ನೀ....

ನೀ....

ಕವನ

 ಮೌನ ಹರಟೆಯ ವಿಷಯ ನೀ.

ಬರೆಯಲಾಗದ ಸಾಲಿನಲಿ ಮೂಡಿದ ಅಕ್ಷರ ನೀ. 

ಬಾಡದ ಹೂವಿನ ಪರಿಮಳ ನೀ. 

ನಾ ತೊದಲಿದ ಸ್ಪಷ್ಟ ನುಡಿ ನೀ.

 

ಕಪ್ಪು ಬಿಳುಪು ನೆನಪಿನ ಬಣ್ಣ ನೀ.

ಮರುಭೂಮಿಯ ಹಸಿರು ಹಾಸಿಗೆ ನೀ.

ಗೋಡೆಯಲಿ ಕಂಡ ಪ್ರತಿಬಿಂಬ ನೀ.

ನೆನಪಾಗದ ಕೊನೆಯ ಸಾಲಿನ ಭಾವ ನೀ.