ಎಲ್ಲಿಂದ ??
ಜಾತಿ ರಾಜಕಾರಣದೊಳಗೆ,
ಪ್ರಜಾಪ್ರಭುತ್ವವೆಂಬ ವ್ಯವಸ್ಥೆ
ಗಬ್ಬೆದ್ದು ನಾರತೊಡಗಿದೆ.
ಮಠ ಮಸೀದಿಗಳ ನಡುವೆ
ಚರ್ಚು ಬಸದಿಗಳ ಒಳಗೆ
ಕಾಮ ಕಸ್ತೂರಿ ಕಂಪೊಸರತೊಡಗಿದೆ.
ನ್ಯಾಯ ವ್ಯವಸ್ಥೆಯ ಹೆಸರಲ್ಲಿ
ಅನ್ಯಾಯದ ಬಾಡೂಟಕೆ
ನರಸತ್ತ ಪ್ರಜಾಸತ್ತೆ, ನಾಲಿಗೆ ಚಾಚಿ ನಿಂತಿದೆ.
ಎಂಜಲು ಕಾಸಿಗೆ ಕೈಚಾಚಿ
ಮುಖಕೆ ಮಸಿ ಬಳಿದರೂ ಬುದ್ದಿಬರದ
ಭಿಕ್ಷುಕ ಸಂತಾನ ಸೈತಾನನಾಗಿ ಕೂತಿದೆ.
ಇಂಥ: ವ್ಯವಸ್ಥೆಯೆಂಬ ಅವ್ಯವಸ್ಥೆಯಡಿಯಲ್ಲಿ,
ಬದಲಾವಣೆಯನ್ನು ತುರ್ತಾಗಿ ತರಲೇಬೇಕಿದೆ.
ಆದರೆ,
ಎಲ್ಲಿಂದ??
Rating
Comments
ನಿಮ್ಮ ಕಳಕಳಿ ಮತ್ತು ಕಾಳಜಿಗೆ
ನಿಮ್ಮ ಕಳಕಳಿ ಮತ್ತು ಕಾಳಜಿಗೆ ನನ್ನ ಮೆಚ್ಚುಗೆ.
ನಮ್ಮನ್ನು ನಾವು ಸುಲಭವಾಗಿ ಬದಲಾಯಿಸಿಕೊಳ್ಳಬಹುದು.
ವ್ಯವಸ್ಥೆಯನ್ನು ಕಷ್ಟ-ಸಾಧ್ಯ
In reply to ನಿಮ್ಮ ಕಳಕಳಿ ಮತ್ತು ಕಾಳಜಿಗೆ by harishsaniha
@ harishsaniha :
@ harishsaniha :
ಮೆಚ್ಚುಗೆಗೆ ಧನ್ಯವಾದಗಳು :)