ಪ್ರತಿಯೊಂದು

ಪ್ರತಿಯೊಂದು

ಕವನ

 


 


ಪ್ರತಿಯೊಂದು ಓಡಾಟ


ಏನೋ ಕಳೆದುಕೊಳ್ಫ್ಳುವಾಟ.


 


ಪ್ರತಿ ದಾರಿ


ಚೂರಿ.


 


ಪ್ರತಿಯೊಂದು ಮನೆ


ಬಾಗಿಲಿಲ್ಲದ ಸೆರೆಮನೆ.


 


ಪ್ರತಿ ಗಳಿಗೆ


ಬಲೆ ನೇಯ್ಗೆ.


 


ಪ್ರತಿಯೊಂದು ಜೀವ


ಕಿವುಡು ಕವಿತೆಯ ಭಾವ.


 


ಪ್ರತಿ ಬದುಕು


ಸಾವಿನ ವರ್ಣನೆ.


 


------------------------


 


  c v sheshadri holavanahalli