ಚುಟುಕಗಳು_5

ಚುಟುಕಗಳು_5

ಕವನ
ಕವನವೆಂದರೆ ಅಲ್ಲ ಬರಿ ಪದಗಳ ಜೋಡಣೆ ಅದು ನನ್ನ ಜೀವನದ ಆಶೆ ನಿರಾಶೆ ಸುಖ ದುಃಖ ಕನಸು ನನಸುಗಳ ಪ್ರತಿಬಿಂಬ *** ಮನಸಿನಾಳದ ಎನ್ನ ಕತ್ತಲೆಯ ಗರ್ಭದಲಿ ಅರಳುವವು ಗುಲಾಬಿಯಂತಿರುವ ಎನ್ನ ಕವನಗಳು *** ಕವನಗಳೆಂದರೆ ಬರಿ ಪಂಚೇಂದ್ರಿಯಗಳಿಗೆ ಅನುಭವಕೆ ಮಾತ್ರ ದಕ್ಕುವಂತಹವಲ್ಲ ಅವು ಹೃದಯ ಮನಸುಗಳನು ಉದ್ದೀಪನ ಗೊಳಿಸುವಂತಹವು ***

Comments