ನಿನ್ನ ನಗು

Submitted by Manasa G N on Fri, 06/29/2012 - 12:49

ಕಾಡುತಿಹುದು ನಿನ್ನ ಆ ನಲ್ಮೆಯ ನಗು,
ಸಂತೈಸುವುದೆನ್ನ ನಿನ್ನ ಗಲ್ಲದ ಮೇಲೆ  ಬೀಳುವ  ಆ ಗದ್ದಕುಳಿ,
ಹುಸಿ ಇಲ್ಲದೆ ಮನದಾಳದಿಂದ ಮೂಡುವ ನಿನ್ನ  ಆ ಮುಗುಳ್ನಗು,
ಕಲ್ಲಂತೆ ಇರುವ ಕಷ್ಟಗಳನ್ನು  ಕ್ಷಣರ್ದದಲ್ಲಿ ಕರಗಿಸುವುದು  ಆ  ಮಂದಸ್ಮಿತ,
 
ಮುಸಂಜೆಯ ಕಾಂತಿಯಂತೆ ಕಂಗೊಳಿಸುವ   ಆ   ನಸುನಗು,
ಮನದ ಅಂಗಳ ಬೆಳಗಿಸುವ ಬೆಳದಿಂಗಳ  ಮಂದಹಾಸ,
ಸ್ವಪ್ನದಲ್ಲೂ ಸದಾ ಸ್ಮರಿಸಬೇಕೆನಿಸುವ ಸುಹಾಸ,
ಚಿಲುಮೆಯಂತೆ ಶೋಭಿಸುವ ಆ ಒಲುಮೆಯ ಕುಡಿನಗು.
 
 ಕಾಡುತಿಹುದು ನಿನ್ನ ಆ ನಲ್ಮೆಯ ನಗು,........

 

Rating
No votes yet

Comments