ಜೀವನವೊಂದು ಜೂಜು

ಜೀವನವೊಂದು ಜೂಜು

ಕವನ

ಜೀವನವೊಂದು ಜೂಜು

ಒಳಗೆ ತೋರಿಸದ ಗಾಜು

 

ಒಂದೆರಡು ಮಾತ್ರ ಆರಿಸಿಕೋ ಹಣ್ಣು.

ಮರ ಮೇಲೆ ಬಿದ್ದು ಮುಕ್ಕಬೇಕಾಗುವುದು ಮಣ್ಣು.

ಆಟ     ನಡೆಯುವಾಗಲೇ ಎದ್ದುಬಿಡುವುದು ಮೇಲು.

ನಮ್ಮೊಡವೆ ನಮ್ಮ ಹತ್ತಿರವೇ ಇರುವುದು.

 

ಎಸೆ ಬೀಡಿ ಕಟ್ಟು ಜೇಬಿಂದ ತೆಗೆದು       

ಮತ್ತೆ ಮತ್ತೆ ಸೇದಬೇಕೆನಿಸುವುದು.

 

ಸರ ಕಿತ್ತು ಹೋಯಿತೆಂದು ಅಳದಿರು.

ಮಣಿಗಳನೊಂದೊಂದೆ ಆರಿಸು.

 

ಈಗಿದ್ದ ಮುಗಿಲು , ಕಾಮನ ಬಿಲ್ಲು ಆಗಲೇ ಮಾಯ..!

ಲಯ ಬಿಡದಿರಲಿ ಆಲಯ.

 

ಮತ್ತೆ ಬಂದ ಸೂರ್ಯ 

ಬಾ..ಅದೇ ಪಾತ್ರೆ ತಿಕ್ಕು.

ನಿನ್ನೆ ತಿಂದಿದ್ದೆಲ್ಲ ಈಗ ಈಚೆ ಕಕ್ಕು.

 

ಹಾರದ ಆಸೆ ಇಟ್ಟುಕೊಂಡು ಹೂ ಬಿಡಿಸುತಿರುವೆಯಾ...?

ಸಾವಿನ  ಆಸೆ  ಇಟ್ಟುಕೊಂಡು ಬದುಕು.

----------------------------------------

 

ಸಿ ವಿ ಶೇಷಾದ್ರಿ