'ಕ್ರಿಕೆಟ್ ಯುಗಪುರುಷ ಸಚಿನ್ ತೆಂಡೂಲ್ಕರ್' ಕೃತಿಯ ಲೋಕಾರ್ಪಣೆ

'ಕ್ರಿಕೆಟ್ ಯುಗಪುರುಷ ಸಚಿನ್ ತೆಂಡೂಲ್ಕರ್' ಕೃತಿಯ ಲೋಕಾರ್ಪಣೆ

 ಜೂನ್ 21, 2012ರಂದು ಬರೆದಿದ್ದ ಬ್ಲಾಗ್ ನಲ್ಲಿ ಬರೆದಿದ್ದ ಹಾಗೆ ವಿಸ್ಮಯ ಚಿಂತನ ಮಿಲನ ಹಾಗೂ 'ಕ್ರಿಕೆಟ್ ಯುಗಪುರುಷ: ಸಚಿನ್ ತೆಂಡೂಲ್ಕರ್' ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸರಳವಾಗಿ ಸುಂದರವಾಗಿ ನಡೆಯಿತು. 

 
ಮೈಸೂರಿನ ವಿಸ್ಮಯ ಪ್ರಕಾಶನ ಹೊರತಂದಿರುವ ನಾನು ಬರೆದಿರುವ 'ಕ್ರಿಕೆಟ್ ಯುಗಪುರುಷ: ಸಚಿನ್ ತೆಂಡೂಲ್ಕರ್' ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ.ಎನ್.ಎಂ.ತಳವಾರ್ ರವರು. ಈ  ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದವರು ಪ್ರಜಾವಾಣಿ ಪತ್ರಿಕೆಯ ಮೈಸೂರು ವಿಭಾಗದ ಮುಖ್ಯಸ್ಥರಾಗಿರುವ ಶ್ರೀ ರವೀಂದ್ರ ಭಟ್. ಮೈಸೂರು ವಿಶ್ವವಿದ್ಯಾನಿಲಯದ ಕ್ರೀಡಾ ದೈಹಿಕ ಶಿಕ್ಷಣ ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ, ನಿವೃತ್ತ ಪ್ರಾಂಶುಪಾಲ ಪ್ರೊ. ಶೇಷಣ್ಣನವರು 'ಯುವಜನತೆ ಮತ್ತು ಕ್ರಿಕೆಟ್' ಎಂಬ ವಿಷಯದ ಬಗ್ಗೆ ಸಂವಾದ ನಡೆಸಿಕೊಟ್ಟರು. ಸಮಾರಂಭದಲ್ಲಿ ಡಾ.ಹಾಲತಿ ಸೋಮಶೇಖರ್ ಉಪಸ್ಥಿತರಿದ್ದರು. 
 
ಈ ಸಮಾರಂಭದ ಬಗ್ಗೆ ಜೂನ್ 25, 2012ರಂದು ಪ್ರಜಾವಾಣಿ ಹಾಗೂ ಮೈಸೂರಿನ ಆಂದೋಲನ ಫೋಟೋ ಸಮೇತ ವಿವರವಾದ ವರದಿಯನ್ನೂ ಕೂಡ ನೀಡಿತು.
Rating
No votes yet

Comments