ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮನು

ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮನು

ಈ ಭೂಮಿ ಮೇಲೆ ಒಂದು ಹುಲ್ಲು ಸಹ ಆ ದೇವರ ಕೃಪೆ ಇಲ್ಲದೆ ಅಲ್ಲಾಡುವುದಿಲ್ಲ ಎಂದು ಭಾವಿಸುವ ಜನರು; ಜೀವನದಲ್ಲಿ ಎಲ್ಲ ಆಗು ಹೋಗುಗಳಿಗೆ ಪರಮಾತ್ಮನೇ ಕಾರಣ ಎನ್ನುತಾರೆ. ಜಗತ್ತಲ್ಲಿ ಏನೇ ಆದರು ಅವನೇ ಕಾರಣ, ಎಲ್ಲವು ಅವನ ಇಚ್ಛೆ ಎಂದು ಸದಾ ನುಡಿಯುತ್ತ ಸಮಾದಾನ ಮಾಡಿಕೊಳ್ಳುತಾರೆ ಅಥವಾ ಸಮಾದಾನ ಪಡಿಸುತ್ತಾರೆ. ನಾವು ನೆನೆದಂತೆ  ಆಗದೆ ಇದ್ದಾಗ "ಎಲ್ಲ ದೈವ ಇಚ್ಛೆ , ಅದೃಷ್ಟ ಇಲ್ಲ" ಎನ್ನುತ್ತಾ ಆದಂತೆ ಮುಂದುವರಿಯುತ್ತೇವೆ.ಹಿರಿಯರು ಏನೇ ಆದರು ಅದು ದೈವ ಸಂಕಲ್ಪ ಎನ್ನುತಾರೆ. ಉದಾರಹಣೆಗೆ - ಮಗು ಹುಟ್ಟಿದ ತಕ್ಷಣ ತಾವು ಬಯಸಿದ ಮಗು ಆದರೆ ಸಂತಸದಿಂದ ದೈವ ಕೃಪೆ ಎನ್ನುತಾರೆ, ತಾವು ಬಯಸಿದ್ದಕ್ಕೆ ವಿರುದ್ಧವಾದರೆ ಸಾಂತ್ವನದೊಂದಿಗೆ "ಎಲ್ಲ ದೇವರು ಮಾಡಿದಂಗೆ, ಏನು ಮಾಡೋಕೆ ಆಗೋಲ್ಲ" ಎನ್ನುತಾರೆ. ಆದ್ದರಿಂದ ಪ್ರಮುಖವಾಗಿ ಬಹಳ ಅಷ್ಟು ಜನ ಹೇಳೋದು ದೇವರು ಬರೆದಂತೆ ಆಗುತ್ತದೆ ಅಥವಾ ನಮ್ಮ ನಮ್ಮ ಅದೃಷ್ಟದಂತೆ  ನಡೆಯುತ್ತದೆ ಎಂದು. ಪ್ರತಿಯೊಂದು ವಿಷಯದಲ್ಲೂ ನಾವು ನಮ್ಮೆಲ್ಲರ ಪ್ರಯತ್ನದ ನಂತರ ನಂಬಿರೋದು ಆ ದೇವರ ಕೃಪೆ ಮತ್ತು ಅದೃಷ್ಟವನ್ನು. ನಾವು ಎಷ್ಟೇ ಪ್ರಯತ್ನಸಿದರು ನೆನೆದಂತೆ ಆಗದೆ ಇದ್ದಾಗ ಕೈ ಬಿಡುವ ಮುನ್ನೆ ದೇವರು ಮತ್ತು ಅದೃಷ್ಟದ ಮೇಲೆ ಹೊಣೆಯಾಕಿ, ಆಗುವುದೆಲ್ಲ ಒಳ್ಳೆಯುದಕ್ಕೆ ಎನ್ನುತ  ಮುಂದುವರಿಯುತ್ತೇವೆ.


 


ನಾನು ಹೇಳಬೇಕೆಂದಿರುವ ವಿಷಯ ಇಲ್ಲಿದೆ - ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮನು  ಎನ್ನುವ ಹಿರಿಯರು ಪ್ರೀತಿ ಪ್ರೇಮದ ವಿಷಯದಲ್ಲಿ ಮಾತ್ರ ಯಾಕೆ ಹುಡುಗ ಹುಡುಗಿಯರನ್ನು ದೂಷಣೆ ಮಾಡುತ್ತಾರೆ . ಹುಡುಗ ಹುಡುಗಿಯರ ಸ್ವಭಾವದ ಬಗ್ಗೆ ಕಿಂಚಿತ್ತು ಅರಿಯದೆ ಮನ ಬಂದಂತೆ ಮಾತಾಡುತ್ತಾರೆ. ಇನ್ನು ಅಂತರ ಜಾತಿ, ಮತ, ಭಾಷೆಗಳಾದರೆ ಹುಡುಗ ಹುಡುಗಿಯರನ್ನು ಜೊತೆಗೆ ಆ ಜಾತಿ ಮತಗಳಿಗೂ ಛಿಮಾರಿಯಕುತ್ತಾರೆ. ಹುಡುಗ ಯಾರು ಹುಡುಗಿಯಾರು ಅವರ ಬಗ್ಗೆ ಏನು ವಿಚಾರಿಸದೆ ನಿಂದಿಸೋಕ್ಕೆ  ನಿಲ್ಲುತ್ತಾರೆ . ಈ ವಿಷಯದಲ್ಲಿ ಹಿರಿಯರು ನೆನೆದಂತೆ ವಿರುದ್ಧವಾದಾಗ ದೇವರ ಮೇಲೆಯಾಗಲಿ ಅಥವಾ ಅದೃಷ್ಟದ ಮೇಲೆಯಾಗಲಿ ಹೇಳುವುದಿಲ್ಲ, ಇದಕ್ಕೆಲ ಹುಡುಗ ಹುಡುಗಿಯರೇ ಕಾರಣ ಎಂದು ನಿರ್ದರಿಸುತಾರೆ.


ಎಲ್ಲದಕ್ಕೂ ಕಾರಣನಾದ ಶ್ರೀ ಕೃಷ್ಣನು ಪ್ರೀತಿ ಪ್ರೇಮದ ವಿಷಯಕ್ಕೆ ಯಾಕೆ ಕಾರಣವಾಗಲಿಲ್ಲ ಎಂಬುದು ಇಲ್ಲಿ ಪ್ರಶ್ನೆ??


 


 



Rating
No votes yet

Comments