ಚಂಚಲೆ

ಚಂಚಲೆ

ಕವನ

ಹೆಸರೇನೋ  ಅಂದ


ಆದರೆ ಕೆಲಸ ಹೀನ


ಕೆಲವೊಮ್ಮೆ  ಉತ್ತಮ


ಸಿಹಿ ಕಂಡೊಡನೆ  ಆಸೆ ಬುರುಕ ನೊಣ 


ಜೊಲ್ಲು ಸುರಿಸುತ ನಿಲ್ಲುವೆ


ತೃಪ್ತಿಯ ಅರ್ಥವೇ  ತಿಳಿಯದು


ಹಲ್ಗಿಂಜುವ, ಕಣ್ಣ್   ಕೆಕ್ಕರಿಸುವ   ವ್ಯೇಶ್ಯೆ


ಬಹುಪಾಲು ಸೋಲು ಕೆಲವೊಮ್ಮೆ ಗೆಲವು


ನೀನೋ ಅರಿವಿಲ್ಲದೆ  ಓಡುವ ಜೂಜು ಕುದುರೆ


ಎಲ್ಲೆಲ್ಲೋ ಸುತ್ತುವ  ಬೀದಿ ನಾಯಿ


ಕಂಡಿದ್ಡು  ಬಯಸಿ, ಸಿಕ್ಕಿದ್ದು ಮೂಸಿ,  ಕಲ್ಲೇಟು ತಿಂದು


ಮತ್ತೆ ಅದೇ ಕೆಲಸ.


ಥೂ ನಾಚಿಕೆ, ಮಾನ  ಒಂದೂ ಇಲ್ಲ 


ನಿನಗೋ ನೂರೆಂಟು ಬಿರುದುಗಳು 


ಚಂಚಲ, ಚಪಲ..................


ನಿನ್ನ ನಡಿಗೆ ವಿದ್ಯುತ್  ವೇಗ


ಕೈಗೂ ಎಟುಕಲಾರೆ


ಕಣ್ಣಿಗೂ  ಕಾಣಲಾರೆ


ನೀನೋ ಮಿನಿ ಸ್ಕರ್ಟ್ ಯುಗದಲಿ


ನಾನೋ ಹದಿನೇಳುಮೊಳದ ಕಾಲದಲಿ


ನಿನ್ನ ಕೈಯಲ್ಲಿ ಸಿಕ್ಕಿ ನಾನೆಂತಹ  ಮೂರ್ಖ?


ಎಂದಿಗೋ ಇವಳು ನನ್ನ ಹತೋಟಿ ?


 


ಶ್ರೀ  ನಾಗರಾಜ್.