ಹೈಕಮಾಂಡ್ ಪ್ರತಿಷ್ಠೆ: ಲೋಫರ್ ರಾಜಕೀಯ!

ಹೈಕಮಾಂಡ್ ಪ್ರತಿಷ್ಠೆ: ಲೋಫರ್ ರಾಜಕೀಯ!

ಬರಹ


ಎಲೆಮರೆ ಕಾಯಂತೆ, ತಕ್ಕ 'ಮರ್ಯಾದೆ’ಯೊಂದಿಗೆ ಎಂಪಿ ಆಗಿದ್ದವರನ್ನು ಕಿತ್ತು ತಂದು, ಕೃತಕ ಸಿಎಂ ಪಟ್ಟಾಭಿಷೇಕ ಮಾಡಿ, ಎಂಪಿ ಸಿಎಂ ಅನ್ನು ವಿಧಾನಸಭೆಗೆ ಗೆಲ್ಲಿಸುವ ತಾಖತ್ ಇಲ್ಲದೆ, ಆ ಮನುಷ್ಯನನ್ನು, ಆನೆಯಮೇಲೆ ನಿಲ್ಲಿಸಿ ಅದ್ದೂರಿಯ ’ಅವಮಾನ’ ಮಾಡಿ, ಈಗ ಸಾಧಾರಣ ಎಂಎಲ್‌ಸಿಯಾಗಿ ತಳ್ಳಿದ್ದು, ಬೃಹತ್ ರಾಷ್ಟ್ರೀಯ ಪಕ್ಷದ ಹೈಕಮಾಂಡಿನ ಮಹತ್ ಸಾಧನೆ!
’ಗೌಡ’ ಎಂಬ ಹೆಸರು ಮಾತ್ರವನ್ನೇ, ಪಕ್ಷದ ಲಿಂಗಾಯತ ಕೊಬ್ಬಿನ ವಿರುದ್ಧ ಒಕ್ಕಲಿಗರನ್ನು ಎತ್ತಿಕಟ್ಟಲು ಹೋಗಿ, ಅಲ್ಲಿನ ಗುಂಪು’ಗೂಳಿ’ಗಳ ಗುಟರಿಗೆ ನಡುಗಿ ’ಶರಣರಿಗೆ’ ಶರಣಾದದ್ದು, ಪಕ್ಷದ ಹೈಕಮಾಂಡ್ ಪರಾಕ್ರಮ!
’ಬಿಜೆಪಿ ರಣೋತ್ಸವಕ್ಕೆ, ಕರ್ನಾಟಕ, ದಕ್ಷಿಣದ ಹೆಬ್ಬಾಗಿಲು’ ಎಂದು ಬೀಗಿದ್ದ ಪಕ್ಷದ ಕನಸಿಗೆ, ಕೋಟೆ ಹಿಂಬಾಗಿಲಿನ ಮತ್ತು ದಿಡ್ಡಿ ಬಾಗಿಗಳ ಮರ್ಮ-ವರ್ಮಗಳೇ ದುಃಸ್ವಪ್ನವಾದದ್ದು ವಿರ್ಯಾಸ.
ನಾವು ನೋಡುತ್ತಿರುವ ಮಾನಹೀನ ಜಾತಿ ರಾಜಕಾರಣ, ಬಿಜೆಪಿ ಪಕ್ಷದ ಕುರುಬ, ಕುಂಚಟಿಗ, ಪಂಚಮಸಾಲಿಯೇತ್ಯದಿಗಳ ಮುಸುಕಿನ ಗುದ್ದಾಟವೇ ಹೊರತು, ಆಯಾ ಮುಖಂಡರು, ಇಡೀ ರಾಜ್ಯದ ಗೌಡ, ಲಿಂಗಾಯತ, ಕುರುಬ ಇತ್ಯಾದಿ ಜಾತಿಗಳ ಪ್ರತಿನಿಧಿಗಳಲ್ಲ ಎನ್ನುವುದನ್ನು ಮಹಾಜನತೆ ನೆನಪಿಟ್ಟುಕೊಳ್ಳಬೇಕು!

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet