ಗಾಜಿನ ಲೋಟವನ್ನು ಕೆಳಗಿಳಿಸಿ - ಒತ್ತಡ ನಿರ್ವಹಣೆಯ ಚುಟುಕು ಕತೆ

ಗಾಜಿನ ಲೋಟವನ್ನು ಕೆಳಗಿಳಿಸಿ - ಒತ್ತಡ ನಿರ್ವಹಣೆಯ ಚುಟುಕು ಕತೆ

       ಒಬ್ಬ ಉಪನ್ಯಾಸಕರು ಮಾನಸಿಕ ಒತ್ತಡದ ನಿರ್ವಹಣೆಯ ಬಗ್ಗೆ ಪಾಠವೊಂದನ್ನು ಮಾಡುತ್ತಿದ್ದರು. ತಮ್ಮ ತರಗತಿಯ ಮಧ್ಯದಲ್ಲಿ ನೀರಿನ ಒಂದು ಲೋಟವನ್ನು ಎತ್ತಿ ಹಿಡಿದು ತಮ್ಮ ವಿದ್ಯಾರ್ಥಿಗಳನ್ನುದ್ದೇಶಿಸಿ ಹೀಗೆ ಪ್ರಶ್ನಿಸಿದರು, "ಈ ನೀರಿನ ಲೋಟವು ಎಷ್ಟು ಭಾರವಿರುವುದೆಂದು ನೀವು ಭಾವಿಸುತ್ತೀರಿ?" ವಿದ್ಯಾರ್ಥಿಗಳ ಉತ್ತರವು ೨೦ಗ್ರಾಂನಿಂದ ಹಿಡಿದು ೫೦೦ಗ್ರಾಂವರೆಗೆ ಇತ್ತು.

       ಉಪನ್ಯಾಸಕರು, "ಇದರ ನಿಖರವಾದ ಭಾರವಲ್ಲ ಮುಖ್ಯವಾದುದು; ಆದರೆ ಅದನ್ನು ನಾವು ಎಷ್ಟು ಹೊತ್ತು ಹಿಡಿದಿಟ್ಟುಕೊಳ್ಳಬಹುದು ಎನ್ನುವುದರ ಮೇಲೆ ಅದರ ಭಾರ ಅವಲಂಭಿಸುತ್ತದೆ"

    "ನಾನು ಅದನ್ನು ಒಂದು ನಿಮಿಷ ಹಿಡಿದಿಟ್ಟುಕೊಳ್ಳಬಲ್ಲನೆಂದರೆ, ಅದು ಸರಿ."

    "ಅದನ್ನು ನಾನು ಒಂದು ಘಂಟೆಯಷ್ಟು ಎತ್ತಿಹಿಡಿದರೆ ನನ್ನ ಬಲತೋಳಿನಲ್ಲಿ ನೋವು ಪ್ರಾರಂಭವಾಗುವುದು."

    "ಒಂದು ವೇಳೆ ಅದನ್ನು ನಾನು ಒಂದು ದಿವಸ ಹಿಡಿದಿಟ್ಟುಕೊಂಡೆನೆಂದುಕೊಳ್ಳಿ ಆಗ ನೀವು ಒಂದು ಆಂಬುಲೆನ್ಸ್ ಅನ್ನು ಕರೆತರಬೇಕಾದೀತು."

    "ತೂಕ ಯಾವಾಗಲೂ ಒಂದೇ ಸಮನಾಗಿದ್ದರೂ ಕೂಡಾ, ನೀವು ಅದನ್ನು ಎಷ್ಟು ಹೊತ್ತು ಎತ್ತಿ ಹಿಡಿಯುತ್ತೀರೋ ಅದು ಅಷ್ಟು ಭಾರವಾಗುತ್ತಾ ಹೋಗುವುದು."
   
    "ನಾವು ಭಾರವನ್ನು ಎಲ್ಲಾ ಕಾಲದಲ್ಲೂ ಹೊತ್ತುಕೊಂಡಿದ್ದರೆ, ಸ್ವಲ್ಪ ಹೊತ್ತಿಗೋ ಇಲ್ಲಾ ಕೆಲವು ಕಾಲದ ನಂತರವೋ, ಅದನ್ನು ನಾವು ಭರಿಸಲಾಗದೇ ಆ ಭಾರವು ಹೆಚ್ಚು ಹೆಚ್ಚಾಗುತ್ತಲೇ ಹೋಗುತ್ತದೆ!"
   
    "ನೀವು ಮಾಡಬೇಕಾದದ್ದೇನೆಂದರೆ ಆ ಗಾಜಿನ ಲೋಟವನ್ನು ಕೆಳಗಿಡಿ, ಒಂದು ಕ್ಷಣ ಸುಧಾರಿಸಿಕೊಳ್ಳಿ ಮತ್ತು ಪುನಃ ಅದನ್ನು ಎತ್ತಿ ಹಿಡಿದಿಟ್ಟುಕೊಳ್ಳಿ."

    "ನೀವು ಆಗಾಗ ನಿಮ್ಮ ಹೊರೆಯನ್ನು ನಿಯಮಿತವಾಗಿ ಕೆಳಗಿಳಿಸಬೇಕು, ಆಗ ನೀವು ಪುನರುತ್ಸಾಹಗೊಂಡು ನಿಮ್ಮ ಕಾರ್ಯವನ್ನು ನಿರ್ವಹಿಸಲು ಸಮರ್ಥರಾಗುತ್ತೀರಿ. "
   
    "ಆದ್ದರಿಂದ ನೀವು ಈ ರಾತ್ರಿ ಮನೆಗೆ ಹೋದ ನಂತರ, ನಿಮ್ಮ ಕೆಲಸದ ಹೊರೆಯನ್ನು ಇಳಿಸಿ ಹೋಗಿ. ಅದನ್ನು ಮನೆಯವರೆಗೆ ಕೊಂಡೊಯ್ಯಬೇಡಿ. ಅದನ್ನು ಪುನಃ ನಾಳೆಯ ದಿವಸ ಮುಂದುವರೆಸಬಹುದು."

    "ಈಗ ಹೊರೆಯೆನಿಸಿರುವುದನ್ನು ಸಾಧ್ಯವಾದರೆ ಕ್ಷಣಕಾಲ ನಿಮ್ಮ ಹೆಗಲ ಮೇಲಿನಿಂದ ಇಳಿಸಿ."
   
    "ಅದನ್ನು ಪುನಃ ನೀವು ಸುಧಾರಿಸಿಕೊಂಡ ನಂತರ ಕೈಗೆತ್ತಿಕೊಳ್ಳಿ."
   
    "ವಿರಮಿಸಿ ಮತ್ತು ಆರಾಮವಾಗಿರಿ."
   
    "ಜೀವನ ಚಿಕ್ಕದು, ಅದನ್ನು ಚೊಕ್ಕವಾಗಿ ಆನಂದಿಸಿ."


ವಿ.ಸೂ: ಇದು ಸಂಪದಿಗ ಮಿತ್ರರಾದ ಶ್ರೀಕರ್ ಅವರು ಮಿಂಚಂಚೆಯಲ್ಲಿ ಕಳುಹಿಸಿದ ಇಂಗ್ಲೀಷ ಬರಹದ ಕನ್ನಡ ಅನುವಾದ. ಈ ಪ್ರಸಂಗದ ಬಗ್ಗೆ ಅನೇಕ ಕೊಂಡಿಗಳಿವೆ ಅದರಲ್ಲಿ ಒಂದು ಕೊಂಡಿ ಇಲ್ಲಿದೆ - http://www.google.co.in/url?sa=t&rct=j&q=&esrc=s&source=web&cd=4&ved=0CFkQFjAD&url=http%3A%2F%2Fwww.rediff.com%2Fgetahead%2Fslide-show%2Fslide-show-1-career-life-lessons-from-a-glass-of-water%2F20110610.htm&ei=NrHxT47aLsLmrAf-ldS9DQ&usg=AFQjCNHZCI1ak6cAjfw4CJAM9tHWYj4Xxg&sig2=ROK4hvvh7ULptFbYZI59ZA


ಚಿತ್ರ ಕೃಪೆ: ಗೂಗಲ್ ಕೊಂಡಿ - http://www.google.co.in/imgres?start=97&hl=en&client=firefox-a&sa=X&rls=org.mozilla:en-US:official&biw=1024&bih=609&tbm=isch&prmd=imvns&tbnid=P_TYButesoW_KM:&imgrefurl=http://www.imagesource.com/stock-image/Person-holding-a-glass-of-water-IS862-069.html&docid=bc93Omp5NttHVM&imgurl=http://www.imagesource.com/Doc/IS0/Media/TR4_WATERMARKED/2/0/f/7/IS862-069.jpg&w=327&h=436&ei=KrTxT_GpE4vOrQf7mc2-DQ&zoom=1&iact=rc&sig=106262502721774672193&page=5&tbnh=128&tbnw=125&ndsp=24&ved=1t:429,r:23,s:97,i:78&tx=70&ty=50

 

Rating
No votes yet

Comments