ಗುರ್ತೇ ಸಿಗುತ್ತಿಲ್ಲ‌

ಗುರ್ತೇ ಸಿಗುತ್ತಿಲ್ಲ‌

 


ತಾನೇ ಹಚ್ಚಿ ಬಾಯಿಗಿಟ್ಟುಕೊಂಡ ಬೆಂಕಿಗೆ ಮುಖದ ಸುತ್ತ ಹೊಗೆ. ಇವತ್ತು ಮನುಷ್ಯ ಗುರ್ತೇ ಸಿಗುತ್ತಿಲ್ಲ. ಹಿಂದೆ ಮೀಸೆಯಲ್ಲಿ ಮುಚ್ಚಿಹೋಗುತ್ತಿತ್ತು ಬಾಯಿ. ಇಂದು ಆಸೆಯಲ್ಲಿ ಮುಚ್ಚಿ ಹೋಗಿದೆ. ತಲೆಗೆ ಮಾತ್ರ ಇರ್ಬೇಕಾಗಿತ್ತು ಕಿರೀಟ. ಈಗ ಮುಖದ ತುಂಬ ಹೆಲ್ಮೆಟ್ ಕಿರೀಟ. ಪೆಟ್ರೋಲ್ ಮೇಲೆ ಪ್ರಯಾಣ. ಡಿಕ್ಕಿ ಭಯ. ಬರಸ್ಟಾಗುವ  ಟೈರ್ಗಳೇ ಸಿಂಹಾಸನ. ಎದುರಿಗೇ ನಿಂತು ಕೂಗಿದೆ. ಕೇಳುತ್ತಿಲ್ಲ. ಕಿವಿ ತುಂಬ ಕಾಣದವರ ಕೂಗು. ಹತ್ತಿರ ಹೂಗಿ ಕೈ ಕುಲುಕೋಣ ಎಂದು ಕೈ ಚಾಚಿದೆ. ಆದರೆ ಅದು ಖಾಲಿ ಜೇಬಲ್ಲಿ ಬಚ್ಚಿಟ್ಟುಕೊಂಡಿದೆ. ಮೆಲ್ಲನೆ ಜೇಬಲ್ಲ್ಲಿ ಇಣುಕಿ ನೋಡಿದೆ. ಅಸಂಖ್ಯಾತ ಅಕ್ಷರಗಳು , ರಮಣೀಯ ರೇಖೆಗಳು, ಸುಂದರ ವಾದ್ಯಗಳು ಕೈಗಳ ಶವಯಾತ್ರೆ ಮಾಡುತ್ತಿವೆ.


......................................................................


c v sheshadri holavanahalli

Comments