ಕವಿ..

ಕವಿ..

ಕವನ

ಅಂತರದಿ ಬರೆದುದು

ಅನಂತರದಿ ಸಾಗುವುದು

ಭವ್ಯ ಬರೆಯುವುದೇಕೆ?

ಇಲ್ಲದನು ಬಣ್ಣಿಸಿ,

ಎಲ್ಲರನು ನಂಬಿಸಿ

ಮೆಚ್ಚುಗೆಯ ಪಡೆಯ ಬೇಕೆ..?

 

ಕವಿ ಭಾವ ಬರೆಸುವುದು

ನೈಜತೆಯು ಕೆರಳುವುದು

ಮರುಸೃಷ್ಟಿ ಕಲ್ಪನೆ,

ಅನುಕರಣೆ ಸಾಧ್ಯ,

ಅನುಕರಿಸಿ ಅಂಕುರಿಸಿ

ಅರಳುವುದೇ ಕವನ..

 

ಸ್ತಬ್ಧತೆಯ ಕುಂಚದಲಿ

ಅರುಣೋದಯದ ಉದಯ

ಬರೆಸಿದವ ನಿಜ ಕವಿಯು,

ಬರೆದವನು ಲಿಪಿಕಾರ,

ಕವಿ ನಾನು ಎಂಬುದಕು

ಗರ್ವ ಬೇಕೋ ತಮ್ಮ..

ಸೃಷ್ಟಿಯೇ ನಿಜ ಕವಿಯು

ತಿಳಿಯ ಬೇಕೋ..

 

ಶಿವಪ್ರಸಾದ್ ಎಸ್.ಪಿ.ಎಸ್

 

Comments