು ರಿಪೋರ್ಟ್ ಕೊಟ್ಟುಬಿಟ್ಟರು.

 

ನಿನಗೆ ಈ ಜನ್ಮ ಬರೆಯಲು ಸಾಧ್ಯವಾಗದು ಎಂದು

 

ಹೇಳಿಬಿಡುವುದೇ.. ; ಕಾರಣ ಕೇಳಿದಕ್ಕೆ ಉತ್ತರ ಸಿಕ್ತು ಬರೆಯಲು

 

ಭಾವನೆ ಇದ್ದಾರೆ ಸಾಲದು ಜೀವನದಲ್ಲಿ ಒಮ್ಮೆಯಾದರು

 

ಪ್ರೇಮಿಸಿರಬೇಕು, ಪ್ರೇಮಿ  ಬಗ್ಗೆಗಿನ ನಿನ್ನ

 

ಭಾವನೆಗಳನ್ನು ಪ್ರಕಟಮಾಡಿರುತಿದ್ದರ ನಿನಗೆ ಬರೆಯಲು

 

ಸುಲಭವಾಗಬಹುದಿತ್ತು.

 

ಅರೇ..ಅದು ಹೌದಲ್ವೆ..??,

 

     ನಾನೇಕೆ ಯಾರನ್ನು ಪ್ರೇಮಿಸಿಲ್ಲ, ಅಲ್ಲಾ ಹಾಗಿದ್ದರು ಯಾಕೆ

 

ಪ್ರಕಟಿಸಿಲ್ಲಾ, ನನ್ನ ಭಾವನೆಗಳನ್ನು ಯಾಕೆ ನನ್ನಲ್ಲೇ

 

ಇರಿಸಿದೆ..,  ನನ್ನ ಮೇಲೆ ಪ್ರೀತಿ ಇದ್ದರೆ ಅವಳಿಗೂ ಹೇಳಬಹುತಿತ್ತು

 

ಅಲ್ವೇ, ಅವಳಿಗೆ ನನ್ನನ್ನು ಚೆನ್ನಾಗಿ ಗೊತ್ತು, ನಾನೊಬ್ಬ ಹೆಡ್ಡ ಯಾರ

 

ಮುಂದೆಯೂ ಏನನ್ನೂ  ಹೇಳಲ್ಲ  ಕೇಳಲ್ಲ..  ಯಾವಾಗಲು ಮುಖ

 

ಉಬ್ಬಿಸಿ ನಡೆಯುವವ ಅಂತ..  ಸರಿ ಅದು ಬಿಡು ಈಗ ಅವಳಿಗೂ

 

ಮದುವೆಯಾಗಿ ಮಕ್ಕಳಾಯಿತು, ನನಗೂ  ಮದುವೆಯಾಯಿತು.

 

  ಹಾಗಿದ್ದರೆ ನಾನು ನನ್ನ ಹೆಂಡತಿ ಯನ್ನು ಪ್ರೀತಿಸುವುದಿಲ್ಲವೇ ..??

 

ಅರೇ ನನಗೇನು ಗೊತ್ತು ನಾನು ಅವಳನ್ನು ಪ್ರೀತಿಸುತ್ತೇನಾ ಎಂದು,

 

ಅದಕ್ಕೆ ಅವಳಲ್ಲೇ ಕೇಳಿದೆ..

 

"ನಾನು ನಿನನ್ನು ಪ್ರೀತಿಸ್ತೆನಾ??" 

 

"ಈ ಪ್ರಪಂಚದಲ್ಲಿ  ನೀವು ಮೊದಲ ಗಂಡ ಹೀಗೆ ಕೇಳೋದು"

 

"ಯಾಕೆ ??"

 

"---- !!!"  ಉಫ್ಫ್.. ಸಿಟ್ಟು ಮಾಡಿಬಿಟ್ಟಳು, ಸ್ವಲ್ಪ ಸಮಯದ

 

ಮೇಲೆ

 

"ನೀವು ನನ್ನನ್ನು ಪ್ರೀತಿಸ್ತೀರಿ ಆದರೆ ಪ್ರೇಮಿಸಲು ಬರೋಲ್ಲ "

 

"ಹೇಗೆ..? ಅರ್ಥ ಆಗುವ ಭಾಷೆಯಲ್ಲಿ ಹೇಳಿ ಮುಗಿಸು"

 

"ನೀವು ಬಾರೇ ಎಸ್ or ನೋ "

 

"ಅಂದ್ರೆ "

 

" ನಾನು ಏನಾದರು ಕೇಳಿದರೆ ಕೂಡಲೇ ತೆಗೆದು ಕೊಡುತೀರಿ ಏನು

 

ಹೇಳಲ್ಲ "

 

"ಹೌದು"

 

"ಇಲ್ಲಾ ಅಂದ್ರೆ ಸೀದಾ ಹೇಳಿಬೇಡ್ತೀರಿ ಇಲ್ಲಾ ಎಂದು"  

 

"ಹೌದಾ ಮತ್ತೇನು ಮಾಡ್ಬೇಕು"

 

"ನೀವು ಕೊಡುವುದಾದರೆ ಸ್ವಲ್ಪ ಇಲ್ಲ ಅಂಥ ಹೇಳಿ ನಾಟಕ ಮಾಡಿ

 

ನನ್ನನ್ನು surprise ಮಾಡಿ ಕೊಡಿ..

 

        ಇಲ್ಲಾ  ಅಂದ್ರೆ ನನ್ನನ್ನು ಚಿನ್ನಾ, ಮುನ್ನಾ ಈಗ ನನ್ನಿಂದ

 

ಆಗೋಲ್ಲ ಕಂದಾ, ಇನ್ನೊಮ್ಮೆ ಕೊಡ್ತೀನೆ ಕಾಣೇ .., ಅಂತ

 

        ಹೇಳಿ ಬಿಡಿ ನಾನೂ ಒಪ್ಕೋತೀನಿ..., ಹೀಗೆ ಮಾಡುವುದನ್ನು

 

ಪ್ರೀತಿಸುವುದು ಅಂತಾರೆ ಜಗಳನೂ ತಪ್ಪುತ್ತೇ..  "

 

ನೋಡಿ ಹೇಗಿದೆ ಹುಡುಗಿ... "ಅಂದ್ರೆ ನಾನು ನಾಟಕ

 

ಮಾಡ್ಬೇಕು..??"

 

"ಅದಕ್ಕೆ ಹೇಳಿದ್ದು ನಿಮಗೆ ಪ್ರೀತಿಸಲಿಕ್ಕೆ ಗೊತ್ತಿಲ್ಲ ಎಂದು"

 

ನಾನು ಆಲೋಚನೆ  ಮಾಡಿದೆ  ತೀರ್ಮಾನ ಮಾಡಿ ಬಿಟ್ಟೆ , ಹೌದು

 

ನನಗೆ ನಾಟಕ ಮಾಡ್ಬೇಕು.., ಕ್ಷಮಿಸಿ ಪ್ರೀತಿಸಬೇಕು, ಭಾವನೆ

 

ಪ್ರಕಟಿಸಬೇಕು.

 

 

ಅದು ಬರೆಯಲಿಕ್ಕಾಗಿ...

 

                           .....ಅಲ್ಲಾ  ಜೀವಿಸಲಿಕ್ಕಾಗಿ.., ಜೀವನವೇ

 

 (ಹೆಂಡತಿಯೇ) ದೊಡ್ಡದು ಸ್ವಾಮೀ ..

 

 

 

http://ittigecement.blogspot.com/ ಓದಿದ ಮೂಡ್ ನಲ್ಲಿ ಬರೆದೆ, ತಪ್ಪು ಗಳು ನೂರಾರು ಇದೆ ದಯಮಾಡಿ ತಿದ್ದಿ ತೀಡಿ

Rating
No votes yet

Comments