ಚುಟುಕುಗಳು ( ಭಾಗ 4 )

ಚುಟುಕುಗಳು ( ಭಾಗ 4 )

ಕವನ

 


ತಾಯಿಯ ಮಮತೆ


ವಾತ್ಸಲ್ಯಗಳು ಅವರ್ಣನೀಯ


ಅವಳೊಂದು ತುಂಬಿ ಹರಿವ


ಮಮತೆಯ ಗಂಗೆ


 


     ***


 


ಸುಖ ಸಂತೋಷಗಳು


ಮಾತ್ರವೆ ಬದುಕಲ್ಲ


ದುಃಖ ದುಮ್ಮಾನಗಳು


ಕೂಡ ಬದುಕೆ


 


     ***


 


ವೀರ ಶೂರ ಧೀರ


ರಣಧೀರ


ಯಾರಾದರೇನು ?


ಕಾಲ


ತನ್ನ ಪಾಡಿಗೆ ತಾನು


ಸರಿದು ಹೋಗುತ್ತಿರುತ್ತೆ


 


     ***

Comments