ವ್ಯಾಸರಾಜ ಮಠದ ಉದ್ಧಾರ

ವ್ಯಾಸರಾಜ ಮಠದ ಉದ್ಧಾರ

ಬರಹ

 ಮಠಗಳೂ, ಮಹಾತ್ಮರೂ ಪತಿತ ಶಿಷ್ಯಕೋಟಿನ್ನುದ್ಧರಿಸುತ್ತದೆನ್ನುವುದು ವಾಡಿಕೆ. ಅದರೀಗ ಸರಕಾರವೇ ಮಠವೊಂದನ್ನು ಮೇಲೆತ್ತಿ ಹಳಿಗೆ ತರಬೇಕಾಗಿ ಬಂದಿರುವುದು ವಿಪರ‍್ಯಾಸ.
 ವ್ಯಾಸರಾಜಮಠವೆಂಬ ಸಂಸ್ಥೆಯೊಂದರ ಆಡಳಿತವನ್ನು ರಾಜ್ಯ ಸರಕಾರ ವಹಿಸಿಕೊಮಡಿದ್ದು, ಈಗ ಇದು ಸಾರ್ವಜನಿಕರು ಮಾತಾಡಬಹುದಾದ ವಿಚಾರವಾಗಿದೆ.
 ಮಠದ ಸ್ವಾಮಿ, ಈ ಪುರಾತನ ಸಂಸ್ಥೆಯ ಚರ-ಸ್ಥಿರ ಆಸ್ತಿಗಳನ್ನು ಉಡಾಯಿಸಿ ಮಠವನ್ನು ಪಾಪರ್ ಮಾಡುತ್ತಿರುವ ಬಗ್ಗೆ, ಶಿಷ್ಯರು ಅಂಕಿ-ಅಂಶಗಳ ಸಮೇತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರದ ಆಡಳಿತಾಧಿಕಾರಿ ಇಂಥ ಅಕ್ರಮಕ್ಕೆ ತಕ್ಷಣವೇ ಸ್ಕ್ರೂ ಭದ್ರಮಾಡಿ ಈಗಿರುವದನ್ನಾದರೂ ಹೀಗೇ ಉಳಿಸಿಕೊಳ್ಳಲು ಕ್ರಮ ಕೈಗೊಂಡಿದ್ದಾರೆ.
 ಆಸ್ತಿ ಇಷ್ಟರಮಟ್ಟಿಗಾದರೂ ಭದ್ರವಾಯಿತು. ಆದರೆ ಮಠದ ಅಸ್ತಿತ್ವವಿರುವುದೇ ಅದರ ಸಂಪ್ರದಾಯ ವೈಶಿಷ್ಟ್ಯದಲ್ಲಿ ಎನ್ನುವುದೇ ಮರೆತುಹೋಗಿದೆಯಲ್ಲಾ!
 ಜ್ಞಾಪಕವಾದರೆ, ಸ್ವಾಮಿ, ಮಠದ ಈ ಅಸ್ತಿತ್ವಕ್ಕೆ ಪೂರಕವೇ ಎಂಬುದನ್ನು ಪರೀಕ್ಷಿಸಬೇಕು. ಆತನ ಪೂಜೆ ಮತ್ತು ದೈನಂದಿನ ಚಟುವಟಿಕೆಯ ವೀಡಿಯೋ ಮಾಡಿ, ಸೋದರ ಮಠ (ಕುಂದಾಪುರ ವ್ಯಾಸರಾಜ ಮಠ)ದ ಮುಖ್ಯಸ್ಥರು ಮತ್ತು ಪ್ರಾಮಾಣಿಕ ವಿದ್ವಾಂಸರ ಸಮಿತಿಯ ಪರಿಸೀಲನೆಗೊಳಪಡಿಸಬೇಕು. ಇದಲ್ಲಿ, ಶುಕಭಾಷೀ, ಪೀಠ ಲಾಲಸೀ ಸ್ವಘೋಷಿತ ವಿದ್ವಾಂಸರಿರದಂತೆ ಎಚ್ಚರ ಅಗತ್ಯ! ಈತ ಅಯೋಗ್ಯನೆಂದಾದರೆ, ನಿಸ್ಪೃಹರೊಬ್ಬರನ್ನಾರಿಸಿ, ಸೋದರ ಮಠದ ಸ್ವಾಮಿಗಳಿಂದ ಆಶ್ರಮ ಕೊಡಿಸಿ, ಸರಕಾರ ಮಠವನ್ನವರಿಗೆ ಒಪ್ಪಿಸಿಕೊಡಬೇಕು. ಶಿಷ್ಯೋತ್ತಮರೆಂದುಕೊಂಡವರ ಒತ್ತಡ ರಾಜಕೀಯಕ್ಕೆ ಮುಂಚೆ ಇದಾಗಬೇಕು.
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet