ನಾವು ಮತ್ತು ಸಾಹಿತ್ಯ - ಬೇಂದ್ರೆ ವಿಚಾರ

ನಾವು ಮತ್ತು ಸಾಹಿತ್ಯ - ಬೇಂದ್ರೆ ವಿಚಾರ

( ನಿನ್ನೆ ’ಅಕ್ಷರದಿಂದ ದೂರ’ - ಓಶೋ ವಿಚಾರ ಓದಿದ್ದಿರಿ ; ಇವತ್ತು ಇದನ್ನು ನೋಡಿ)
ಮನುಷ್ಯನಿಗೆ ಹೇಗೆ ದೇಹ , ಪ್ರಾಣ, ಮನಸ್ಸು , ಜ್ಞಾನ ಇದೆಯೋ ಹಾಗೆ ನುಡಿಗೂ ಇದೆ. ನದಿ ಪರ್ವತಗಳಿಂದಲೂ ಸಸ್ಯಾದಿ ಸಂಪತ್ತಿನಿಂದಲೂ ಕೂಡಿದ ಭೂಪ್ರದೇಶವು ಅದರ ದೇಹ. ಅಲ್ಲಿಯ ವಿವಿಧ ಪ್ರಾಣಿಗಳು ಅದರ ಪ್ರಾಣ. ಸಾಹಿತ್ಯಕಲಾಕೌಶಲ್ಯವೇ ಅದರ ಮನಸ್ಸು. ನಾಡು ದೇಹವಾದರೆ ಅಲ್ಲಿಯ ನುಡಿಯು ಅದರ ನಾಲಗೆ ಎನ್ನಬಹುದು. ನಾಲಗೆಯು ಮನವನ್ನು ತಿಳಿಸುವಂತೆ ಅಲ್ಲಿಯ ಮಾತು ವಾಙ್ಮಯದ ಸ್ಥಿತಿಗತಿಯನ್ನು ಸೂಚಿಸುಸುವದು. ಮಾತು ಕಳೆದುಕೊಂಡವರ ವಾಙ್ಮಯವು ಮೂಕರ ಸನ್ನೆಯಂತೆ ಗತವೈಭವದ ಕುರುಹು ಮಾತ್ರ . ಆಹಾರನಿದ್ರಾಭಯ ಮೈಥುನಾದಿ ವ್ಯವಹಾರದ ಮಟ್ಟಿಗೆ ಮಾತು ಉಳಿಸಿಕೊಂಡವರು ಮನುಷ್ಯರಂತೆ ನಟಿಸುವ ಪಶುಗಳು. ಅವರಿಗೆ ವಾಙ್ಮಯವು ಮನಸ್ಸಿನಂತೆ ಸಲ್ಲದ ತೊಡಕು. ವಾಙ್ಮಯದ ಸಂಸ್ಕಾರ ತಪ್ಪಿಸಿಕೊಂಡವರು ಮನದ ನೆಲೆಯಿಲ್ಲದೆ ಅಲೆದಾಡುವ ಹುಚ್ಚರು , ಮೂರ್ಖರು , ಹುಂಬರು.

’ಮಾತು ಜಾತಿಯನ್ನು ಹೇಳಿತು’ ; ಕನ್ನಡ ಜನ ಒಂದು ಜಾತಿ. ನಾಡು ಕನ್ನಡ , ನುಡಿ ಕನ್ನಡ , ಜನ ಕನ್ನಡ.

(ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದಲ್ಲಿ ಬೇಂದ್ರೆಯವರ ’ವಿಚಾರ ಮಂಜರಿ’ ಎಂಬ ಪುಸ್ತಕದಿಂದ)

------------------------------------
ಕಠಿಣ ಶಬ್ದಾರ್ಥ:
ವಾಙ್ಮಯ = ಸಾಹಿತ್ಯ ,
ಮೈಥುನ =ಸೆಕ್ಸ್

Rating
No votes yet