ಗಾಳಿಗೆ ತಲೆಯಿಲ್ಲ !

ಗಾಳಿಗೆ ತಲೆಯಿಲ್ಲ !

 


ಇದ್ರೇನು ಗಾಳಿ ಮಳೆಯ ಬಿರುಸು


ಇತ್ತಲ್ಲಿ ಮಣ್ ವಾಸನೆಯ ಸೊಗಸು


 


ಗಾಳಿಯ ಬಿರುಸಿಗೆ ವಾಲಿ ಮರ ಬಾಗಿತ್ತು


ಸುವಾಸನೆಗೆ ಸೋತು ಮಣ್ಣಿಗೆ ಮುತ್ತಿಕ್ಕಿತು


 


ಬಿದ್ದ ಮಳೆಯಿಂದೇಳುವುದು ಸುವಾಸನೆ


ಗಾಳಿ ಹೊತ್ತೊಯ್ವುದು ವಾಸನೆಯ ವೇದನೆ


 


ಮನುಜನೂ ಪ್ರಕೃತಿಯ ಕೂಸೇ ನಿಜ


ಅವನಂತೂ ಅನುಭವಿಸಲಾರ ಈ ಮಜ


 


ಮಳೆಯೋ ಹಾಳು ಮಳೆ, ಗಾಳಿಯೋ ದರಿದ್ರ ಗಾಳಿ


ಇನ್ನು ಮಣ್ಣೋ ಕೆಟ್ಟ ಧೂಳು, ಕೊರಗುವುದೇ ಚಾಳಿ


 


ಮಣ್ಣಿಂದ ದೂರಾದ ವಾಸನೆಯ ವೇದನೆಗೆ ಬೆಲೆಯಿಲ್ಲ


ಮಾನವನ ಮೂಗಿಗೆ ಮುಟ್ಟಿಸಿದ ಗಾಳಿಗೆ ತಲೆಯಿಲ್ಲ !


 


 


 Photo: Tornado in our City on June 25th 2012. Picture taken by a friend of mine

Comments