ಹೆಣ್ಣೇ ಅಲ್ಲವೇ?

ಹೆಣ್ಣೇ ಅಲ್ಲವೇ?

ಕವನ

ಹೆಣ್ಣೇ ಅಲ್ಲವೇ?


ತೂಗುವ ತೊಟ್ಟಿಲು, ಒಳಗಿರುವ ಕಂದ
ಹೆಣ್ಣೆಂದೋ ಗಂಡೆಂದೋ ತೂಗುವುದಿಲ್ಲ ತಂಗಿ.
ಬೀಸಿ ಬಂದು ಮಗುವಿಗೆ ಉಯ್ಯಾಲೆ ಆಡಿಸುವ
ಗಾಳಿಗೂ ಲಿಂಗಬೇದ ತಿಳಿಯದು.
ಪುಟ್ಟ ತುಟಿಯ ನಗುವಿಗೆ ಕಾತರಿಸುವ
ಆ ಮಡಿಲಿಗಿಲ್ಲದ ಮಮತೆಯ ಮುಜುಗರ,
ಹುಟ್ಟುವುದು ಹೆಣ್ಣೋ ಗಂಡೋ ಎಂದು
ಹೆಣ್ಣಾದ ನಿನಗೇ ಏಕೆ ಹೇಳು?
ಹೆತ್ತವರುಗಳು ಭಾರವೆಂದು ವೃದ್ದಾಶ್ರಮಕ್ಕೆ ದೂಡಿ
ನಿರಾಳವಾಗುವ ಕುಲದೀಪಕರು ಹುಟ್ಟುತ್ತಿರುವ ಕಾಲವಿದು.
ಮಿನುಗುವ ದೀಪಿಕೆಯೊಬ್ಬಳ ಹಡೆದು ನೋಡು
ದಿನವೂ ಅಂಗಳದಲ್ಲಿ ನಕ್ಷತ್ರಗಳ ಬಾನಿಹುದು.
ಪೂಜಿಸುವುದು ಇಬ್ಬರಿಗೂ ಆದರೂ,
ಶಿವನಿಗಿರುವ ಕಿಮ್ಮತ್ತು ಪಾರ್ವತಿಗಿಲ್ಲವೇ?
ಶೂರನೊಬ್ಬ ಎಷ್ಟೇ ಶೂರನಿದ್ದರೂ,
ಆ ಶೂರನಿಗೆ ಹಡೆದವಳು ಹೆಣ್ಣೇ ಅಲ್ಲವೇ?


ರಾಜೇಂದ್ರಕುಮಾರ್ ರಾಯಕೋಡಿ


Copyright©

Comments