ಮಿಥುನ

ಮಿಥುನ

ಕವನ

 ಅವಳ ಪ್ರಮಾಣಬದ್ಧ ಬೆತ್ತಲೆಗೆ ಕರಗಿದ-

ಚಿತ್ರಕಾರ, ಅಗಮ್ಯದೆಡೆಗೆ ತುಡಿಯುತ್ತ,

ತ್ರಿಕೋನ,ವೃತ್ತಗಳ ಉನ್ಮತ್ತತೆಗೆ

ತಲೆಬಾಗಿ,ನಡುಗಿದ;

ತನ್ನೊಳಗಿನ ರೇಖೆ ದಿಕ್ಕು

ತೋಚಿದೆಡೆಗೆ ತುಯ್ಯುತ್ತಾ-

ತಾನೂ ಒಂದು ಆಕೃತಿಯಾಗುವ,

ಕತ್ತಲೆಯ ಬೆತ್ತಲೆಯೊಡನೆ

ಘಷಿ೵ಸಿ

ಧ್ಯಾನಸ್ಥವಾಗುವ ಪರಿಗೆ...