ಈ ಸೆಳೆತ...
ಕವನ
ಆವರಿಸಿದೆ ಬೇಸರದ ಧೂಮ, ಉಸಿರ ಬಿಗಿ ಹಿಡಿದ ನೋವು.
ಜೀವನದ ಲಯ, ಧಾಟಿ, ಉತ್ಸಾಹ ಎಲ್ಲವೂ ಹೊಡೆಯುತಿವೆ ಗೋತಾ…
ಎಲ್ಲೋ ತನ್ಮಯತೆಯ ಸೆಳೆತ…
ನಾನೆಂಬುದು ಸತ್ಯವೇ !?
ನನಗೆ ನನ್ನೊಳಗಿನ ನಾನು ಗೋಚರ, ಪರರಿಗೆ ಸ್ಪಷ್ಟ ಅಗೋಚರ…
ನೋವಿಗುಂಟೆ ಚರಮ ?
ಹವಣಿಸಿರುವೆ ನಾ ಚರಮಗೀತೆ ಹಾಡಲು.
ನೆಲ, ಜಲ, ವಾಯು, ಅಗ್ನಿಯಂತೆ ನೋವೆಂದೂ ಚಿರ…!!!
ಮತ್ತೂ… ತನ್ಮಯತೆಯತ್ತ ಸೆಳೆತ…