ಸತ್ಯಾಶಯ
ಸತ್ಯಾಶಯ
ಸತ್ಯ ಮೇವ ಜಯತೆ |
ಜಯತೆ ಜಯತೆ ಜಯತೆ ||
ಜಯ ಜಯ ಭಾರತ ಮಾತೆ |
ನೀ ಅರಿವ ಸಿರಿಯ ಗಂಗೆ ||
ಸತ್ಯ ಮೇವ ಜಯತೆ |
ಜಯ ಜಯ ಭಾರತ ಮಾತೆ |||ಪ||
ಸುಪ್ತ ಗುಪ್ತದಲ್ಲಾಪ್ತವಾಗಿ
ಸಂಚಲನ ಮಾಡುವವಳೇ |
ರೀತಿ ನೀತಿಗತಿ ಪ್ರೀತಿ ತೋರಿ
ಗತಿಜ್ಯೋತಿಯಾಗುವವಳೇ ||
ಸತ್ಯ ನ್ಯಾಯ ಸದ್ಧರ್ಮ ಗೆಲಲಿ
ಸದ್ಬುದ್ಧಿ ಮೂಡಿ ಬರಲಿ |
ನಿತ್ಯ ಮುಕ್ತ ಸಾಮ್ರಾಜ್ಯದಲ್ಲಿ
ಚೈತನ್ಯ ಹರಡಿ ಕೊಳಲಿ ||೧||
ಹೊಣೆಯನರಿತು ಜನಮನವ ಕಲೆತು
ನಾಗರಿಕರಾಗಬೇಕು |
ದೇಶಿಗರ ಕರ್ಮ ಮಾನವನ ಧರ್ಮ
ಬಿಡದಂತೆ ಹಿಡಿಯಬೇಕು ||
ಸಮಬಾಳು ಮಂತ್ರವಾಗಿ
ಸಹಕಾರ ತಂತ್ರವಾಗಿ |
ಸ್ವಾತಂತ್ರ್ಯವರಳಿಕೊಳಲಿ
ಸ್ವಾರ್ಥಿಗಳು ಅಡಗಿ ಬಿಡಲಿ ||೨||
ಸಂಶಕ್ತವಾಗಿ ಶೈಕ್ಷಣಿಕ ಕಾರ್ಯ
ಭರದಿಂದ ಸಾಗುತಿರಲಿ |
ಸಂಪನ್ನರಾಗಿ ವಿದ್ವಾಂಸರೆಲ್ಲ
ಬೋಧನೆಯ ಸುಖವ ಪಡಲಿ ||
ಅದು ಭವ್ಯ ದಿವ್ಯವಾಗಿ
ಭವಿತವ್ಯ ಕಟ್ಟಿಕೊಡಲಿ |
ಸಂಪೂರ್ಣ ಸಿದ್ಧಿ ಗಳಿಸಿ
ವಿದ್ಯಾರ್ಥಿವೃಂದ ಗೆಲಲಿ ||೩||
- ಸದಾನಂದ
Comments
ಉ: ಸತ್ಯಾಶಯ
In reply to ಉ: ಸತ್ಯಾಶಯ by makara
ಉ: ಸತ್ಯಾಶಯ