ಅಮರ‌..ಮಧುರ..ಪ್ರೇಮ = ಭಾಗ 7

ಅಮರ‌..ಮಧುರ..ಪ್ರೇಮ = ಭಾಗ 7

ಅಂದು ಸಂಜೆ ಅಮರ್ ಮತ್ತೆ ಮಧುರಳ ಜೊತೆ ಮಾತಾಡಬೇಕು ಎಂದು ಚಡಪಡಿಸುತ್ತಿದ್ದ. ಆದರೆ ಈಗ ಮಾಡಿದರೆ ಪ್ರೇಮ ಇರುತ್ತಾಳೆ ಮಧುರ ಸರಿಯಾಗಿ ಮಾತಾಡುವುದಿಲ್ಲ. ಅದರ ಬದಲು ಪ್ರೇಮ ಗೆ ಮಾಡಿದರೆ ಹೇಗೆ ಎಂದು ಪ್ರೇಮಳ ನಂಬರ್ ಗೆ ಕರೆ ಮಾಡಿದ. 


ಪ್ರೇಮ ಮತ್ತು ಮಧುರ ಇಬ್ಬರೂ ಆಚೆ ಬಂದಿದ್ದರು. ಶಾಪಿಂಗ್ ಮುಗಿಸಿ ಪೀಜೀಗೆ ಹೋಗಬೇಕಾದರೆ ಪ್ರೇಮಳ ಮೊಬೈಲ್ ರಿಂಗಾಯಿತು. ನೋಡಿದರೆ ಅಮರನ ಕರೆ ಆಗಿತ್ತು.  ಪ್ರೇಮ ಒಂದು ಸಲ ಫೋನ್ ಕಡೆ ನೋಡಿ ಇನ್ನೊಂದು ಸಲ ಮಧುರಳ ಕಡೆ ನೋಡಿದಳು. 


ಮಧುರ ಕೇಳಿದಳು ಯಾರದು ಫೋನ್ ಅಮರ್ ದ? ನಾನು ನಿನಗೆ ಹೇಳಿದ್ನಲ್ಲ ಕಾಲೇಜ್ ಮುಗಿಯುವ ತನಕ ಇದೆಲ್ಲ ಬೇಡ ಎಂದು. ಅವನಿಗಾದರೂ ಬುದ್ಧಿ ಬೇಡವ? ಯಾವಾಗಂದರೆ ಅವಾಗ ಫೋನ್ ಮಾಡುತ್ತಾನೆ. ಅವನಿಗೆ ಹೇಳು ಇನ್ನು ಮುಂದೆ ಕಾಲೇಜ್ ನಲ್ಲಿ ಎಷ್ಟೋ ಅಷ್ಟು ಮನೆಗೆ ಬಂದ ಮೇಲೆ ಫೋನ್ ಮಾಡಬೇಡ ಎಂದು.  ಅಷ್ಟರಲ್ಲಿ ಕರೆ ಕಟ್ ಆಯಿತು. ಪ್ರೇಮ ಫೋನನ್ನು ಸುಮ್ಮನೆ ಒಳಗೆ ಇಟ್ಟುಕೊಂಡಳು.


ಇತ್ತ ಅಮರ್ ಪ್ರೇಮ ಫೋನ್ ಎತ್ತದಿದ್ದಕ್ಕೆ ಆಗಿದ್ದಾಗಲಿ ಮಧುರಗೆ ಕರೆ ಮಾಡೋಣ ಎಂದು ಮಧುರಳ ನಂಬರ್ ಗೆ ಕರೆ ಮಾಡಿದರೆ ಅದೂ ಸಹ ರಿಂಗಾಗುತ್ತಿತ್ತು ಆದರೆ ಎತ್ತಲಿಲ್ಲ. ಯಾಕಪ್ಪ ಇಬ್ಬರೂ ಫೋನ್ ಎತ್ತುತ್ತಿಲ್ಲ ಒಂದು ವೇಳೆ ಮಧುರಗೆ ಇನ್ನೂ ಹುಶಾರಾಗಿದೆಯೋ ಇಲ್ಲವೋ, ಥೂ ಒಬ್ಬರಾದರೂ ಫೋನ್ ಎತ್ತಬಾರದ ನಾವಿಲ್ಲಿ ಟೆನ್ಶನ್ ನಿಂದ ಒದ್ದಾಡುತ್ತಿದ್ದರೆ ಅವರು ಮಾತ್ರ ಹಾಯಾಗಿ ಇರುತ್ತಾರೆ. ಈ ಹುಡುಗಿಯರೇ ಹೀಗೆ ಅವರಿಗೆ ಹುಡುಗರನ್ನು ಆಟ ಆಡಿಸುವುದೆಂದರೆ ಏನೋ ಖುಷಿ.


ಸ್ವಲ್ಪ ಹೊತ್ತಿನ ನಂತರ ಅಮರನ ಮೊಬೈಲ್ ರಿಂಗಾಯಿತು. ನೋಡಿದರೆ ಪ್ರೇಮ ಕರೆ ಮಾಡಿದ್ದಳು. ಹಲೋ ಪ್ರೇಮ ಎಲ್ಲಿ ಹೋಗಿದ್ದಿರಿ ಇಬ್ಬರೂ ಒಬ್ಬರಾದರೂ ಫೋನ್ ಎತ್ತಬಾರದ? ನಿಮ್ಮಕ್ಕ ನೋಡಿದರೆ ಯಾವಾಗಲೂ ಫೋನ್ ಆಫ್ ಮಾಡಿಟ್ಟುಕೊಂಡಿರುತ್ತಾಳೆ ನೀನಾದರೂ ಫೋನ್ ಎತ್ತಬಾರದ?


ಹಲೋ ಯಾಕಪ್ಪ ಕೂಗಾಡ್ತಾ ಇದ್ದೀಯ? ನಮಗೇನು ಸದಾಕಾಲ ನಿನ್ನ ಜೊತೆ ಮಾತಾಡುವುದೇ ಕೆಲಸ ಎಂದುಕೊಂಡಿದ್ದೀಯ? ನೀನು ಫೋನ್ ಮಾಡಿದಾಗ ಮಧುರ ಪಕ್ಕದಲ್ಲೇ ಇದ್ದಳು. ಅವಳು ಬೈದಳು ಇನ್ನು ಮುಂದೆ ನಿನ್ನ ಜೊತೆ ಕಾಲೇಜ್ ನಲ್ಲಿ ಇದ್ದಾಗಷ್ಟೇ ಮಾತಾಡಬೇಕಂತೆ. ಮನೆಗೆ ಬಂದಾಗ ನಿನ್ನ ಜೊತೆ ಮಾತಾಡಬಾರದಂತೆ ಅಂದರೆ ಫೋನ್ ಎಲ್ಲ ಬಂದ್. ಬಹುಶಃ ನಾನು ನಿನ್ನ ಜೊತೆ ಸಲುಗೆ ಇಂದ ಇರುವುದು ಅವಳಿಗೆ ಇಷ್ಟ ಇಲ್ಲ ಅನಿಸತ್ತೆ. ಏನೋಪ ಏನು ನಡೀತಾ ಇದೆ ನಿಮ್ಮಿಬ್ಬರ ನಡುವೆ ಅರ್ಥವೇ ಆಗುತ್ತಿಲ್ಲ ಎಂದು ನಕ್ಕಳು.


ಅಯ್ಯೋ ಸುಮ್ಮನಿರಮ್ಮ ಸಾಕು ಏನೂ ನಡೀತಾ ಇಲ್ಲ. ಮಧುರ ಹೇಗಿದಾಳೆ ಎಂದು ಕೇಳೋಣ ಎಂದು ಫೋನ್ ಮಾಡಿದೆ ಅಷ್ಟೇ. ನೀನು ಫೋನ್ ತೆಗೆಯುತ್ತಿಲ್ಲ ಅಂತ ಅವಳಿಗೆ ಟ್ರೈ ಮಾಡಿದೆ ಅಷ್ಟೇ. ಅಷ್ಟಕ್ಕೇ ಇಷ್ಟೆಲ್ಲಾ ಮಾತು ಕೇಳಬೇಕ? ಹ್ಮ್ಮ್ ಏನೂ ಮಾಡಕ್ಕಾಗಲ್ಲ ಪ್ರೀತಿ ಅಂದಮೇಲೆ ಇದೆಲ್ಲ ಮಾಮೂಲು. ಅದು ಬಿಡು ಹೇಗಿದಾಳೆ ಅವಳು ಈಗ ಹುಶಾರಾದಳ?


ಹಾ ಈಗ ಹುಶಾರಾಗಿದ್ದಾಳೆ. ನಾಳೆ ಬರ್ತಾಳೆ ಕಾಲೇಜ್ ಗೆ. ಈಗ ನಾನು ಫೋನ್ ಇಡ್ತೀನಿ ಆಮೇಲೆ ಅವಳೇನಾದರೂ ನೋಡಿದರೆ ಮತ್ತೆ ಕೂಗಾಡ್ತಾಳೆ ಓಕೆ ಬೈ.


ಅವಳು ಹುಶಾರಾಗಿದಾಳೆ ಎಂದು ಕೇಳಿ ಮನಸು ನಿರಾಳವಾದ ಅಮರ್ ಊಟ ಮಾಡಿ ಫೇಸ್ ಬುಕ್ ಲಾಗಿನ್ ಆಗಿ ಸ್ನೇಹಿತರ ಜೊತೆ ಚಾಟ್ ಮಾಡುತ್ತಿದ್ದಾಗ ಮಧುರ ಆನ್ಲೈನ್ ಬಂದದ್ದು ನೋಡಿ ಅವಳ ಜೊತೆ ಚಾಟ್ ಮಾಡೋಣ ಎಂದುಕೊಂಡು ಹಾಯ್ ಎಂದು ಟೈಪ್ ಮಾಡಿದ. ಎರಡು ನಿಮಿಷದ ನಂತರ ಹಾಯ್ ಅಮರ್ ಎಂದು ಮರುತ್ತರ ಬಂತು. ಅಬ್ಬಾ ಕನಿಷ್ಠ ಪಕ್ಷ ಮರುತ್ತರ ಕೊಟ್ಟಳಲ್ಲ. 


ಹೇಗಿದ್ದೀರ ಇವಾಗ? ಹುಷಾರಾಗಿ ಇದ್ದೀರಾ?ಹಾ ಅಮರ್ ಈಗ ಹುಷಾರಾಗಿ ಇದ್ದೇನೆ. ಫೋನ್ ಆಫ್ ನಲ್ಲಿ ಇಟ್ಟಿದ್ದೆ ಈಗ ಆನ್ ಮಾಡಿದಾಗ ನಿಮ್ಮಿಂದ ಮಿಸ್ಡ್ ಕಾಲ್ ಇತ್ತು. ಯಾವಾಗ ಫೋನ್ ಮಾಡಿದ್ರಿ?


ಸಂಜೆ ಮಾಡಿದ್ದೆ, ನಿಮ್ಮ ಫೋನ್ ಆಫ್ ಇತ್ತು ಎಂದು ಪ್ರೇಮ ಗೆ ಟ್ರೈ ಮಾಡಿದೆ ಅವಳೂ ಎತ್ತಲಿಲ್ಲ.


ಒಹ್ ಓಕೆ. ನೀವು ಅವಳಿಗೆ ಫೋನ್ ಮಾಡಿದಾಗ ನಾನೂ ಜೊತೆಯಲ್ಲೇ ಇದ್ದೆ. ನಾನೇ ಅವಳಿಗೆ ಬೈದೆ. ಅದಕ್ಕೆ ಅವಳು ಎತ್ತಲಿಲ್ಲ. ಅವಳು ಮತ್ತೆ ನಿಮಗೆ ಕಾಲ್ ಮಾಡಿದ್ಲ?


ಇಲ್ಲ ಮಧುರ ಅವಳಿಂದ ಮತ್ತೆ ಯಾವುದೇ ಕರೆ ಬಂದಿಲ್ಲ. ನೀವು ಹೇಗಿದ್ದೀರ ಎಂದು ಕೇಳೋಣ ಅಂತ ಮಾಡಿದ್ದೆ ಅಷ್ಟೇ.


ಥ್ಯಾಂಕ್ಸ್ ಅಮರ್. ಏನು ನನ್ನ ಬಗ್ಗೆ ಇಷ್ಟು ಕಾಳಜಿ ತೋರಿಸುತ್ತಿದ್ದೀರ?


ಹಾಗೇನೂ ಇಲ್ಲ ಮಧುರ. ಒಬ್ಬ ಒಳ್ಳೆಯ ಸ್ನೇಹಿತನಾಗಿ ಅಷ್ಟು ಮಾತ್ರ ಕೇಳಬಾರದ?


ಅಮರ್ ಬರೀ ಸ್ನೇಹದ ಭಾವನೆ ಇಂದ ಕೇಳಿದ್ದರೆ ಸಂತೋಷ...ಅದು ಬಿಟ್ಟು ಬೇರೆ ಏನಾದರೂ ಭಾವನೆ ಇದ್ದರೆ...


ಇಲ್ಲ ಮಧುರ ಬೇರೆ ಯಾವ ಉದ್ದೇಶದಿಂದಲೂ ಕೇಳಿಲ್ಲ. ಅದೇಕೋ ಗೊತ್ತಿಲ್ಲ ನಿಮ್ಮ ಸ್ನೇಹ ನನಗೆ ಬಹಳ ಆನಂದ ಕೊಡುತ್ತದೆ. ಅದಕ್ಕೆ ನಾನು ನಿಮಗೆ ಹತ್ತಿರ ಆಗ ಬಯಸುತ್ತಿದ್ದೇನೆ.


ಓಕೆ ಅಮರ್. ಮತ್ತೆ ಯಾವಾಗಾದರೂ ಬಿಡುವಿದ್ದಾಗ ಮಾತಾಡುತ್ತೇನೆ. ಈಗ ಮಲಗಬೇಕು. ಹಾ ಆಮೇಲೆ ಇನ್ನೊಂದು ವಿಷಯ ದಯವಿಟ್ಟು ನಾನು ನಿಮ್ಮ ಬಳಿ ಮಾತಾಡುತ್ತಿರುವ ವಿಷಯವನ್ನು ಪ್ರೇಮಗೆ ತಿಳಿಸಬೇಡಿ. ಆಮೇಲೆ ಅವಳು ತಪ್ಪಾಗಿ ಭಾವಿಸುತ್ತಾಳೆ.


ಆಯಿತು ಮಧುರ...ಒಂದು ವಿಷಯ ಕೇಳಲ? ಕೇಳಿ !!ನಿಮ್ಮನ್ನು ಮಧು ಎಂದು ಕರೆಯಬಹುದ?:) :) ಕರೆಯಬಹುದು....ಬೈ:) ಬೈ, ಟೇಕ್ ಕೇರ್     


ಅಬ್ಬಾ ಅಂತೂ ಸಾಯಂಕಾಲದಿಂದ ಒದ್ದಾಡುತ್ತಿದ್ದ ಮನಸಿಗೆ ಈಗ ಸಮಾಧಾನವಾಯಿತು. ಅವಳು ಹುಷಾರಾಗಿ ಇದ್ದಾಳೆ ಅಷ್ಟೇ ಸಾಕು. ಇನ್ನು ನೆಮ್ಮದಿಯಿಂದ ಮಲಗಬಹುದು

Rating
No votes yet