ಭಾರತದ ಮೊದಲ ಮತಾಂತರಿ ಮುಸಲ್ಮಾನ ಮತ್ತು ಮೂರು ಲಕ್ಷ ಮಸೀದಿಗಳು!

Submitted by kahale basavaraju on Thu, 06/28/2012 - 15:35


ಶಾಂತಿ, ಪರಿಶುದ್ಧತೆ, ವಿಧೇಯತೆ ಈ ಎಲ್ಲಾ ಅರ್ಥಗಳಿಗೆ ಸಲ್ಲುವ ಪದ ಇಸ್ಲಾಂ. ಇಸ್ಲಾಂ ಧರ್ಮ ಜಗತ್ತಿನ ಎರಡನೇ ಅತಿ ದೊಡ್ಡ ಧರ್ಮವಾಗಿದೆ. ವಿಶ್ವದಾದ್ಯಂತ ಇದಕ್ಕಿರುವ ಅನುಯಾಯಿಗಳ ಸಂಖ್ಯೆ 1.5 ಬಿಲಿಯನ್. ಅಥರ್ಾತ್ ಜಗತ್ತಿನ ಒಟ್ಟು ಜನಸಂಖ್ಯೆಯ 21% ಪ್ರಮಾಣ. ವಿಶ್ವದ ಹಲವೆಡೆ ಇಸ್ಲಾಂ ಧಮರ್ಿಯರಿದ್ದಾರೆ. ಪಾಕಿಸ್ತಾನ ಅತಿ ಹೆಚ್ಚು ಮುಸ್ಲಿಂರನ್ನು ಹೊಂದಿರುವ ರಾಷ್ಟ್ರ. ಅದರ ನಂತರದ ಸ್ಥಾನ ಭಾರತದ್ದು. ಹೌದು ಭಾರತ ಜಗತ್ತಿನ ಬೇರ್ಯಾವ ಮುಸ್ಲಿಂ ರಾಷ್ಟ್ರ ಹೊಂದಿರದಷ್ಟು ಮುಸ್ಲಿಂರನ್ನು ತನ್ನ ಮಡಿಲಲ್ಲಿಟ್ಟುಕೊಂಡಿದೆ. ಭಾರತದ ಒಟ್ಟು ಜನಸಂಖ್ಯೆಯ 13.4% ಪ್ರಮಾಣದಲ್ಲಿ ಮುಸ್ಲಿಂ ಜನ್ರಿದ್ದಾರೆ.
 
ಮುಸ್ಲಿಂ ಧರ್ಮ ಮೊದಲು ಅಡಿಯಿಟ್ಟಿದ್ದು ಮಲಬಾರ್ ತೀರಕ್ಕೆ. ಭಾರತಕ್ಕೆ ಮುಸ್ಲಿಂ ಧರ್ಮವನ್ನು ತಂದವ್ರು ಅರಬ್ ವರ್ತಕ್ರು. ವ್ಯಾಪಾರಕ್ಕಾಗಿ ಬಂದ ಅರಬ್ ವರ್ತಕ್ರು ನಂತರದ ದಿನಗಳಲ್ಲಿ ಇಲ್ಲೇ ನೆಲೆಸಲಾರಂಭಿಸಿದ್ರು. ಅಷ್ಟೇ ಅಲ್ಲ ಇಲ್ಲೇ ಮದುವೆ ಮಾಡಿಕೊಳ್ಳುವ ಮೂಲಕ ಇಸ್ಲಾಂ ಧರ್ಮದ ವೃದ್ಧಿಗೆ ಕಾರಣರಾದ್ರು.
 
ನಂತರ ಬಂದ ಘೋರಿ, ಖಜ್ನಿಯರಿಂದಾಗಿ ಮುಸ್ಲಿಂ ಧರ್ಮ ಭಾರತದಲ್ಲಿ ಸದೃಢವಾಗಿ ನೆಲೆಯೂರಂಭಿಸ್ತು. ದೆಹಲಿಯ ಸುಲ್ತಾನರು, ಮೊಘಲ್ರಾದಿಯಾಗಿ ಹಲವಾರು ಮುಸ್ಲಿಂ ದೊರೆಗಳು ಭಾರತದ ಬಹು ಬಾಗಗಳನ್ನು ಆಳಿದ್ರು.
 
ಮುಸ್ಲಿಂರು ಭಾರತವನ್ನು ಭರ್ತಿ 500 ವರ್ಷಗಳ ಕಾಲ ಆಳಿದ್ದಾರೆ. ಈ ವೇಳೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಮುಸ್ಲಿಂ ಆಳ್ವಿಕೆಯ ಅವಧಿಯಲ್ಲಿ ಭಾರತಕ್ಕೆ ಸಿಕ್ಕ ಬಹುಮುಖ್ಯ ಕೊಡುಗೆ ಅಂದ್ರೆ ಕಲೆ ಮತ್ತು ವಾಸ್ತುಶಿಲ್ಪ. ಆ ಕಾಲದಲ್ಲಿ ನಿಮರ್ಾಣವಾದ ನಿಮರ್ಿತಿಗಳು ಇಂದಿಗೂ ಜಗತ್ತನ್ನು ನಿಬ್ಬೆರಗಾಗಿಸುತ್ತಿದೆ. ತಾಜ್ ಮಹಲ್ನಂತಹ ಗೋರಿಗಳು, ಗುಂಬಜ್ಗಳು, ಅರಮನೆಗಳು, ಮಸೀದಿಗಳು ಇಂದಿಗೂ ಮುಸ್ಲಿಂ ಅರಸರ ಕಾಲದ ಕಥೆಯನ್ನು ಹೇಳುತ್ತಿವೆ.
 
ಪ್ರತಿ ವರ್ಷ 30 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಅದ್ಭುತ ಶಕ್ತಿಯನ್ನು ಹೊಂದಿರುವ ತಾಜ್ಮಹಲ್ ಮುಸ್ಲಿಂ ಆಳ್ವಿಕೆಯ ಅತ್ಯಂತ ಶ್ರೇಷ್ಟ ಕೊಡುಗೆಯಾಗಿದೆ. ಇದರ ವಾಸ್ತುಶಿಲ್ಪ ಇವತ್ತಿಗೂ ಇಂಜನಿಯರುಗಳಿಗೂ ದೊಡ್ಡ ಸವಾಲು.. ಇಂತಹ ಅದೆಷ್ಟೋ ಸ್ಮಾರಕಗಳು ಬಾರತದ ವಿವಿಧ ಭಾಗಗಳಲ್ಲಿವೆ.
 
ನಾವೀಗ ಹೇಳಲು ಹೊರಟಿರುವ ವಿಷಯ ಭಾರತದ ಮಸೀದಿಗಳದ್ದು. ಜಗತ್ತಿನಲ್ಲೇ ಅತಿ ಹೆಚ್ಚು ಮಸೀದಿಗಳನ್ನು ಹೊಂದಿರುತ ರಾಷ್ಟ್ರ ಭಾರತ ಮಾತ್ರ. ಭಾರತದಲ್ಲಿರುವಷ್ಟು ಮಸೀದಿಗಳು ಬೇರಾವ ಮುಸ್ಲಿಂ ರಾಷ್ಟ್ರಗಳಲ್ಲೂ ಇಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇರುವ ಮಸೀದಿಗಳ ಸಂಖ್ಯೆ ಭರ್ತಿ 3,00,000.
 
ಭಾರತ ಅತಿ ಹೆಚ್ಚು ಮಸೀದಿಗಳು ಹೊಂದಿರುವ ದಾಖಲೆಯನ್ನು ಮಾತ್ರ ಹೊಂದಿಲ್ಲ. ಮಸೀದಿಗಳ ನಿರ್ಮಾಣ, ಗಾತ್ರಗಳಲ್ಲೂ ಒಂದಷ್ಟು ದಾಖಲೆಗಳನ್ನ ಹೊಂದಿದೆ. ಇಂತಹ ದಾಖಲೆಗಳ ಮಸೀದಿಗಳಿಗೆ ಭಾರತ ಮಡಿಲಾಗಿದೆ. ಬಾರತದಲ್ಲಿ ವಿಶ್ವದ ಎರಡನೇ ಅತಿ ಪುರಾತನ ಮಸೀದಿಯಿದೆ. ಅಷ್ಟೇ ಅಲ್ಲ ಏಷ್ಯಾದ ಅತಿ ದೊಡ್ಡ ಮಸೀದಿಯೂ ಇದೆ.
 
ಹೀಗೆ ಒಂದಿಲ್ಲೊಂದು ದಾಖಲೆಗಳನ್ನು ಹೊಂದಿರುವ ಮಸೀದಿಗಳು ಭಾರತದಲ್ಲಿವೆ. ಅಂದ್ಹಾಗೆ ಮೊಟ್ಟ ಮೊದಲ ಬಾರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಭಾರತೀಯ ಯಾರು ಗೊತ್ತಾ?
 
ಚೇರಮಾನ್ ಪೆರುಮಾಳ್ ಚೇರನಾಡು ಅಂತ ಕರೆಸಿಕೊಳ್ಳುತ್ತಿದ್ದ ಕೇರಳವನ್ನು ಆಳುತ್ತಿದ್ದ ಚೇರ ಮನೆತನದ ದೊರೆ. ವ್ಯಾಪಾರಕ್ಕಾಗಿ ಆಗಮಿಸುತ್ತಿದ್ದ ಅರಬ್ ವರ್ತಕರೊಂದಿಗೆ ದೊರೆ ಪೆರುಮಾಳ್ಗೆ ಉತ್ತಮ ಸಂಬಂಧವಿತ್ತು. ಆಕಾಶದಲ್ಲಿ ನಡೆದ ಒಂದು ವಿಚಿತ್ರ ವಿದ್ಯಮಾನವನ್ನು ಕಂಡು ಬೆರಗಾದ ಚೇರಮನ್ ದೊರೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ್ರು. ಅಲ್ದೇ ಭಾರತದಲ್ಲಿ ಮೊತ್ತ ಮೊದಲು ನಿರ್ಮಾಣಗೊಂಡಿದ್ದ ಮಸೀದಿಯ ಪುನರ್​ ನಿರ್ಮಾಣಕ್ಕೆ ಮುನ್ನುಡಿ ಬರೆದ್ರು.
 
ಚೇರಮಾನ್ ಪೆರುಮಾಳ್ ಜಮಾ ಮಸೀದಿ, ಇದು ಭಾರತದ ಮೊಟ್ಟ ಮೊದಲ ಮಸೀದಿ. 1600 ವರ್ಷಗಳಷ್ಟು ಹಳೆಯದಾದ ಈ ಮಸೀದಿ ಕೇರಳ ರಾಜ್ಯದ ಕೊಡಂಗಲ್ಲೂರ್ ತಾಲೂಕಿನ ಮೇತಲ ಗ್ರಾಮದಲ್ಲಿದೆ. ಕ್ರಿ.ಶ. 629ರಲ್ಲಿ ಈ ಮಸೀದಿ ಸ್ಥಾಪಿತವಾಯ್ತು. ಇದನ್ನು ದೊರೆ ಚೇರಮಾನ್ ಪೆರುಮಾಳ್ ಕಟ್ಟಿಸಿದ್ರು. ಅದಕ್ಕಿಂತ ರೋಚಕವಾದ ವಿಚಾರ ಇನ್ನೋಂದಿದೆ. ಈ ಮಸೀದಿ ಪೂರ್ವದಲ್ಲಿ ಒಂದು ಬೌದ್ಧ ಮಂದಿರವಾಗಿತ್ತಂತೆ. ಅಲ್ದೇ ಇಲ್ಲಿ ಒಂದು ಸಾವಿರ ವರ್ಷಗಳಿಂದಲ್ಲೂ ಉರಿಯುತ್ತಿರುವ ದೀಪವಿದೆ. ಇದನ್ನು ಕಟ್ಟಿಸಿದ ಚೇರಮಾನ್ ಪೆರುಮಾಳ್ ಇಸ್ಲಾಂಗೆ ಮತಾಂತರಗೊಂಡ ಮೊದಲ ಭಾರತೀಯ.
 
ಅಂದ್ಹಾಗೆ ಮೊಟ್ಟ ಮೊದಲ ಬಾರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಭಾರತೀಯ ದೊರೆಯಾದ ಚೇರಮಾನ್ ಪೆರುಮಾಳ್. ಈತ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ಯಾಕೆ ಎಂಬುದಕ್ಕೆ ಒಂದು ಕಥೆಯಿದೆ. ಒಂದು ರಾತ್ರಿ ಚೇರಮಾನ್ ಪೆರುಮಾಳ್ ಪತ್ನಿಯೊಂದಿಗೆ ಅರಮನೆಯ ತಾರಸಿಯ ಮೇಲೆ ಓಡಾಡುತ್ತಿದ್ದಾಗ ಆಕಾಶದಲ್ಲೊಂದು ವಿಚಿತ್ರ ವಿದ್ಯಮಾನವಾಯ್ತಂತೆ.
 
ಇದಕ್ಕಿದ್ದಂತೆ ಚಂದ್ರ ಎರಡು ಹೋಳಾದನಂತೆ. ಖುರಾನ್ ಪ್ರಕಾರ ಈ ವಿದ್ಯಮಾನ ಪ್ರವಾದಿಯ ಸಂದೇಶವಂತೆ. ಇದ್ರಿಂದ ಪ್ರೇರಿತನಾದ ದೊರೆ ಪೆರುಮಾಳ್, ಒಂದೊಂದು ಪ್ರಾಂತ್ಯವನ್ನು ಒಬ್ಬೊಬ್ಬ ಸೇನಾನಾಯಕನಿಗೆ ಕೊಟ್ಟು ಮೆಕ್ಕಾಗೆ ಹೋಗಿ ತಾಜುದ್ದಿನ್ ಆಗಿ ಇಸ್ಲಾಂಗೆ ಮತಾಂತರಗೊಂಡ್ರಂತೆ. ಹಾಗಾಗಿ ಭಾರತೀಯ ಮುಸ್ಲಿಂರ ಮೂಲ ಪುರುಷ ಚೇರಮಾನ್ ಪೆರುಮಾಳ್.
 
ಚೇರಮಾನ್ ಪೆರುಮಾಳ್ ಜಮಾ ಮಸೀದಿ ಬಿಟ್ರೆ ದಾಖಲಿಸಲೇ ಬೇಕಾದ ಇನ್ನೊಂದು ಮಸೀದಿ  ದೆಹಲಿಯ ಜಮಾ ಮಸೀದಿ. ಇದು ಕ್ರಿ.ಶ. 1656ರಲ್ಲಿ ನಿಮರ್ಾಣವಾಯ್ತು. ಇದರ ನಿಮಾತೃ ತಾಜ್ಮಹಲ್ ಕನಸುಗಾರ ಮೊಘಲ್ ಸಾಮ್ರಾಟ ಶಹಜಹಾನ್. ಇದು ಜಗತ್ತಿನ 9ನೇ ಅತಿ ದೊಡ್ಡ ಮಸೀದಿ.
 
ಮಸೀದಿಯ ನಿರ್ಮಾಣಕ್ಕೆ ಭರ್ತಿ ಆರು ಸಾವಿರ ಕಾರ್ಮಿಕರು ಆರು ವರ್ಷಗಳ ಕಾಲ ಶ್ರಮಿಸಿದ್ದಾರೆ. ಕ್ರಿ.ಶ. 1950 ರಿಂ 56ರ ಅವಧಿಯಲ್ಲಿ ಈ ಮಸೀದಿಯ ನಿರ್ಮಾಣಕ್ಕಾಗಿ ತಗುಲಿದ ವೆಚ್ಚ ಒಂದು ಲಕ್ಷ ರುಪಾಯಿ. ಮರಳುಗಲ್ಲು ಮತ್ತು ಅಮೃತಶಿಲೆಯನ್ನು ಮಸೀದಿಯ ನಿರ್ಮಾಣಕ್ಕಾಗಿ ಬಳಸಲಾಗಿದೆ. ಒಂದೇ ಸಲ 25,000 ಮಂದಿ ಪ್ರಾರ್ಥನೆ ಮಾಡಬಹುದಾದಷ್ಟು ವಿಸ್ತಾರವನ್ನು ಹೊಂದಿದೆ. ಮಸೀದಿ 260 ಕಂಬಗಳನ್ನು ಒಳಗೊಂಡಿದೆ. ಇಲ್ಲಿ ಜಿಂಕೆಯ ಚರ್ಮದ ಮೇಲೆ ಬರೆದ ಖುರಾನ್ ಪ್ರತಿಯಿದೆ.
 
ಸದ್ಯದಲ್ಲೇ ಜಮಾ ಮಸೀದಿಯನ್ನು ಮೀರಿಸುವಂತಹ ಮಸೀದಿ ಕೇರಳಾದ ಕ್ಯಾಲಿಕಟ್ನಲ್ಲಿ ರೆಡಿಯಾಗ್ತಿದೆ. 500 ಎಕರೆ ವಿಸ್ತೀರ್ಣದಲ್ಲಿ, 40 ಕೋಟಿ ರುಪಾಯಿ ವೆಚ್ಚದಲ್ಲಿ ಷಹರೇ ಮುಬಾರಕ್ ಮಸೀದಿ ಸಿದ್ಧವಾಗ್ತಿದೆ. ಇದಕ್ಕಿಂತ ವಿಶಿಷ್ಟ ಅನಿಸೋ ಮಸೀದಿ ಮುಷರ್ಿದಾಬಾದ್ನಲ್ಲಿದೆ. ಅದು ಒಂದೇ ರಾತ್ರಿಯಲ್ಲಿ ನಿರ್ಮಾಣವಾದ ಮಸೀದಿ. ಇದಕ್ಕಿಂತ ಅಚ್ಚರಿ ಅನಿಸೋದು 100 ವರ್ಷಗಳವರೆಗೆ ನಿರ್ಮಾಣವಾದ ಮಸೀದಿಯ ಕಥೆ.
 
ಬಂಗಾಳದ ಮುಷರ್ಿದಾಬಾದ್ನ ಕುಮಾರಪುರ್ ಬಳಿಯ ಈ ಫೌತಿ ಮಸೀದಿ ಒಂದೇ ಒಂದು ರಾತ್ರಿಯಲ್ಲಿ ಕಟ್ಟಲ್ಪಟ್ಟಿದೆ. ಬಂಗಾಳದ ನವಾಬನಾದ ನವಾಬ್ ಶರ್ಫರಾಜ್ ಖಾನ್ ಕ್ರಿ.ಶ. 1740ರಲ್ಲಿ ಇದನ್ನು ಕಟ್ಟಿಸಿದನು.
 
ತಾಜ್ ಉಲ್ ಮಸೀದಿ ಅಂದ್ರೆ ಮಸೀದಿಗಳ ಕೀರಿಟ ಅಂತ ಅರ್ಥ. ಇದು ಮಧ್ಯಪ್ರದೇಶದ ರಾಜಧಾನಿ ಭೂಪಾಲ್ನಲ್ಲಿದೆ. ಈ ಮಸೀದಿಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು 100 ವರ್ಷಗಳ ನಂತರ.
 
1870ರಲ್ಲಿ ಭೂಪಾಲ್ನ ರಾಣಿ ಸುಲ್ತಾನ್ ಶಹಜಹಾನ್, ತಾಜ್ ಉಲ್ ಮಸೀದಿಗೆ ಅಡಿಗಲ್ಲು ಹಾಕಿದ್ದ್ರು. ಹಣದ ವ್ಯತ್ಯಯದಿಂದಾಗಿ ಕೆಲಸ ನಿಮರ್ಾಣ ಅರ್ಧಕ್ಕೆ ನಿಂತು ಹೋಗಿತ್ತು. 1971ರಲ್ಲಿ ತಾಜ್ ಉಲ್ ಮಸೀದಿಯ ನಿಮರ್ಾಣ ಪೂರ್ಣಗೊಳ್ತು. ಕೆಲಸ ಪೂರ್ಣಗೊಳ್ಳುವುದಕ್ಕಾಗಿ 75 ಲಕ್ಷ ರುಪಾಯಿಗಳನ್ನು ಒದಗಿಸಿದ್ದು ಧರ್ಮಬೀರು ಮೌಲಾನ ಮಹಮ್ಮದ್ ಇಮ್ರಾನ್ ಖಾನ್. 23,312 ಚ.ಕಿ.ಮೀ. ವಿಸ್ತೀರ್ಣದಲ್ಲಿರುವ ತಾಜ್ ಉಲ್ ಮಸೀದಿ ಏಷ್ಯಾದ ಅತಿ ದೊಡ್ಡ ಮಸೀದಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
 
ತಾಜ್ ಉಲ್ ಮಸೀದಿಯ ಬಲಕ್ಕೆ ಹೊರಟ್ರೆ ಅಲ್ಲಿ ಇನ್ನೊಂದು ಮಸೀದಿ ಇದೆ. ಅದು ಏಷ್ಯಾದ ಅತಿ ಚಿಕ್ಕ ಮಸೀದಿ ದಾಯ್ ಸೀದಿ ಕಿ ಮಸೀದಿ. ಇದುವೇ ಭೂಪಾಲ್ನಲ್ಲಿ ನಿಮರ್ಾಣವಾದ ಮೊತ್ತ ಮೊದಲ ಮಸೀದಿ. 1723ರಲ್ಲಿ ಮಸೀದಿ ನಿಮಾಣವಾಯ್ತು. ಇದನ್ನು ಸೈನಿಕರು ನಮಾಜ್ ಮಾಡುವುದಕ್ಕಾಗಿ ಬಳಸುತ್ತಿದ್ರು. ಹೀಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸುಮಾರು ಮೂರು ಲಕ್ಷ ಮಸೀದಿಗಳಿವೆ. ಯಾರೋ ಕೆಲವೇ ಕೆಲವು ಮುಸ್ಲಿಂರಿಂದಾಗಿ ಇಡೀ ಮುಸ್ಲಿಂರನ್ನ ದ್ವೇಷಿಸುವ ಬದಲು ಪ್ರೀತಿಸುವ ಮೂಲಕ ಸಹಬಾಳ್ವೆ ನಡೆಸುವುದು ಭಾರತೀಯರಾದ ನಮ್ಮ ಹುಟ್ಟುಗುಣ. ಧರ್ಮ ಸಂಘರ್ಷಗಳು ಇದ್ದೇ ಇರುತ್ತವೆ. ಆದ್ರೆ ಬುದ್ದಿವಂತಿಕೆಯಿಂದ ಯೋಚಿಸುವ, ಆಲೋಚಿಸುವ ಶಕ್ತಿಯಿರುವ ಮನುಷ್ಯ ಮಾಡಿದ್ದೇ ತಪ್ಪನ್ನು ಮತ್ತೇ ಮತ್ತೇ ಮಾಡಲೂ ಬಾರದು. ತಪ್ಪು ಮಾಡಿ ಸರಿಯಾದದ್ದನ್ನು ಕಲಿಯಬೇಕು, ಕಲಿಯುವುದಕೋಸ್ಕರ ತಪ್ಪು ಮಾಡಬಾರದು. ಎರಡೂ ಸಮುದಾಯದ ಕೆಲವೇ ಕೆಲವು ಒಪಿನಿಯನ್ ಲೀಡರ್ಸ್​ ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ತಂದಿಕ್ಕುವ ಕೆಲಸ ಮಾಡ್ತಿರ್ತಾರೆ. ಅದನ್ನು ನಾವು ಸರಿಯಾಗಿ ಅರಿತುಕೊಂಡರೇ ಸಾಕು.