ಸವಿ ಸಮಯ

ಸವಿ ಸಮಯ

            ಅಂತು ಇಂತು ಈ ವರ್ಷದ ಮೊದಲ ಬರಹ ಪ್ರಕಟಿಸುವ ಸಮಯ ಬಂತು. ಇಷ್ಟು ದಿನಗಳು ಕಛೇರಿಯ ಕೆಲಸದಲ್ಲಿ ಪೂರ್ತಿ ಸಮಯ ಕಳೆದು ಹೋಗ್ತಿತ್ತು.  ಹೊಸ ಪ್ರಾಜೆಕ್ಟ್  ನ  ಪ್ರಾರಂಭ  ಮಾಡೋದು ತುಂಬಾ ಕಷ್ಟ ಎಲ್ಲದರ ಬಗ್ಗೆ ಸಂಶೋದನೆ ಮಾಡಿ,   ಉದಾಹರಣೆಯೊಂದಿಗೆ  ಉಪಯೋಗಿಸೋದು, ವಿಶ್ಲೇಷಸಿ ನಿರ್ಣಯ ಮಾಡೋಕ್ಕೆ ೩ ತಿಂಗಳು ತಕೊಂಡೆ. ಕೊನೆಗೆ ASP.NET MVC ಬಳಸೋದು ಅಂತ ತೀರ್ಮಾನ ಮಾಡಿ, ಅದರಲ್ಲಿ ತರಬೇತಿ ತಕೊಂಡು, ಮಾಡಿದಿವಿ. ೬-೭ API ರೆಡಿಯಾಗಿದೆ. ಈ Agile, Sprint,Scrum ಅಲ್ಲಿ; ನನಗೆ ಅಂತ ಸಮಯ ಸಿಗೋದು ಸ್ವಲ್ಪ ಕಷ್ಟ ಅನ್ಸುತ್ತೆ. ಇನೇನು ೧ ವರ್ಷ ಆಗ್ತಾ ಇದೆ ಹೊಸ ಸಂಸ್ಥೆಗೆ ಸೇರಿ ಆದರೆ ಇನ್ನು ಹೊಂದಾಣಿಕೆ ನಡೀತಾ ಇದೆ.
 
            ಹಾಂ ಈಗ ವಿಷಯಕ್ಕೆ ಬರ್ತೀನಿ. ಬಹಳ ದಿನಗಳ ನಂತರ ಇವತ್ತು  ೬ ಘಂಟೆಗೆ ಕಛೇರಿ ಬಿಟ್ಟೆ ಆದರೆ ಟ್ರಾಫಿಕ್  ಜಾಮ್ ಅಲ್ಲಿ  ಕೆಟ್ಟೆ. ORR  ಮೇಲು ಸೇತುವೆಗಳು  ಯಾವಾಗ ಆಗುತ್ತೋ ದೇವರೇ. ಕೊನೆಗೆ ಉಡುಪಿ ಗಾರ್ಡನ್ ತಲ್ಪಷ್ಟ್ರಲ್ಲಿ ೭.೩೦. ಸರಿ ಎಗೋ ತಲಪಿದೆ, ಇನ್ನು ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡೋಣ ಅಂತ ಹಣ್ಣುಗಳ ಖರೀದಿಗೆ  ಶುರು  ಮಾಡಿದೆ. ಕೊಂಡಿದ್ದು ೨ ಸೇಬು, ೨ ಮಾವು, ೨ ಬಾಳೆಹಣ್ಣು, ೨ ಸವತೆ ಕಾಯಿ, ೧ ಪರಂಗಿ. ರಾತ್ರಿ ಊಟ ಮಾಡಿ ೧ ಸವತೆ, ೧ ಮಾವು ಖಾಲಿ ಮಾಡಿದೆ. ಇನ್ನು ಬಹಳ ಸಮಯ ಇದೆ ಪವಡಿಸೋಕ್ಕೆ ಅಂತ ಪುಸ್ತಕ ಹಿಡಿದೇ, ಆಮೇಲೆ ಕನ್ನಡ ಕೊಟ್ಯಾದಿಪತಿ , ಮತ್ತೆ ಆಮೇಲೆ ಮತ್ತೆ ಪುಸ್ತಕ, ನಂತರ ಸಂಗೀತ ಕೇಳ್ತಾ ಕೇಳ್ತಾ ಹಾಡೋದು ಸ್ವಲ್ಪ ಹಾಗೆ ಹೆಜ್ಜೆ . ಬಹಳ ದಿನಗಳ ನಂತರ ಮನಸ್ಸು ನೆರಾಳ, ನಿಶ್ಚಿಂತೆ, ನಲಿವು. ಇನ್ನು ಈ ದಿನದಲ್ಲಿ ಬಾಕಿ ಮಾಡೋಕ್ಕೆ ಇರೋದು ಅಂದ್ರೆ ಅನಿಸಿದ್ನ ಗೀಚಿ ಸಂಪದಕ್ಕೆ ಸೇರಿಸಿದರೆ ಈ ದಿನ ಪರಿಪೂರ್ಣ . ಆಮೇಲೆ ಮಲಗಿ ಮತ್ತೆ ಇನೊಂದು ಭವ್ಯ ಬೆಳಗಿನ ಮುಂಜಾನೆ ಸ್ವಲ್ಪ ವ್ಯಾಯಾಮ ಆಮೇಲೆ ಕಛೇರಿ ಮತ್ತೆ ನನ್ನ API ಗಳ ಜೊತೆ .
 
ಸದ್ಯಕ್ಕೆ ಸಂತಸ ಸುರಿಸುತ್ತಿರುವ ಸ್ಟುಡಿಯೋ (VS2010) ಸಮಯದೊಂದಿಗೆ ಸಂಜೆಯಾ ಸವಿ ಸಮಯ ಸೇರಿದೆ.
Rating
No votes yet

Comments